Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಕರಾಟೆಜೀವನಕ್ಕೆ ಸ್ಫೂರ್ತಿದಾಯಕ-ಲಯನ್ಸ್‌ಡೈರೆಕ್ಟರ್‌ಆರ್. ಮುರುಗನ್

Karate_1ಉಡುಪಿ :ಕರಾಟೆಜೀವನಕ್ಕೆ ಸ್ಫೂರ್ತಿದಾಯಕ. ಕರಾಟೆ‌ಎಂಬುವುದುದೈಹಿಕ ವ್ಯಾಯಾಮದಜೊತೆಗೆಜೀವರಕ್ಷಣಕಲೆಯೂ ಹೌದು.ಇದುಕ್ರೀಡಾ ಚಟುವಟಿಕೆಗಳಿಗೆ ಸ್ಫೂರ್ತಿದಾಯಕವೂ‌ಆಗಿದೆ.

ವಿದ್ಯಾರ್ಥಿಗಳೆಲ್ಲರೂ ಕರಾಟೆಪಟುಗಳಾಗಿರಿ ಎಂಬುದಾಗಿಲಯನ್ಸ್‌ಇಂಟರ್‌ನ್ಯಾಶನಲ್‌ಡೈರೆಕ್ಟರ್‌ಆರ್ ಮುರುಗನ್‌ಅಭಿಪ್ರಾಯಪಟ್ಟರು.ಅವರು ವಳಕಾಡು ಸಂಯುಕ್ತ ಪ್ರೌಢಶಾಲೆಯಲ್ಲಿ ನಡೆದ‌ಉಡುಪಿ ವಲಯಮಟ್ಟದಶಾಲೆಗಳ ಕರಾಟೆ ಸ್ಪರ್ಧೆ‌ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.ಲಯನ್ಸ್ ಸೆಂಟೆನೆರಿ ಸರ್ವಿಸ್ ಪ್ರೋಗ್ರಾಂನ ಅಂಗವಾಗಿಹಮ್ಮಿಕೊಂಡ ಸರಣಿಯೋಜನೆಯ ಮೊದಲ ಕಾರ್ಯಕ್ರಮ‌ಇದಾಗಿತ್ತು.

ಸಮಾರಂಭದ‌ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ನಗರಸಭಾ ಸದಸ್ಯೆಗೀತಾರವಿಶೇಟ್ ಸ್ಪರ್ಧಾಳುಗಳನ್ನು ಉತ್ತೇಜಿಸಿ ಪ್ರೋತ್ಸಾಹದ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿಲಯನೆಸ್ ಪ್ರೇಮಾ ಮುರುಗನ್, ಲಯನ್ಸ್‌ಜಿಲ್ಲಾಗವರ್ನರ್ ಶ್ರೀಧರ ಶೇಣವ, ಜಿಲ್ಲಾಕೋ-ಆರ್ಡಿನೇಟರ್ ನಿರುಪಮಾ ಶೆಟ್ಟಿ, ಲಯನ್ಸ್ ಮಾಜಿಗವರ್ನರ್‌ಸುರೇಶ್ ಪ್ರಭು, ಶಾಲಾ ಹಳೆ ವಿದ್ಯಾರ್ಥಿ ಸಂಘದ‌ಅಧ್ಯಕ್ಷಲಯನ್‌ಅಮೃತ್ ಶೆಣೈ, ಯಜ್ಞೇಶ್‌ಆಚಾರ್ಯ, ಎಸ್.ಡಿ.ಎಮ್.ಸಿ.ಉಪಾಧ್ಯಕ್ಷೆ ಲಯನ್‌ಇಂದುರಮಾನಂದ ಭಟ್, ಸದಸ್ಯರಾದಸದಾಶಿವ ರಾವ್, ಅನ್ನಪೂರ್ಣ ಐತಾಳ್, ಆಕಾಶ್‌ರಾವ್, ಉಮೇಶ್ ನಾಯಕ್ ಹಾಗೂ ಉಭಯ ಶಾಲಾ ಮುಖ್ಯೋಪಾಧ್ಯಾಯರು‌ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಾಯಿನಿ ನಿರ್ಮಲ ಬಿ.ಸ್ವಾಗತಗೈದರು.ತಾಲೂಕುದೈಹಿಕ ಶಿಕ್ಷಣ ಪರಿವೀಕ್ಷಕರಾದ ಬಸವರಾಜ್ ವಿಷಯ ಪ್ರಸ್ಥಾವನೆಗೈದರು. ಶಾಲಾ ದೈಹಿಕ ಶಿಕ್ಷಕ ಸುಭಾಸ್‌ಧನ್ಯವಾದವನ್ನು ನೀಡಿದರು. ವಿದ್ಯಾರ್ಥಿನಚಿಕೇತಮತ್ತುನಮೃತಾಕಾರ್ಯಕ್ರಮ ನಿರ್ವಹಿಸಿದರು. ಈ ಕರಾಟೆ ಸ್ಫರ್ಧೆಯಲ್ಲಿ 50ಶಾಲೆಗಳ200ಸ್ಪರ್ಧಾಳುಗಳು,ಶಿಕ್ಷಕರುಮತ್ತುತೀರ್ಪುಗಾರರು ಭಾಗವಹಿಸಿದ್ದರು.

 

No Comments

Leave A Comment