Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಉಡುಪಿ ಜಿಲ್ಲೆ: ತಗ್ಗಿದ ಮಳೆ; ಇಳಿದ ನೆರೆ, ಮನೆಗಳಿಗೆ ಹಾನಿ- 1.75 ಎಕರೆ ಪ್ರದೇಶದ ಕೃಷಿ ನಾಶ

HANIಉಡುಪಿ: ಎರಡು ದಿನಗಳ ಕಾಲ ಸತತವಾಗಿ ಸುರಿದ ಭಾರೀ ಮಳೆ ಇಂದು ವಿಶ್ರಾಂತಿ ಪಡೆದಿದ್ದು, ಕುಂದಾಪುರ ಮತ್ತು ಕಾರ್ಕಳ ತಾಲೂಕುಗಳಲ್ಲಿ ಕಾಣಿಸಿಕೊಂಡಿದ್ದ ನೆರೆ ಇಳಿದಿದೆ.

ನಿನ್ನೆ ಅಪಾಯಮಟ್ಟದಲ್ಲಿ ಹರಿಯುತ್ತಿದ್ದ ಜಿಲ್ಲೆಯ ನದಿಗಳ ನೀರಿನ ಮಟ್ಟ ಇಂದು ಇಳಿದಿದೆ. ಹೀಗಾಗಿ ತಗ್ಗು ಪ್ರದೇಶಗಳಲ್ಲಿ ಕಾಣಿಸಿ ಕೊಂಡ ನೆರೆಯೂ ತಗ್ಗಿದೆ. ಆದರೆ ಕುಂದಾಪುರ-ಬೈಂದೂರಿನ ಕೆಲವು ಪ್ರದೇಶಗಳಲ್ಲಿ ನೆರೆ ಇನ್ನೂ ಇದ್ದು, ಸ್ಥಳಾಂತರಿತ ಕೆಲವು ಮನೆಗಳ ವರಿಗೆ ಇಂದು ಗಂಜಿಕೇಂದ್ರ ತೆರೆಯಲಾಗಿದೆ.

ಹೊಸಾಡು ಗ್ರಾಮದಲ್ಲಿ ಬಂಟ್ವಾಡಿ ನದಿಯ ನೆರೆ ನೀರು ನುಗ್ಗಿ ಐದು ಮನೆಗಳು ಜಲಾ ವೃತಗೊಂಡಿವೆ. ಅಲ್ಲದೇ ಇಲ್ಲಿನ ನಾಲ್ಕು ಎಕರೆ ಕೃಷಿ ಪ್ರದೇಶವೂ ನೀರಿನಲ್ಲಿ ಮುಳುಗಿ ಭತ್ತದ ಬೆಳೆ ಹಾನಿಗೊಂಡಿದೆ. ಸೇನಾಪುರದ ಬಂಟ್ವಾಡಿ ಹೊಳೆನೀರು ಮನೆಗಳಿಗೆ ನುಗ್ಗಿದ್ದು ಇಲ್ಲಿನ ಕೆಲವು ಮನೆಗಳವರನ್ನು ಗುಡ್ಡೆಮ್ಮಾಡಿಯ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ತೆರೆಯಲಾದ ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ನೆರೆ ಇಳಿದ ಕಾರಣ ಸಂಜೆ ಇವರು ತಮ್ಮ ಮನೆಗಳಿಗೆ ಮರಳಿದ್ದಾರೆ.

ಜಲಾವೃತ: ಹೆಮ್ಮಾಡಿ ಗ್ರಾಮದ ಮೂವತ್ತು ಮುಡಿ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಗಾಗಿ ಅಲ್ಲಲ್ಲಿ ಮಣ್ಣು ರಾಶಿ ಹಾಕಿದುದರ ಪರಿಣಾಮ ಹಲವು ಮನೆಗಳು ಜಲಾವೃತಗೊಂಡಿವೆ. ನಾಡಾ, ಹಡವು ಗ್ರಾಮಗಳಲ್ಲೂ 55 ಮನೆಗಳು ಜಲಾವೃತಗೊಂಡಿವೆ. ರಟ್ಟಾಡಿ ಗ್ರಾಮದ ನೀರಿನ ತೋಡೊಂದರ ಕಂಠ ಒಡೆದ ಕಾರಣ ನೀರು ಸಮೀಪದ ಗದ್ದೆಗಳಿಗೆ ನುಗ್ಗಿದ್ದು 1.75 ಎಕರೆ ಪ್ರದೇಶದ ಕೃಷಿ ನಾಶವಾಗಿದೆ. ಅದೇ ರೀತಿ ಕಾವ್ರಾಡಿ ಗ್ರಾಮದ ಗದ್ದೆಯ ಕಂಠ ಒಡೆದು ಸುಮಾರು 25 ಮಂದಿಯ ಕೃಷಿಗೆ ಹಾನಿಯಾಗಿದೆ.

ಮನೆಗಳಿಗೆ ಹಾನಿ: ಕಳೆದೆರಡು ದಿನಗಳ ಗಾಳಿ-ಮಳೆಯಿಂದ ಸಾಕಷ್ಟು ಮನೆಗಳಿಗೂ ಹಾನಿ ಉಂಟಾಗಿವೆ. ಆಲೂರು ಗ್ರಾಮದ ಗೋವಿಂದ ಪೂಜಾರಿ ಎಂಬವರ ಮನೆಯ ಗೋಡೆ ಕುಸಿದು 20,000 ರೂ., ಆನಂದ ಆಚಾರಿ ಎಂಬವರ ಮನೆ ಗೋಡೆ ಕುಸಿದು 40,000 ರೂ., ಗುಲ್ವಾಡಿಯ ಕರಿಯ ಎಂಬ ವರ ಮನೆ ಮೇಲೆ ಮರ ಬಿದ್ದು 15,000 ರೂ. ಹಾನಿ ಸಂಭವಿಸಿದೆ.

ಕಾಳಾವರ ಗ್ರಾಮದ ವಾಸುದೇವ ಆಚಾರಿ ಎಂಬವರ ಮನೆಗೆ ಗಾಳಿ-ಮಳೆಯಿಂದ ಸಂಪೂರ್ಣ ಹಾನಿಯಾಗಿದ್ದು 1 ಲಕ್ಷ ರೂ. ನಷ್ಟ ಉಂಟಾಗಿದೆ. ತಾರಿಬೇರು ಗ್ರಾಮದ ಗೋವಿಂದ ಪೂಜಾರಿ ಎಂಬವರ ಮನೆ ಗೋಡೆ ಕುಸಿದು 50,000 ರೂ., ಆಲೂರಿನ ಆನಂದ ಪೂಜಾರಿ ಮನೆಗೆ 8,000 ರೂ., ಹೊಸಾಡು ಕಂಚಿಗೋಡಿನ ದುಗ್ಗು ಪೂಜಾರಿ ಎಂಬವರ ಮನೆಗೆ 25,000 ರೂ. ಹಾಗೂ ವಕ್ವಾಡಿಯ ಸೀತಾ ಎಂಬವರ ಮನೆಗೆ ಹಾನಿಯಾಗಿದ್ದು, 20 ಸಾವಿರ ರೂ. ನಷ್ಟ ಉಂಟಾಗಿದೆ.

ನದಿಗೆ ಬಿದ್ದು ಸಾವು: 
ಗಂಗೊಳ್ಳಿಯ ಪಂಚಗಂಗಾವಳಿ ಹೊಳೆಯಲ್ಲಿ ನಿನ್ನೆ ರಾತ್ರಿ ಮೀನು ಹಿಡಿಯುತ್ತಿದ್ದ ಯೋಗೀಂದ್ರ ದೇವಾಡಿಗ (30) ಎಂಬವರು ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿದ್ದು, ಅವರ ಮೃತದೇಹ ಇಂದು ಸಂಜೆ ಪತ್ತೆಯಾಗಿದೆ.

ಉಡುಪಿ ತಾಲೂಕು: 
ಕೆಳಾರ್ಕಳಬೆಟ್ಟು ಭವಾನಿ ಶೆಟ್ಟಿ ಎಂಬವರ ಮನೆ ನಿನ್ನೆಯ ಗಾಳಿ-ಮಳೆಗೆ ಸಂಪೂರ್ಣವಾಗಿ ಹಾನಿಗೊಂ ಡಿದ್ದು 2 ಲಕ್ಷ ರೂ.ಗಳ ನಷ್ಟ ಅಂದಾಜು ಮಾಡಲಾಗಿದೆ. ಉದ್ಯಾವರ ಗ್ರಾಮದ ಆಶಾ ಅಮೀನ್ ಎಂಬವರ ಮನೆಯ ಗೋಡೆ ಕುಸಿದು 25,000 ರೂ. ನಷ್ಟ ಸಂಭವಿಸಿದೆ. ಕೊರಂಗ್ರಪಾಡಿಯ ಆನಂದ ಕೊರಂಗ್ರಪಾಡಿ ಎಂಬವರ ಮನೆ ಗಾಳಿ- ಮಳೆಗೆ ಕುಸಿದು 2 ಲಕ್ಷ ರೂ.ನಷ್ಟದ ಅಂದಾಜು ಮಾಡಲಾಗಿದೆ. ಸ್ಥಳಕ್ಕೆ ತೆರಳಿದ ತಹಶೀಲ್ದಾರ್ ಗುರುಪ್ರಸಾದ್ ತುರ್ತು ಪರಿಹಾರದ ಚೆಕ್‌ನ್ನು ಮನೆಯವರಿಗೆ ವಿತರಿಸಿದರು. ಶಿರಿಯಾರದ ಶಶಿಧರ ಮತ್ತು ಲಚ್ಚ ಎಂಬವರ ಮನೆಗೆ ಮರ ಬಿದ್ದು 50,000 ರೂ. ನಷ್ಟವಾಗಿದೆ.

ಕಾರ್ಕಳ ತಾಲೂಕು: ಕಾರ್ಕಳ ಕಸಬಾದ ಪುಲ್ಕೇರಿಯ ಶ್ರೀರಾಮಪ್ಪ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯ ಹೆಂಚುಗಳು ಗಾಳಿಗೆ ಹಾರಿ ಹೋಗಿದ್ದು 25,000 ರೂ. ನಷ್ಟವಾಗಿದೆ. ಮಾಳದ ಶ್ರೀವಿಜಿ ಅಬ್ರಹಾಂ ಎಂಬವರ ಮನೆಯ ಹೆಂಚು, ರೀಪು ಹಾಗೂ ಗೋಡೆ ಭಾಗಶಃ ಹಾನಿಗೊಂಡಿದ್ದು 80,000 ರೂ. ನಷ್ಟ, ಮರ್ಣೆಯ ವಿಠ್ಠಲ ಶೆಟ್ಟಿ ಎಂಬವರ ಮನೆಗೆ ಭಾಗಶಃಹಾನಿ ಉಂಟಾಗಿದ್ದು 25,000 ರೂ., ಎಳ್ಳಾರೆಯ ಜಯಲಕ್ಷ್ಮೀ ಎಂಬವರ ಮನೆಗೆ ಹಾನಿಯಾಗಿ 25,000 ರೂ. ನಷ್ಟ ಉಂಟಾಗಿದೆ.

No Comments

Leave A Comment