Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ರೈತರ ಆತ್ಮಹತ್ಯೆಗೆ ಡ್ರಗ್ಸ್, ಪ್ರೇಮ ವೈಫಲ್ಯ ಕಾರಣವಂತೆ! ಕೃಷಿ ಸಚಿವ

radhamohansinghನವದೆಹಲಿ: ರೈತರ ಆತ್ಮಹತ್ಯೆಗೆ ಲವ್ ಅಫೇರ್, ಡ್ರಗ್ಸ್, ವರದಕ್ಷಿಣೆ, ನಪುಂಸಕತ್ವ ಕಾರಣವಂತೆ…ಹೀಗೆ ವಿವಾದಾತಾದ್ಮಕ, ಆಘಾತಕಾರಿ ಲಿಖಿತ ಉತ್ತರ ನೀಡಿದವರು ಬೇರಾರು ಅಲ್ಲ ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್!

ಹೌದು ಲಲಿತ್ ಗೇಟ್, ವ್ಯಾಪಂ ಹಗರಣಗಳ ಆರೋಪದಿಂದ ತತ್ತರಿಸಿಹೋಗಿರುವ ಆಡಳಿತಾರೂಢಾ ಕೇಂದ್ರ ಸರ್ಕಾರಕ್ಕೆ ಇದೀಗ ಕೇಂದ್ರ ಕೃಷಿ ಸಚಿವರು ನೀಡಿರುವ ಉತ್ತರ ಮತ್ತಷ್ಟು ಮುಜುಗರಕ್ಕೆ ಸಿಲುಕಿಸಿದೆ.

ದೇಶದಲ್ಲಿ ಕಳೆದ ವರ್ಷ 1,400ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದಕ್ಕೆ ಲವ್ ಅಫೇರ್ ಅಥವಾ ನಪುಂಸಕತ್ವದ ಕಾರಣದಿಂದ ಸಾವಿಗೆ ಶರಣಾಗಿದ್ದಾರೆ ಎಂದು ಸಿಂಗ್ ಶುಕ್ರವಾರ ಲಿಖಿತ ಉತ್ತರ ನೀಡುವ ಮೂಲಕ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ದೇಶದಲ್ಲಿ ಭಾರೀ ಪ್ರಮಾಣದಲ್ಲಿ ರೈತರು ಸಾವನ್ನಪ್ಪುತ್ತಿರುವುದಕ್ಕೆ ಕಾರಣ ಏನು ಎಂಬ ಪ್ರಶ್ನೆಗೆ, ಕೃಷಿ ಸಚಿವ ಸಿಂಗ್ ರಾಜ್ಯಸಭೆಯಲ್ಲಿ ನೀಡಿರುವ ಲಿಖಿತ ಉತ್ತರ ಹೀಗಿದೆ, ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯುರೋ ದಾಖಲೆಗಳ ಪ್ರಕಾರ ರೈತರ ಆತ್ಮಹತ್ಯೆಗೆ ಕೌಟುಂಬಿಕ ಸಮಸ್ಯೆಗಳು ಸೇರಿದಂತೆ ಅನಾರೋಗ್ಯ, ಡ್ರಗ್ಸ್, ಲೈವ್ ಅಫೇರ್ಸ್ ಮತ್ತು ನಪುಂಸಕತ್ವ ಕಾರಣ ಎಂದು ತಿಳಿಸಿದ್ದಾರೆ!

ಆದರೆ ಸಾಲದಿಂದಲೂ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವುದು ಕೂಡಾ ಒಂದು ಕಾರಣ ಎಂದು ಸಚಿವರು ಈ ಸಂದರ್ಭದಲ್ಲಿ ಒಪ್ಪಿಕೊಂಡಿದ್ದಾರೆ. ರೈತರ ಆತ್ಮಹತ್ಯೆ ಕುರಿತಂತೆ ಈ ರೀತಿ ಲಿಖಿತ ಕಾರಣ ನೀಡಿದ ಕೃಷಿ ಸಚಿವರ ವಿರುದ್ಧ ಜೆಡಿಯು ತೀವ್ರ ವಾಗ್ದಾಳಿ ನಡೆಸಿದೆ.

ರೈತರ ಆತ್ಮಹತ್ಯೆ ಬಗ್ಗೆ ಈ ರೀತಿಯಲ್ಲಿ ಬಾಲಿಶ ಕಾರಣಗಳನ್ನು ಬಿಜೆಪಿ ಹೊರತುಪಡಿಸಿ ಬೇರೆ ಯಾವುದೇ ಪಕ್ಷಗಳು ನೀಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ವಕ್ತಾರ, ಹಿರಿಯ ನಟ ರಾಜ್ ಬಬ್ಬರ್ ಕಿಡಿಕಾರಿದರು.

No Comments

Leave A Comment