Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಸರಕಾರಿ ಪ್ರೌಡ ಶಾಲೆ ಉದ್ಯಾವರ, ವಿದ್ಯಾರ್ಥಿ ಯುವ ಸಂಸತ್ ಉದ್ಘಾಟನೆ

PRESS_Nಉಡುಪಿ:ಶಾಲಾ ಯುವ ಸಂಸತ್ ಮಕ್ಕಳ ವಿದ್ಯಾಭ್ಯಾಸದ ಅವಧಿಯಲ್ಲೇ ಪ್ರಜಾಪ್ರಭುತ್ವದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸುವುದು. ಮಕ್ಕಳಿಗೆ ನಾಯಕತ್ವದ ತರಬೇತಿ ದೊರೆಯುವುದು.

ಪ್ರತೀ ವರ್ಷ ಜಿಲ್ಲಾ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಯುವ ಸಂಸತ್ ಬಗ್ಗೆ ತರಬೇತಿ ಭೇಟಿ ನೀಡಿ ರಾಜ್ಯ ಮಟ್ಟಕ್ಕೆ ಕರೆದುಕೊಂಡು ಹೋದಾಗ ನಮ್ಮ ಶಾಲೆಯ ವಿದ್ಯಾರ್ಥಿಗಳು 1ರಿಂದ 4ನೇ ಸ್ಥಾನ ಪಡೆದಿದ್ದಾರೆ. ನೀವೂ ಇದರಲ್ಲಿ ಭಾಗವಹಿಸಿರಿ. ಈ ವರ್ಷ 100% ಫಲಿತಾಂಶ ಬಂದ ಜಿಲ್ಲೆಯ 21ಶಾಲೆಗಳಲ್ಲಿ ನಿಮ್ಮ ಶಾಲೆಯೂ ಒಂದಾಗಿದೆ. ಇದು ನಮಗೆ ಸಂತೋಷವೆನಿಸಿದೆ. ಈ ವರ್ಷವೂ 100% ಫಲಿತಾಂಶ ಬರಲಿ, ಅದಕ್ಕಾಗಿ ಪ್ರಯತ್ನಿಸಿರಿ ಎಂದು ಯುವ ಸಂಸತ್ ಉದ್ಘಾಟನೆ ಮಾಡಿದ ಸಮಾಜ ವಿಜ್ಞಾನ ವಿಷಯ ಪರಿವೀಕ್ಷಣಾಧಿಕಾರಿಯವರಾದ ವೆಂಕಟೇಶ್ ನಾಯಕ್ ರವರು ಹೇಳಿದರು. ಯುವ ಸಂಸತ್‌ನ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಉತ್ತಮವಾಗಿ ಹೊಂದಿಕೊಂಡು ಶಾಲಾ ಕಾರ್ಯದಲ್ಲಿ ಭಾಗವಹಿಸಬೇಕು.

ವಿರೋಧ ಪಕ್ಷದವರು ವಿರೋಧಿಸುವುದನ್ನೇ ರೂಢಿಸಿಕೊಳ್ಳಬಾರದೆಂದು ಸಭಾಧ್ಯಕ್ಷರಾದ ಉದ್ಯಾವರ ನಾಗೇಶ್ ಕುಮಾರ್‌ರವರು ತಿಳಿಸಿದರು.

ಸರಕಾರಿ ಶಾಲೆ ಎಂದರೆ ಕೀಳಿರಿಮೆ ಬೇಡ. ಈಗಿನ ರಾಜಕಾರಣಿಗಳಲ್ಲಿ ಹಲವಾರು ಮಂದಿ ಸರಕಾರಿ ಶಾಲೆಯಲ್ಲೇ ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ನೀವು ಯುವ ಸಂಸತ್‌ನಲ್ಲಿ ಉತ್ತಮ ನಾಯಕರಾಗಿ ಕೆಲಸ ನಿರ್ವಹಿಸಿ, ಭಾವಿ ಪ್ರಜಾಪ್ರಭುತ್ವ ಸರಕಾರದ ಪ್ರತಿನಿಧಿಗಳಾಗಿ ಎಂದು ಮುಖ್ಯ ಅತಿಥಿಗಳಾದ ಉಪನ್ಯಾಸಕರಾದ ದಿನೇಶ್ ಕುಮಾರ್‌ರವರು ಹೇಳಿದರು.

ಶಾಲಾ ಹಿರಿಯ ಶಿಕ್ಷಕಿ ದಯಾವತಿಯವರು ಸಭಾಪತಿ ದಿವ್ಯಾಳಿಗೆ ಪ್ರಮಾಣ ವಚನ ಭೋಧಿಸಿದರು. ಸಭಾಪತಿ ದಿವ್ಯಾ, ಶಾಲಾ ನಾಯಕ ಶ್ರೇಯಸ್, ಉಪ ನಾಯಕರಾದ ಪ್ರತ್ಯಕ್ಷ್, ವಿರೋಧ ಪಕ್ಷದ ನಾಯಕಿ ರೇಣುಕ ತಮ್ಮನ್ನು ಆಯ್ಕೆ ಮಾಡಿದ ಮತದಾರ ಭಾಂದವರಾದ ವಿದ್ಯಾರ್ಥಿಗಳಿಗೆ ಕೃತಜ್ಞತಾ ಭಾಷಣ ಮಾಡಿದರು.

ಪ್ರಾಸ್ತಾವಿಕ ಮಾತಿನೊಂದಿಗೆ ಸರ್ವರನ್ನು ಶಿಕ್ಷಕಿ ಜಯ ತಂತ್ರಿ ಕೆ. ಸ್ವಾಗತಿಸಿದರು. ಶಿಕ್ಷಕಿ ಶಕುಂತಳಾ ಧನ್ಯವಾದವನ್ನಿತ್ತರೆ, ದೈಹಿಕ ಶಿಕ್ಷಕ ರವೀಂದ್ರ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

No Comments

Leave A Comment