Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಸಂಸತ್ ನಲ್ಲಿ ಲಲಿತ್ ಗೇಟ್, ವ್ಯಾಪಂ ಕೋಲಾಹಲ; ಸ್ಪೀಕರ್ ಕೆಂಡಾಮಂಡಲ

modi-parliameನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನದ 2ನೇ ದಿನವಾದ ಬುಧವಾರವೂ ಲಲಿತ್ ಮೋದಿ ಮತ್ತು ವ್ಯಾಪಂ ಹಗರಣದ ಕುರಿತಂತೆ ಲೋಕಸಭೆ, ರಾಜ್ಯಸಭೆ ಸೇರಿ ಉಭಯ ಸದನಗಳಲ್ಲೂ ಪ್ರತಿಪಕ್ಷಗಳು ಕೋಲಾಹಲ ಎಬ್ಬಿಸಿದವು.

ನಾವು ಎಲ್ಲಾ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಸಿದ್ದ ಎಂದು ರಾಜ್ಯಸಭೆ ವಿಪಕ್ಷ ನಾಯಕ ಅರುಣ್ ಜೇಟ್ಲಿ ಹೇಳಿದರೂ ಕಾಂಗ್ರೆಸ್, ಸಿಪಿಎಂ ಸೇರಿದಂತೆ ವಿಪಕ್ಷಗಳು ತೀವ್ರ ಗದ್ದಲ ನಡೆಸಿದವು. ಇದರಿಂದಾಗಿ ಸಭಾಪತಿ ಕಲಾಪವನ್ನು 15 ನಿಮಿಷಗಳ ಕಾಲ ಮುಂದೂಡಿದರು.

ವ್ಯಾಪಂ ಹಗರಣ ಕೇವಲ ರಾಜ್ಯಕ್ಕೆ ಸಂಬಂಧಿಸಿದ್ದಲ್ಲ, ಅದರಲ್ಲಿ ನಿಗೂಢವಾಗಿ ಸಾವನ್ನಪ್ಪಿದವರು ಬೇರೆ, ಬೇರೆ ರಾಜ್ಯಗಳಿಗೆ ಸಂಬಂಧಿಸಿದವರಿದ್ದಾರೆ. ಹಾಗಾಗಿ ರಾಜ್ಯಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಲೇಬೇಕು ಎಂದು ಬಿಎಸ್ಪಿ ವರಿಷ್ಠೆ ಮಾಯಾವತಿ ಆಗ್ರಹಿಸಿದರು. ಸುಷ್ಮಾ, ವಸುಂಧರಾ ರಾಜೇ, ಶಿವರಾಜ್ ಸಿಂಗ್ ಚೌಹಾಣ್ ರಾಜೀನಾಮೆ ಕೊಡಬೇಕೆಂದು ಕಾಂಗ್ರೆಸ್ ಸಂಸದರು ಪಟ್ಟು ಹಿಡಿದರು.

ಕಾಂಗ್ರೆಸ್ ಆಡಳಿತದ 7 ಮಂದಿ ಸಚಿವರು, ಮುಖಂಡರ ವಿರುದ್ಧ ಆರೋಪಗಳಿವೆ, ಅವರೆಲ್ಲರೂ ರಾಜೀನಾಮೆ ಕೊಡುತ್ತಾರಾ? ಎಂದು ವೆಂಕಯ್ಯ ನಾಯ್ಡು ಖಾರವಾಗಿ ಪ್ರಶ್ನಿಸಿದರು. ಸದನದಲ್ಲಿ ಚರ್ಚೆ ಮಾಡಿ, ನಿರ್ಧಾರಕ್ಕೆ ಬರೋಣ. ದಯವಿಟ್ಟು ಕಲಾಪವನ್ನು ಸುಗಮವಾಗಿ ನಡೆಯಲು ಬಿಡಿ ಎಂದು ನಾಯ್ಡು ಪ್ರತಿಪಕ್ಷ ಸದಸ್ಯರಲ್ಲಿ ಮನವಿ ಮಾಡಿಕೊಂಡರು. ಪ್ರತಿಪಕ್ಷಗಳ ಕೋಲಾಹಲದಿಂದಾಗಿ ರಾಜ್ಯಸಭೆಯ ಕಲಾಪವನ್ನೂ ಸಭಾಪತಿ 2ಗಂಟೆವರೆಗೆ ಮುಂದೂಡಿದರು.

ಲೋಕಸಭೆಗೆ ಕಪ್ಪುಪಟ್ಟಿ ಧರಿಸಿ ಬಂದ ಕಾಂಗ್ರೆಸ್ ಸದಸ್ಯರು:
ಲೋಕಸಭೆಯ ಕಲಾಪದಲ್ಲಿಯೂ ಲಲಿತ್ ಮೋದಿ ಮತ್ತು ವ್ಯಾಪಂ ಹಗರಣ ಪ್ರತಿಧ್ವನಿಸಿತು. ಕಾಂಗ್ರೆಸ್ ಸದಸ್ಯರು ಕಪ್ಪುಪಟ್ಟಿಯನ್ನು ಧರಿಸಿ ಆಗಮಿಸಿದ್ದರು. ಇದಕ್ಕೆ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಆಕ್ಷೇಪ ವ್ಯಕ್ತಪಡಿಸಿದರು. ಆದರೆ ತೀವ್ರ ಕೋಲಾಹಲದ ಹಿನ್ನೆಲೆಯಲ್ಲಿ ಕಲಾಪವನ್ನು ಮಧ್ಯಾಹ್ನ 2ಗಂಟೆವರೆಗೆ ಮುಂದೂಡಿದರು.

ಸಂಸದರು ಶಿಸ್ತನ್ನು ಅನುಸರಿಸದಿದ್ದರೆ ಸಂಸದರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸ್ಪೀಕರ್ ಮಹಾಜನ್ ಎಚ್ಚರಿಕೆ ನೀಡಿದ್ದರು.

ಸಂಸತ್ ಹೊರಗೆ ಎನ್ಎಸ್ ಯುಐ ಪ್ರತಿಭಟನೆ:
ಲಲಿತ್ ಗೇಟ್ ಮತ್ತು ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನ ಎನ್ ಎಸ್ ಯುಐ ಘಟಕ ಸಂಸತ್ ಹೊರಗೆ ಭಾರೀ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನಾಕಾರರನ್ನು ಭದ್ರತಾ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.

No Comments

Leave A Comment