Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಕಾಸರಗೋಡು:ಚೇರಂಗೈಯಲ್ಲಿ ಕಡಲ್ಕೊರೆತ ತೀವ್ರ ಅಪಾಯದಂಚಿನಲ್ಲಿ 5ಮನೆಗಳು

Mandಕಾಸರಗೋಡು: ಜಿಲ್ಲೆಯಲ್ಲಿ ಕಳೆದೆರಡು ದಿನಗಳಲ್ಲಿ ಧಾರಾಕಾರವಾಗಿ ಸುರಿದ ಮಳೆಯ ಆರ್ಭಟ ಕಡಿಮೆಯಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 10 ಸೆ.ಮೀ. ಮಳೆಯಾಗಿದೆ. ಮಳೆಯ ಅಬ್ಬರ ಕಡಿಮೆಯಾಗಿದ್ದರೂ ಪ್ರವಾಹ ಭೀತಿ ದೂರವಾಗಿಲ್ಲ. ಹೊಳೆ, ತೋಡುಗಳು ಉಕ್ಕಿ ಹರಿಯುತ್ತಿದ್ದು, ಹಲವಡೆ ನೆರೆ ಉಂಟಾಗಿದೆ. ಸಂಜೆ ಯಾಗುತ್ತಿದ್ದಂತೆ ಮತ್ತೆ ಮಳೆ ಬಿರುಸುಗೊಂಡಿದೆ.

ನೆರೆ ಕಾರಣ ಕುಂಬಳೆ ಶಿರಿಯಾ ಮತ್ತು ಬಂಬ್ರಾಣ ಹೊಳೆ ತೀರದಲ್ಲಿರುವ 24 ಹಾಗೂ ಉಪ್ಪಳದಿಂದ ಐದು ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಹೊಳೆತೀರದ ಹಲವು ಮನೆಗಳಿಗೆ ನೀರು ನುಗ್ಗಿದೆ. ಕೃಷಿ ಭೂಮಿ ಜಲಾವೃತಗೊಂಡು ಅಪಾರ ಹಾನಿ ಉಂಟಾಗಿದೆ.

ಕಡಲ್ಕೊರೆತ ತೀವ್ರ:
ಕಾಸರಗೋಡು ಚೇರಂಗೈಯಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ. ತೀರದಲ್ಲಿ ಐದಕ್ಕೂ ಅಧಿಕ ಮನೆಗಳು ಅಪಾಯದಂಚಿನಲ್ಲಿವೆ. ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿರುವ ಇಲ್ಲಿನ ಭಜನಾ ಮಂದಿರದ ಒಂದು ಪಾರ್ಶ್ವ ಕುಸಿದಿದ್ದು, ಯಾವುದೇ ವೇಳೆ ಇಡೀ ಕಟ್ಟಡ ಸಮುದ್ರ ಪಾಲಾಗುವ ಸ್ಥಿತಿ ನಿರ್ಮಾಣವಾಗಿದೆ. ಈ ಪ್ರದೇಶದಲ್ಲಿ ಒಂದೇ ದಿನ ಮೂರು ಮೀಟರ್‌ನಷ್ಟು ತೀರವನ್ನು ಕಡಲು ಆಕ್ರಮಿಸಿಕೊಂಡಿದೆ. ಇದರಿಂದ ಹಲವು ತೆಂಗುಗಳು ಸಮುದ್ರಪಾಲಾಗಿವೆ. ತೀರವಾಸಿಗಳು ಭೀತಿಯಲ್ಲೇ ಕಾಲ ಕಳೆಯುವಂತಾಗಿದೆ.

ತೋಡು ದಾಟುತ್ತಿದ್ದ ಮಹಿಳೆ ಮೃತ್ಯು:  ರಾಜಪುರಂನಲ್ಲಿ ಪಾಣತ್ತೂರು ಕಮ್ಮಾಡಿಯ ಚಂದ್ರಾವತಿ(40) ಎಂಬವರು ತೋಡು ದಾಟುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ. ಹುಡುಕಾಟದ ಬಳಿಕ ಅವರ ಮೃತದೇಹ ಪತ್ತೆಯಾಗಿದೆ

No Comments

Leave A Comment