Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಒಂದು ಶ್ರೇಣಿ ಒಂದು ಪಿಂಚಣಿ’ಗೆ ಆಗ್ರಹಿಸಿ ನಡೆದ ಹೋರಾಟಕ್ಕೆ ಬೆಂಬಲ- ಮಾಜಿ ಸೈನಿಕರ ಉಪವಾಸ ಸತ್ಯಾಗ್ರಹ

19udp-protestಉಡುಪಿ: ‘ಒಂದು ಶ್ರೇಣಿ ಒಂದು ಪಿಂಚಣಿ’ಗೆ ಆಗ್ರಹಿಸಿ ದೆಹಲಿಯ ಜಂತರ್‌ ಮಂತರ್‌ನಲ್ಲಿ 34 ದಿನಗಳಿಂದ ಸತ್ಯಾಗ್ರಹ ನಡೆಸುತ್ತಿರುವ ಮಾಜಿ ಸೈನಿಕರನ್ನು ಬೆಂಬಲಿಸಿ ಉಡುಪಿಯ ಮಾಜಿ ಸೈನಿಕರ ವೇದಿಕೆಯ ಸದಸ್ಯರು ನಗರದ ಯುದ್ಧ ಸ್ಮಾರಕದ ಎದುರು ಭಾನುವಾರ ಉಪವಾಸ ಸತ್ಯಾಗ್ರಹ ನಡೆಸಿದರು.

2006ರ ಹಿಂದೆ ನಿವೃತ್ತರಾದ ಸೈನಿಕರು ಪಡೆಯುವ ಪಿಂಚಣಿಗೂ ಈಗ ನಿವೃತ್ತ ಸೈನಿಕರು ಪಡೆಯುವ  ನಿವೃತ್ತಿ ವೇತನಕ್ಕೂ ಶೇಕಡಾ 40ರಷ್ಟು ವ್ಯತ್ಯಾಸ ವಿದೆ. ಶಾಸಕರು, ಸಂಸದರು, ಅಧಿಕಾರಿ ಗಳ ನಿವೃತ್ತಿ ವೇತನ ಹೆಚ್ಚಳವಾಗುತ್ತಿದೆ. 40 ವರ್ಷದವರೆಗೆ ಸೈನ್ಯದಲ್ಲಿ ಕೆಲಸ ಮಾಡಿನಂತರ  ಸಮಾಜದಲ್ಲಿ ಒಳ್ಳೆಯ ಉದ್ಯೋಗ ಸಿಗುತ್ತಿಲ್ಲ, ಕುಟುಂಬ ದಲ್ಲಿಯೂ ನಮ್ಮನ್ನು ಕಡೆಗಣಿಸಲಾಗು ತ್ತಿದೆ. ಕೇವಲ ಶೇಕಡಾ 10 ಮಂದಿಗೆ ಮಾತ್ರ ಉತ್ತಮ ಉದ್ಯೋಗ ಲಭಿಸುತ್ತದೆ ಎಂದು ಪ್ರತಿಭಟನಾಕಾರರು ದೂರಿದರು.

ಕೆಲವರ ಪಿಂಚಣಿ ಬಡತನ ರೇಖೆಗಿಂತ ಕೆಳಗಿರುವವರ ಆದಾಯ ಕ್ಕಿಂತಲೂ ಕಡಿಮೆ ಇದೆ. ಈ ವ್ಯತ್ಯಾಸ ಸರಿಪಡಿಸಿ ಎಂದು ಹಲವು ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆ. ಹಿಂದಿನ ಯುಪಿಎ ಸರ್ಕಾರ ಬೇಡಿಕೆ ಈಡೇರಿಸು ವುದಾಗಿ ಹೇಳಿತ್ತು. 2012ರಲ್ಲಿ ಎ.ಕೆ.ಆಂಟನಿ ರಕ್ಷಣಾ ಸಚಿವರಾಗಿದ್ದ ಸಂದರ್ಭದಲ್ಲಿ ಪಿಂಚಣಿಯನ್ನು ಸ್ವಲ್ಪ ಪರಿಷ್ಕರಿಸಲಾಗಿತ್ತು. ಆದರೆ ಸರ್ಕಾರದ ಅವಧಿಯ ಕೊನೆಯ ದಿನಗಳಲ್ಲಿ ಆದೇಶ ಮಾಡಿ ಹೋದರೂ ಅದು ಜಾರಿಯಾಗ ಲಿಲ್ಲ  ಎಂದು ವೇದಿಕೆಯ ಅಧ್ಯಕ್ಷ  ಚಂದ್ರಶೇಖರ್‌ ಸುವರ್ಣ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಬೇಡಿಕೆ ಈಡೇರಿಸಲಾಗುವುದು ಎಂದು ಭರವಸೆ ನೀಡಿದ್ದರು.  ಸರ್ಕಾರ ಅಸ್ತಿತ್ವಕ್ಕೆ ಬಂದು 15 ತಿಂಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ. ದೆಹಲಿಯಲ್ಲಿ ಪ್ರತಿಭ ಟನೆ ನಡೆಯುವ ಸ್ಥಳಕ್ಕೆ ಯಾವೊಬ್ಬ ಸಚಿವರಾಗಲೀ ಅಧಿಕಾರಿಗಳಾಗಲೀ ಇಲ್ಲಿ ಯವರೆಗೆ ಭೇಟಿ ನೀಡಲಿಲ್ಲ ಎಂದರು. ನಿವೃತ್ತ ಕಮಾಂಡರ್‌ ಜೆರೊಮ್‌ ಕ್ಯಾಸ್ತಲಿನೊ, ಗಣಪಯ್ಯ ಶೇರಿಗಾರ್‌, ರಾಮಚಂದ್ರ ರಾವ್‌ ಉಪಸ್ಥಿತರಿದ್ದರು.

ನಿವೃತ್ತ ಸೈನಿಕರಲ್ಲಿ ಪ್ರತಿಭೆ ಇದ್ದರೂ ಕೇವಲ ಭದ್ರತಾ ಸಿಬ್ಬಂದಿಗಳಾಗಿ ಕೆಲಸ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ.
ಗಿಲ್ಬರ್ಟ್‌ ಬ್ರಿಗಾಂಜಾ,
ನಿವೃತ್ತ ಸೈನಿಕ

No Comments

Leave A Comment