Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ದಲಿತ ಮುಖಂಡರೊಂದಿಗೆ ಕ.ರಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಲ್ಲಾಜಮ್ಮ ಸಂವಾದ

samvaadaಉಡುಪಿ: ಜಿ.ಪಂ. ಸಭಾಂಗಣದಲ್ಲಿ ನಡೆದ ದಲಿತ ಸಮುದಾಯಗಳ ಮುಖಂಡ ನಡುವೆ ನಡೆದ ಸಂವಾದ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕುಮಾರಿ ಮಲ್ಲಾಜಮ್ಮ ಉದ್ಘಾಟಿಸಿ, ನಂತರ ಅವರು ಉಡುಪಿ ಜಿಲ್ಲೆಯ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವೆಬ್‌ಸೈಟ್ ಉದ್ಘಾಟಿಸಿದರು.

ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ದಲಿತ ಮುಖಂಡ ಸುಂದರ್ ಮಾಸ್ತರ್ ಮಾತನಾಡಿ, ಜಿಲ್ಲೆಯ ಪ.ಜಾತಿಯ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶಕ್ಕಾಗಿ ಸ್ವಂತ ಬೋಟ್ , ಶೀತಲೀಕರಣ ಘಟಕ ಸ್ಥಾಪನೆ, ಮಹಿಳೆಯರಿಗೆ ಮೀನುಗಾರಿಕೆಗೆ ಸಾಲ ಸಹಾಯಧನ ಹೆಚ್ಚಳ, ಡಾರ್ಮೆಟರಿ ನಿರ್ವಹಣೆ,ಮೈಕ್ರೋ ಕ್ರೆಡಿಟ್ ಸಾಲ ಪ್ರಮಾಣ ಹೆಚ್ಚಳ , ಭೂ ಒಡೆತನದ ಅನುದಾನ ಹೆಚ್ಚಳ, ಜಿಲ್ಲೆಗೆ ಹೆಚ್ಚಿನ ಗುರಿ ನೀಡುವುದು ಮುಂತಾದ ಸೌಲಭ್ಯಗಳನ್ನು ಒಗದಿಸುವಂತೆ ಕೋರಿದರು.

ವಿಜಯಲಕ್ಷ್ಮಿ ರವರು ಮಾತನಾಡಿ, ಉಡುಪಿಯ ಅಂಬೇಡ್ಕರ್ ಭವನವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಂತೆ ಮತ್ತು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಬದಲಾವಣೆ ಮತ್ತು ಸ್ಥಳಾಂತರಕ್ಕೆ ಆಗ್ರಹಿಸಿದರು.

ಸುಂದರಿ ಪುತ್ತೂರು ರವರು ಮಾತನಾಡಿ, ಇಲಾಖೆಯ ಯೋಜನೆಗಳಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ಸ್ವ ಸಹಾಯ ಸಂಘಗಳಿಗೆ ಹೆಚ್ಚಿನ ನೆರವು ನೀಡಿ ಎಂದರು.

ಉದಯ ಕುಮಾರ್ ತಲ್ಲೂರು ಮಾತನಾಡಿ, ಪ,ಜಾತಿಯ ಜನರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ , ವಸತಿ ವ್ಯವಸ್ಥೆ ಮತ್ತು ಕೃಷಿ ಮಾಡಲು ಪವರ್ ಟಿಲ್ಲರ್ ನೀಡುವಂತೆ ಕೋರಿದರು.

ಸಂವಾದ ಕಾರ್ಯಕ್ರಮದಲ್ಲಿ ಮಲೆನಾಡು ಅಭಿವೃದ್ದಿ ಮಂಡಳಿಯ ಅಧ್ಯಕ್ಷೆ ಬಿ.ಸಿ.ಗೀತಾ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷೆ ವೆರೋನಿಕೊ ಕರ್ನೆಲಿಯೋ, ಉಡುಪಿ ನಗರಸಭೆಯ ಅಧ್ಯಕ್ಷ ಪಿ.ಯುವರಾಜ್, ಅಪರ ಜಿಲ್ಲಾಧಿಕಾರಿ ಕುಮಾರ ಉಪಸ್ಥಿತರಿದ್ದರು. ನಿಗಮದ ಪ್ರಬಂಧಕರಾದ ಕುಮಾರ್ ಸ್ವಾಗತಿಸಿದರು.

No Comments

Leave A Comment