Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಮಹಿಳೆಯನ್ನು ಫಾಲೋ ಮಾಡಿದ ಅಳಿಲನ್ನು ಬಂಧಿಸಿದ ಪೊಲೀಸರು

veyಬರ್ಲಿನ್ :ಆಕ್ರಮಣಕಾರಿ ಅಳಿಲು ನನ್ನನ್ನು ಫಾಲೋ ಮಾಡುತ್ತಿದೆ ಎಂದು ಜರ್ಮನಿಯ ಮಹಿಳೆಯೊಬ್ಬರು ನೀಡಿದ ದೂರನ್ನು ಆಧರಿಸಿ ಜರ್ಮನಿಯ ಪೊಲೀಸರು ಅಳಿಲನ್ನು ಬಂಧಿಸಿದ ಅಚ್ಚರಿಯ ಘಟನೆ ಸಂಭವಿಸಿದೆ.   ಬಾಟ್ರೋಪ್‌ನಿಂದ ಬುಧವಾರ ಪೊಲೀಸರಿಗೆ ಯುವತಿಯೊಬ್ಬಳಿಂದ ತುರ್ತುಕರೆಯೊಂದು ಬಂತು. ಜರ್ಮನಿಯ ನಗರದಲ್ಲಿ ತಾವು ರಸ್ತೆಯಲ್ಲಿ ನಡೆದುಹೋಗುವಾಗ ಅಳಿಲೊಂದು ತನ್ನನ್ನು ಅಟ್ಟಿಸಿಕೊಂಡು ಬಂತು ಎಂದು ದೂರಿದ್ದಳು.

ಅಳಿಲನ್ನು ಎಷ್ಟು ಓಡಿಸಲು ಪ್ರಯತ್ನಿಸಿದರೂ ಮಹಿಳೆಯ ಹಿಂದಿಂದೆ ಬರಲು ಆರಂಭಿಸಿದಾಗ ಪೊಲೀಸರಿಗೆ ಕರೆ ಮಾಡಿದಳು. ಕೂಡಲೇ ಪೊಲೀಸ್ ಅಧಿಕಾರಿಯೊಬ್ಬರು ಅಳಿಯನ್ನು ಹಿಡಿಯಲು ತಯಾರಾದರು.  ಅಳಿಲನ್ನು ಸೆರೆಹಿಡಿದ ಪೊಲೀಸರು ಅದನ್ನು ಠಾಣೆಗೆ ತಂದಾಗ ಅಳಿಲು ದಣಿವಿನ ಲಕ್ಷಣಗಳನ್ನು ತೋರಿಸಿತು. ಅಳಿಲನ್ನು ಬಂಧಿಸಿ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ಉತ್ತರ ರೈನ್ ವೆಸ್ಟ್ ಫಾಲಿಯಾ ಪೊಲೀಸರು ಫೇಸ್ ಬುಕ್ ಪುಟದಲ್ಲಿ ಅಳಿಲಿನ ವಿಡಿಯೋ ಪ್ರಕಟಿಸಿದ್ದು, ಅದರಲ್ಲಿ ಅಳಿಲಿಗೆ ಜೇನುತುಪ್ಪವನ್ನು ತಿನ್ನಿಸುತ್ತಿರುವ ಚಿತ್ರವಿದೆ.  ಈ ವಿಡಿಯೋವನ್ನು 12,000 ಬಾರಿ ವೀಕ್ಷಿಸಲಾಗಿದೆ.

ಅಳಿಲು ಮತ್ತೆ ಶಕ್ತಿ ಗಳಿಸಿ ಚೇತರಿಸಿಕೊಂಡ ಬಳಿಕ ರಕ್ಷಣಾ ಕೇಂದ್ರಕ್ಕೆ ಕಳಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.  ವಾಸ್ತವವಾಗಿ ಆಹಾರವಿಲ್ಲದೇ ದಣಿವಾಗಿದ್ದ ಅಳಿಲು ಮಹಿಳೆಯ ಸಹಾಯ ಯಾಚಿಸಿ ಅವರನ್ನು ಹಿಂಬಾಲಿಸಿತ್ತೆಂದು ಕಾಣುತ್ತದೆ

No Comments

Leave A Comment