Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಮಹಾರಾಷ್ಟ್ರದಲ್ಲಿ ನಾಗರಿಕರ ಗುಂಡಿನ ದಾಳಿಗೆ ಬಲಿಯಾದ ಸೇನಾ ಯೋಧ

Bulletಮುಂಬೈ: ಉತ್ತರ ಮಹಾರಾಷ್ಟ್ರದ ಭುಸಾವಲ್ ನಲ್ಲಿ ಇಬ್ಬರು ಯುವಕರು ಸೇನಾ ಯೋಧನ ಸೇವಾ ಪಿಸ್ತೂಲನ್ನು ಕಸಿದು ಗುಂಡಿನ ದಾಳಿ ನಡೆಸಿದ್ದರಿಂದ ಯೋಧ ಮೃತಪಟ್ಟ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ರಾತ್ರಿ ಜಲಗಾಂವ್ ಜಿಲ್ಲೆಯ ಭುಸಾವಲ್ ನ ಭಜರ್ಪೇಠ್ ನಲ್ಲಿ ಯೋಧರು ಮತ್ತು ಯುವಕರ ನಡುವೆ ನಡೆದ ಚಕಮಕಿಯಲ್ಲಿ ಈ ಘಟನೆ ಸಂಭವಿಸಿದೆ.

೨೦ರ ವಯಸ್ಸಿನ ಆಸುಪಾಸಿನಲ್ಲಿರುವ ಇಬ್ಬರು ಶಂಕಿತರನ್ನು ಬಂಧಿಸಿ ಐಪಿಸಿ ೩೦೨ರಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೋಲಿಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

೩೨ ವರ್ಷದ ಯೋಧ ಶೇಕ್ ಅಕ್ವಿಲ್ ಶೇಕ್ ರೆಹಮಾನ್ ಅವರು ಭುಸಾವಲ್ ನ ನಿವಾಸಿ. ಅವರು ಹತ್ತಿರದ ಪ್ರದೇಶದಲ್ಲಿ ಸುಳಿದಾಡುತ್ತಿರುವಾಗ ಇಬ್ಬರು ಯುವಕರ ಜೊತೆ ಜಗಳ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

“ಯೋಧ ಆಗ ತನ್ನ ಸೇವಾ ಪಿಸ್ತೂಲನ್ನು ಹೊರತೆಗೆದಿದ್ದಾನೆ ಅದನ್ನು ಕೂಡಲೆ ಕಸಿದ ಯುವಕರು ಗುಂಡು ಹಾರಿಸಿದ್ದಾರೆ. ಯೋಧನನ್ನು ಹತ್ತಿರದ ಜಲಗಾಂವ್ ನಾಗರಿಕ ಆಸ್ಪತ್ರೆಗೆ ಸೇರಿಸಿದ್ದರು, ಅವರು ಅಲ್ಲಿ ಮೃತಪಟ್ಟಿದ್ದಾನೆ” ಎಂದು ಅಧಿಕಾರಿ ತಿಳಿಸಿದ್ದಾರೆ.

No Comments

Leave A Comment