Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಪುತ್ರಿಯ ಮೇಲೆ ಒಂದು ವರ್ಷದಿಂದ ಅತ್ಯಾಚಾರವೆಸಗುತ್ತಿದ್ದ ಪಾಪಿ ತಂದೆಯನ್ನು ಥಳಿಸಿದ ಗ್ರಾಮಸ್ಥರು

girlಕೊಡೆಮಾ(ಜಾರ್ಖಂಡ್):ಆಘಾತಕಾರಿ ಘಟನೆಯೊಂದರಲ್ಲಿ ಪಾಪಿ ತಂದೆಯೊಬ್ಬ ತನ್ನ ಪುತ್ರಿಯ ಮೇಲೆ ನಿರಂತರವಾಗಿ ಒಂದು ವರ್ಷ ಕಾಲ ಅತ್ಯಾಚಾರವೆಸಗಿರುವ ಸಂಗತಿ ಬಹಿರಂಗವಾಗಿದೆ.

ಪುತ್ರಿಯ ಮೇಲೆ ಅತ್ಯಾಚಾರವೆಸಗುತ್ತಿರುವ ಸುದ್ದಿ ತಿಳಿದ ಗ್ರಾಮಸ್ಥರು ಆರೋಪಿ ತಂದೆಯನ್ನು ಮನಬಂದಂತೆ ಥಳಿಸಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ಪುತ್ರಿಯ ಮೇಲೆ ಅತ್ಯಾಚಾರವೆಸಗದಂತೆ ಆರೋಪಿಗೆ ಹಲವಾರು ಬಾರಿ ಎಚ್ಚರಿಕೆ ನೀಡಿದ್ದೇವೆ. ಆದರೆ, ಎಚ್ಚರಿಕೆಯನ್ನು ಕಡೆಗೆಣಿಸಿ ಅತ್ಯಾಚಾರವೆಸಗುವುದನ್ನು ಮುಂದುವರಿಸಿದ್ದರಿಂದ ಆತನನ್ನು ಮನಬಂದಂತೆ ಥಳಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಪೊಲೀಸರು ಆರೋಪಿಯ ವಿರುದ್ಧ ಅತ್ಯಾಚಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

No Comments

Leave A Comment