Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಅಮರನಾಥ ಯಾತ್ರೆ: ಮೇಘ ಸ್ಫೋಟಕ್ಕೆ ಬಾಲಕ, ಬಾಲಕಿ ಬಲಿ

Amarnath-Yatra-800ಶ್ರೀನಗರ: ಮಧ್ಯ ಕಾಶ್ಮೀರದ ಗುಂದರ್‌ಬಾಲ್‌ ಜಿಲ್ಲೆಯಯಲ್ಲಿನ ಅಮರನಾಥ ಯಾತ್ರೆಯ ಮೂಲ ಶಿಬಿರಕ್ಕೆ ಸಮೀಪದ ಬಾಲ್ತಾಲ್‌ ಎಂಬಲ್ಲಿ ಉಂಟಾದ ದಿಢೀರ್‌ ಮೇಘ ಸ್ಫೋಟಕ್ಕೆ ಇಬ್ಬರು ಅಪ್ರಾಪ್ತ ವಯಸ್ಸಿನವರು ಬಲಿಯಾಗಿದ್ದು ಇತರ 10 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು ಶನಿವಾರ ನಸುಕಿನ ವೇಳೆ 13 ವರ್ಷದ ಓರ್ವ ಬಾಲಕಿ ಮತ್ತು 12 ವರ್ಷದ ಓರ್ವ ಬಾಲಕನ ಶವ ಪತ್ತೆಯಾಗಿದೆ. ಸುಮಾರು 10 ಮಂದಿ ಗಾಯಗೊಂಡಿದ್ದಾರೆ. 11 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೇಘ ಸ್ಫೋಟವು ಶುಕ್ರವಾರ ರಾತ್ರಿ ಸಂಭವಿಸಿತ್ತು. ಇದರಿಂದಾಗಿ ಬಾಲ್ತಾಲ್‌ ಸಮೀಪದ ಮೂಲ ಶಿಬಿರ ಪ್ರದೇಶದಲ್ಲಿ ನೆರೆ ಉಂಟಾಗಿ ಯಾತ್ರಿಕರ ಡೇರೆಗಳ ಒಳಗೆ ನೀರು ನುಗ್ಗಿತ್ತು. ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ ಒಡನೆಯೇ ಶಿಬಿರಾರ್ಥಿಗಳನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

No Comments

Leave A Comment