Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

73 ನಕ್ಸಲೀಯರ ತಲೆಗೆ 8.69 ಕೋಟಿ ರೂ. ಬಹುಮಾನ ಘೋಷಿಸಿದ ಜಾರ್ಖಂಡ್

CPI-Mರಾಂಚಿ: ಜಾರ್ಖಂಡ್ ನಲ್ಲಿ ನಕ್ಸಲೀಯರು ಅಟ್ಟಹಾಸಗೈಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ಶಾಮೀಲಾಗಿರುವ ಸುಮಾರು 73 ನಕ್ಸಲೀಯರ ತಲೆಗೆ ಜಾರ್ಖಂಡ್ ಸರ್ಕಾರ ಮಂಗಳವಾರ 8.69 ಕೋಟಿ ರೂಪಾಯಿ ಬಹುಮಾನ ಘೋಷಿಸಿದೆ.

ಸಿಪಿಐ(ಎಂ), ಪೀಪಲ್ಸ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಗಳ ಪ್ರಮುಖ ಮುಖಂಡರುಗಳ ವಿರುದ್ಧ ಬಹುಮಾನ ಘೋಷಿಸಲಾಗಿದೆ. 2000ನೇ ಇಸವಿಯಿಂದ ಈವರೆಗೆ ಜಾರ್ಖಂಡ್ ನಲ್ಲಿ ಸುಮಾರು 500 ಮಂದಿ ಭದ್ರತಾ ಸಿಬ್ಬಂದಿಗಳನ್ನು ನಕ್ಸಲೀಯರು ಹತ್ಯೆಗೈದಿದ್ದರು.

ಎಡಪಂಥೀಯ ಬಂಡುಕೋರರ ತಲೆಗೆ ಬಹುಮಾನ ಘೋಷಿಸಲು ಅನುಮತಿ ನೀಡಬೇಕೆಂದು ಕೋರಿ ರಾಜ್ಯ ಗೃಹ ಇಲಾಖೆ ಪ್ರಸ್ತಾವನೆ ಸಲ್ಲಿಸಿದ್ದು, ಆ ನಿಟ್ಟಿನಲ್ಲಿ ಮುಖ್ಯಮಂತ್ರಿ ರಘುವರ್ ದಾಸ್ ಅಂಕಿತ ಹಾಕಿರುವುದಾಗಿ ಮುಖ್ಯಮಂತ್ರಿ ಕಚೇರಿ ಮಂಗಳವಾರ ತಿಳಿಸಿದೆ.

ಈ ಭಾಗದಲ್ಲಿ ಕಾರ್ಯಾಚರಿಸುತ್ತಿರುವ ನಕ್ಸಲೀಯರ ತಪ್ಪಿಸಿಕೊಂಡು ಓಡಾಡುತ್ತಿದ್ದು, ಅವರನ್ನು ಹಿಡಿಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಯೋಜನೆ ರೂಪಿಸಿದೆ. ಅದಕ್ಕಾಗಿ ಸುಮಾರು 73 ಮಾವೋವಾದಿಗಳ ಸೆರೆಗೆ ಬಲೆ ಬೀಸಿದೆ.
ಸಿಪಿಐ ಮಾವೋವಾದಿ ಮತ್ತು ಪಿಎಲ್ ಎಫ್ ಎಲ್ ಸಂಘಟನೆಯಲ್ಲಿ ಬಂಡುಕೋರರು ಹೊಂದಿರುವ ಶ್ರೇಣಿ ಆಧಾರದ ಮೇಲೆ 25ರಿಂದ 1 ಲಕ್ಷ ರೂಪಾಯಿಯವರೆಗೆ ಬಹುಮಾನ ನೀಡಲಾಗುವುದು.

ಸಿಪಿಐ ಮಾವೋವಾದಿ ಸಂಘಟನೆಯ ಟಾಪ್ ಮೂರು ಹಂತಗಳಾದ ಸಿಪಿಐ ಮಾವೋ ಸೆಂಟ್ರಲ್ ಕಮಿಟಿ ಸದಸ್ಯರಯ, ಸ್ಪೆಶಲ್ ಏರಿಯಾ ಕಮಿಟಿ ಹಾಗೂ ರೀಜನಲ್ ಬ್ಯೂರೋ ಸದಸ್ಯರನ್ನು ಹಿಡಿಯಲು ಪೊಲೀಸರಿಗೆ ಯಾರೇ ನೆರವು ನೀಡಿದರು ಅವರಿಗೆ 25 ಲಕ್ಷ ರೂಪಾಯಿ ಇನಾಮು ನೀಡುವುದಾಗಿ ಮುಖ್ಯಮಂತ್ರಿ ಕಚೇರಿ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ವಿವರಿಸಿದೆ.

 

No Comments

Leave A Comment