Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಸಿಆರ್‌ಪಿಎಫ್‌ ಕಟ್ಟಡಕ್ಕೆ ಬೆಂಕಿ: ಕಾನ್‌ಸ್ಟೆಬಲ್ ಸಾವು

krvc9f9vನವದೆಹಲಿ(ಪಿಟಿಐ): ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್‌) ಕಟ್ಟಡಕ್ಕೆ ಶನಿವಾರ ಬೆಂಕಿ ಹೊತ್ತಿಕೊಂಡಿದ್ದು ಘಟನೆಯಲ್ಲಿ ಒಬ್ಬ ಕಾನ್‌ಸ್ಟೆಬಲ್ ಮೃತಪಟ್ಟಿದ್ದಾರೆ. ಕಚೇರಿಯ ಹಲವು ದಾಖಲೆಗಳಿಗೆ ಹಾನಿಯಾಗಿದೆ.

ರಾಜಧಾನಿಯ ಆರ್ ಕೆ ಪುರಂನಲ್ಲಿರುವ ಸಿಆರ್‌ಪಿಎಫ್‌ನ ಕಟ್ಟಡದ ನಾಲ್ಕನೇ ಮಹಡಿಯಲ್ಲಿನ ಇಡಿಪಿ ಕೇಂದ್ರಕ್ಕೆ ಬೆಳಗಿನಜಾವ 3ಕ್ಕೆ ಬೆಂಕಿ ಬಿದ್ದಿದೆ. ಕಟ್ಟಡದಲ್ಲಿ ಮಲಗಿದ್ದ ಸಿಆರ್‌ಪಿಎಫ್‌ನ ಕಾನ್‌ಸ್ಟೆಬಲ್ ಸಾವಿಗೀಡಾಗಿದ್ದಾರೆ. ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಕಿ ಕಾಣಿಸಿಕೊಂಡ ನಂತರ ಕಾನ್‌ಸ್ಟೆಬಲ್ ಅವರನ್ನು ರಕ್ಷಿಸಲು ಕರೆ ಮಾಡಲಾಗಿದ್ದು, ಆತನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

No Comments

Leave A Comment