Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಬೆಂಗಳೂರು: ಆರ್‌ಟಿಐ ಕಾರ್ಯಕರ್ತನ ಮೇಲೆ ಬಿಡಿಎ ಸಬ್ ರೆಜಿಸ್ಟಾರ್ ಶೂ ಪ್ರತಾಪ…?!

bdಬೆಂಗಳೂರು:ಸೈಟ್ ಪಡೆದು ನಿವಾಸ ಕಟ್ಟಿದ್ದು ಅದರಲ್ಲಿ ಬಿಡಿಎಗೆ ಸೇರಬೇಕಿರುವ 219 ಚದರ ಅಡಿ ಜಾಗವನ್ನು ಒತ್ತುವರಿ ಮಾಡಲಾಗಿದೆ ಎಂದು ಆರೋಪಿಸಿ ದೂರು ನೀಡಿದ್ದ ಹಿನ್ನೆಲೆಯಲ್ಲಿ ಆರ್‌ಟಿಐ ಕಾರ್ಯಕರ್ತರೋರ್ವರ ಮೇಲೆ ಬಿಡಿಎಯ ಸಬ್ ರೆಜಿಸ್ಟಾರ್ ಓರ್ವರು ಸಾರ್ವಜನಿಕವಾಗಿ ಬೂಟು ಹಾಗೂ ಕಲ್ಲಿನಿಂದ ಮನ ಬಂದಂತೆ ಥಳಿಸಿರುವ ಘಟನೆ ನಗರದ ನಾಗರಭಾವಿಯಲ್ಲಿ ನಡೆದಿದೆ.

ಹಲ್ಲೆ ನಡೆಸಿರುವ ವ್ಯಕ್ತಿಯನ್ನು ಬಿಡಿಎ ಸಬ್ ರೆಜಿಸ್ಟಾರ್ ಟಿ.ಎನ್ನಲಾಗಿದ್ದು, ಮೈಸೂರು ಮೂಲದವರಾಗಿದ್ದಾರೆ. ಪ್ರಸ್ತುತ ಪೀಣ್ಯಾದ ಬಿಡಿಎ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇವರು ಆರ್‌‌ಟಿಐ ಕಾರ್ಯಕರ್ತ ವೇಣುಗೋಪಾಲ್ ಎಂಬುವವರನ್ನು ಶೂ ಹಾಗೂ ಕಲ್ಲಿನಿಂದ ಮನ ಬಂದಂತೆ ಥಳಿಸಿದ್ದಾರೆ. ಈ ಎಲ್ಲಾ ದೃಶ್ಯಗಳು ಮಾಧ್ಯಮಗಳ ಕಾಮರಾಗಳಲ್ಲಿ ಸೆರೆಯಾಗಿದೆ.

ಪ್ರಕರಣದ ಹಿನ್ನೆಲೆ: ಜಾಗ ಒತ್ತುವರಿಯಾಗಿದೆ ಎಂಬ ಆರ್‌ಟಿಐ ಕಾರ್ಯಕರ್ತರ ದೂರಿನ ಹಿನ್ನೆಲೆಯಲ್ಲಿ ಬಿಡಿಎ ಆಯುಕ್ತ ಶ್ಯಾಮ್‌ಭಟ್ ಅವರು ತೆರವಿಗೆ ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ವಿಷಯ ತಿಳಿಸಲು ವೇಣುಗೋಪಾಲ್ ಕಾರ್ಯದರ್ಶಿಗಳ ಮನೆ ಬಳಿ ಆಗಮಿಸಿ ತೆರವಿನ ಬಗ್ಗೆ ಮಾಹಿತಿ ನೀಡಿದರು. ಆದರೆ ಇದರಿಂದ ಕುಪಿತಗೊಂಡ ರೆಜಿಸ್ಟ್ರಾರ್ ಗೋಪಾಲಕೃಷ್ಣ, ವೇಣುಗೋಪಾಲ್ ಅವರನ್ನು ಮನಬಂದಂತೆ ಥಳಿಸಿದ್ದಾರೆ.

ಈ ಸಂಬಂಧ ಕಾರ್ಯದರ್ಶಿ ಗೋಪಾಲಕೃಷ್ಣ ಪ್ರತಿಕ್ರಿಯಿಸಿದ್ದು, ನಿವಾಸವನ್ನು ನಾನು ಜಾಗ ಪಡೆದು ನಿರ್ಮಿಸಿಲ್ಲ. ಬದಲಾಗಿ ಬಿಡಿಎಯಿಂದ ಸೈಟು ಪಡೆದು ನಿರ್ಮಾಣ ಮಾಡಿದ್ದ ಮನೆಯನ್ನೇ ಕೃಷ್ಣಮೂರ್ತಿ ಎಂಬುವವರಿಂದ 1 ಕೋಟಿ 20 ಲಕ್ಷ ಕೊಟ್ಟು ಖರೀದಿಸಿದ್ದೆ. ಒತ್ತುವರಿ ಬಗ್ಗೆ ನನಗೆ ತಿಳಿದಿಲ್ಲ. ಆದರೆ ಅಕ್ರಮ ನಡೆದಿದೆ ಎಂದಾದಲ್ಲಿ ಪೂರ್ತಿ ಮನೆಯನ್ನೇ ಕೆಡವಲಿ ಎಂದಿದ್ದಾರೆ.

ಇದೇ ವೇಳೆ, ಕಳೆದ ಹಲವು ದಿನಗಳಿಂದ ಆರ್‌ಟಿಐ ಕಾರ್ಯಕರ್ತ ವೇಣುಗೋಪಾಲ್ ಅವರು ತಮ್ಮಿಂದ ಹಾಗೂ ನನ್ನ ಇತರೆ ಸಹದ್ಯೋಗಿಗಳಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದ. ಆದರೆ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಇಂತಹ ಕುತಂತ್ರ ನಡೆಸಿದ್ದಾನೆ. ಅಲ್ಲದೆ ನನ್ನನ್ನು ದಲಿತನೆಂಬ ಕಾರಣಕ್ಕೆ ಸಾಕಷ್ಟು ಬಾರಿ ನಿಂದಿಸಿದ್ದಾನೆ ಎಂದು ಆರೋಪಿಸಿದ್ದಾರೆ.

ಇನ್ನು ಆರ್‌ಟಿಐ ಕಾರ್ಯಕರ್ತ ವೇಣುಗೋಪಾಲ್ ಪ್ರತಿಕ್ರಿಯಿಸಿದ್ದು, ನಾನು ಒತ್ತುವರಿ ಮಾಡಲಾಗಿದೆ ಎಂದು ದೂರು ನೀಡಿದ್ದೆ. ಆದರೆ ಯಾವುದೇ ರೀತಿಯಲ್ಲಿ ನಾನು ಹಣಕ್ಕೆ ಬೇಡಿಕೆ ಇಟ್ಟವನಲ್ಲ ಎಂದು ಆರೋಪವನ್ನು ತಳ್ಳಿ ಹಾಕಿದ್ದಾರೆ.

No Comments

Leave A Comment