Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಅಮೆರಿಕ; ಥಿಯೇಟರ್ ನೊಳಗೆ ಶೂಟೌಟ್; ಗನ್ ಮ್ಯಾನ್ ಸೇರಿ 3 ಬಲಿ

-louisianatheatre (2)ವಾಷಿಂಗ್ಟನ್: ಅಮೆರಿಕದ ಲೂಸಿಯಾನಾ ಚಿತ್ರಮಂದಿರದೊಳಗೆ ವ್ಯಕ್ತಿಯೊಬ್ಬ ಏಕಾಏಕಿ ಗುಂಡಿನ ದಾಳಿ ನಡೆಸಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದ ಘಟನೆ ಗುರುವಾರ ನಡೆದಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ಶೂಟೌಟ್ ನಂತರ ತನಗೆ ತಾನೇ ಗುಂಡು ಹೊಡೆದುಕೊಂಡು ಗನ್ ಮ್ಯಾನ್ ಸಾವನ್ನಪ್ಪಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಲೂಸಿಯಾನಾದ ಲಾಫಾಯೆಟ್ಟೆ ಥಿಯೇಟರ್ ನಲ್ಲಿ ಟ್ರೈನ್ ರೆಕ್ ಸಿನಿಮಾವನ್ನು ವೀಕ್ಷಿಸುತ್ತಿದ್ದ ವೇಳೆ 58 ವರ್ಷದ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದ. ಮೂರು ವರ್ಷದ ಹಿಂದೆ ಕೊಲೊರಾಡೊ ಸಿನಿಮಾ ಥಿಯೇಟರ್ ನಲ್ಲಿ ಗುಂಡಿನ ದಾಳಿ ನಡೆದ ಘಟನೆಯಲ್ಲಿ 12 ಮಂದಿ ಬಲಿಯಾಗಿದ್ದರು.

ಗಾಯಗೊಂಡವರ ಸ್ಥಿತಿ ಚಿಂತಾಜನಕವಾಗಿದೆ. ಗುಂಡಿನ ದಾಳಿ ನಡೆಸಿದವನ ಪರಿಚಯ ಗೊತ್ತಾಗಿದೆ. ಆದರೆ ತನಿಖೆಯ ಹಿನ್ನೆಲೆಯಲ್ಲಿ ಆತನ ಕುರಿತು ವಿವರ, ಹೆಸರು ಬಹಿರಂಗಪಡಿಸುವುದಿಲ್ಲ ಎಂದು ಲಾಫಾಯೆಟ್ಟೆ ಪೊಲೀಸ್ ಮುಖ್ಯಸ್ಥ ಜಿಮ್ ಕ್ರಾಫ್ಟ್ ತಿಳಿಸಿದ್ದಾರೆ.

No Comments

Leave A Comment