Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಎರಡು ಬಾರಿ ಮದ್ವೆಯಾಗಲಿದ್ದಾರೆ ದಿನೇಶ್ ಕಾರ್ತಿಕ್ ಮತ್ತು ದೀಪಿಕಾ ಪಳ್ಳಿಕ್ಕಲ್

Dineshಮುಂಬೈ : ಭಾರತದ ಕ್ರಿಕೆಟ್ ಟೀಂನ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಮತ್ತು ಸ್ಕ್ವಾಶ್ ಆಟಗಾರ್ತಿ ದೀಪಿಕಾ ಪಳ್ಳಿಕ್ಕಲ್ ಮದುವೆಯಾಗುತ್ತಿದ್ದಾರೆ. ಅದೂ ಎರಡು ಬಾರಿ.

ಅದು ಹೇಗೆ ಅಂತೀರಾ? ದಿನೇಶ್ ಕಾರ್ತಿಕ್ ಹಿಂದೂ ಧರ್ಮಕ್ಕೆ ಸೇರಿದವನು. ದೀಪಿಕಾ ಕೇರಳದ ಕ್ರಿಶ್ಚಿಯನ್ ಕುಟುಂಬದವಳು. ಹೀಗಿರುವಾಗ ಎರಡೂ ಧರ್ಮದವರ ರೀತಿಯಂತೆ ಎರಡು ಬಾರಿ ಮದುವೆಯಾಗಲು ಈ ಜೋಡಿ ತೀರ್ಮಾನಿಸಿದೆ.

ದಿನೇಶ್ ಮತ್ತು ದೀಪಿಕಾ ಅಗಸ್ಟ್ 18 ರಂದು ಕ್ರೈಸ್ತ ಧರ್ಮದ ರೀತಿಯಲ್ಲಿ ವಿವಾಹವಾಗಿದ್ದು, ಅಗಸ್ಟ್  20ರಂದು  ತೆಲುಗು -ನಾಯ್ಡು ರೀತಿಯಲ್ಲಿ ವಿವಾಹ ಸಮಾರಂಭ ನಡೆಯಲಿದೆ.

ಈ ಎರಡೂ ರೀತಿಯ ವಿವಾಹವು ಚೆನ್ನೈನಲ್ಲೇ ನಡೆಯಲಿದೆ ಎಂದು ದೀಪಿಕಾಳ ಅಪ್ಪ ಸಂಜೀವ್ ಪಳ್ಳಿಕ್ಕಲ್ ಮಾಧ್ಯಮದವರಲ್ಲಿ ಹೇಳಿದ್ದಾರೆ.

ದೀಪಿಕಾ ಮತ್ತು ದಿನೇಶ್ 2013 ಫೆಬ್ರವರಿ ತಿಂಗಳಲ್ಲಿ ಪರಸ್ಪರ ಭೇಟಿಯಾಗಿದ್ದರು. ಇದಾದ ನಂತರ ದಿನೇಶ್ ತನ್ನ ಪತ್ನಿ ನಿಖಿತಾಗೆ ಡೈವೋರ್ಸ್ ನೀಡಿದ್ದರು. ನಿಖಿತಾ, ದಿನೇಶ್‌ರ ಬಾಲ್ಯಕಾಲ ಗೆಳತಿಯೂ ಆಗಿದ್ದರು.

ಇದಾದನಂತರ ದೀಪಿಕಾ ಮತ್ತು ದಿನೇಶ್ 2013ರಲ್ಲಿ ವಿವಾಹ ನಿಶ್ಚಯ ಮಾಡಿಕೊಂಡಿದ್ದು, 2 ವರುಷಗಳ ನಂತರ ಮದುವೆಯಾಗುತ್ತಿದ್ದಾರೆ.

No Comments

Leave A Comment