Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಹಟ್ಟಿಯೊಳಗೊಂದು ಹಿಂಡಿಯ ತುಲಾಭಾರ!

Tulaಬ್ರಹ್ಮಾವರ : ತುಲಾಭಾರ ನಡೆಯುವುದನ್ನು ಕೇಳಿದ್ದೇವೆ. ಹಟ್ಟಿಯೊಳಗೂ ತುಲಾಭಾರ ನಡೆಯುವುದನ್ನು ಕೇಳಿದ್ದೀರಾ? ಅದೂ ಸಾಮಾನ್ಯ ಹಟ್ಟಿಯಲ್ಲ, ಸಾವಿರ ಅನಾಥ ಗೋವುಗಳ ಹಟ್ಟಿ.

ಸಾಮಾನ್ಯವಾಗಿ ಎಲ್ಲಾ ಆಚರಣೆಗಳೂ ಒಂದಿಷ್ಟು “ಸೋ ಕಾಲ್ಡ್‌ ಪ್ರತಿಷ್ಠಿತ’ ಜನರಿಗೆ ಭರ್ಜರಿ ಊಟ ಕೊಡಿಸುವುದರಲ್ಲಿ ಪರ್ಯವಸಾನವಾಗುತ್ತದೆ. ಉಡುಪಿಯ ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಕಿಣಿಯವರು ಹುಟ್ಟುಹಬ್ಬವನ್ನು ಆಚರಿಸುವುದು ಇದೇ ಮೊದಲೇನಲ್ಲ. ಅವರೂ ಭರ್ಜರಿ ಊಟ ಕೊಡಿಸುತ್ತಿದ್ದರು. ಆದರೆ ಈ ಬಾರಿ ನೀಲಾವರ ಗೋಶಾಲೆಯಲ್ಲಿ ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡರು.

ಕಿಣಿ ಬಂಧು ಬಳಗದವರು ಮುಂಚಿತವಾಗಿ ಆಗಮಿಸಿ ಹಟ್ಟಿ ತೊಳೆದು ದನಗಳಿಗೆ ಸ್ನಾನ ಮಾಡಿಸಿ ತನ್ನ ಸಣ್ಣ ವಯಸ್ಸಿನಲ್ಲಿ ಮನೆಯಲ್ಲಿ ಮಾಡಿದ ಕೆಲಸದ ನೆನಪನ್ನು ಮೆಲುಕು ಹಾಕಿಕೊಂಡರು. ಅವರು ಒಂದು ಗೋದಾನ ಸೇವೆ ಮಾಡಬೇಕೆಂದು ನಿಶ್ಚಯಿಸಿದ್ದರೆ ಆಗಮಿಸಿದ ಬಂಧು ಬಳಗದವರು ಸ್ವಯಂ ಇಚ್ಛೆಯಿಂದ ಇನ್ನೂ ಮೂರು ಗೋದಾನ ಸೇವೆ ನಡೆಸಿದರು. ಕಿಣಿಯವರು ದನಗಳ ಎದುರೇ ಹಿಂಡಿಯಿಂದ (ಪಶು ಆಹಾರ) ಮಕ್ಕಳೊಂದಿಗೆ ತುಲಾಭಾರ ನಡೆಸಿಕೊಂಡು ದನಗಳಿಗೆ ಹಿಂಡಿಯನ್ನು ಹಂಚಿದರು. ಆತ್ಮೀಯರು, ಸ್ನೇಹಿತರು, ಬಂಧುಗಳು, ಮಟಪಾಡಿಯ ವಿಜಯ ಬಾಲನಿಕೇತನದ ಮಕ್ಕಳು, ಗೋಶಾಲೆಯ ಎಲ್ಲಾ ಕಾರ್ಮಿಕರಿಗೆ ಭರ್ಜರಿ ಊಟ ಕೊಟ್ಟರು.

“ನಮ್ಮ ಜೊತೆ ಬಂದವರು ಇಲ್ಲಿ ಸಾವಿರ ದನಗಳು ಸಾವಿರ ಲೀಟರ್‌ ಹಾಲು ಕೊಡುತ್ತವೆ ಎಂದು ತಿಳಿದಿದ್ದರು. ಇಲ್ಲಿ ನೋಡಿದರೆ ಸಾವಿರದಲ್ಲಿ ಹತ್ತು ದನಗಳೂ ಹಾಲು ಕೊಡುವ ಸ್ಥಿತಿಯಲ್ಲಿಲ್ಲ. ಇಂತಹ ದನಗಳ ಮಧ್ಯೆ ಹುಟ್ಟು ಹಬ್ಬ ಆಚರಿಸಿಕೊಂಡದ್ದು ನನ್ನ ಮನಸ್ಸಿಗೆ ಅತೀವ ಸಂತೃಪ್ತಿ ತಂದಿದೆ’ ಎಂದು ಕಿಣಿ ಹೇಳುತ್ತಾರೆ. “ನಾವು ಕ್ಷೀಣವಾಗಿದ್ದರೂ ಪರ್ವಾಗಿಲ್ಲ. ಇಲ್ಲಿ ತುಲಾಭಾರ ಮಾಡುವವರು ಸಾಕಷ್ಟು ದಪ್ಪವಾದರೆ ಸಾಕು’ ಎಂದು ಹಸುಗಳ ಮನಸ್ಸು ಹೇಳುವಂತಿತ್ತು

No Comments

Leave A Comment