Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಪ.ಜಾತಿಯ ಸರ್ವತೋಮುಖ ಅಭಿವೃದ್ಧಿ ಕ್ರಮ – ಮಲ್ಲಾಜಮ್ಮ

mallajamma_5_JPGಉಡುಪಿ; ರಾಜ್ಯದಲ್ಲಿರುವ ಪ.ಜಾತಿಯ ೧.೨೯ ಕೋಟಿ ಜನರ ಸರ್ವತೋಮುಖ ಅಭಿವೃದ್ದಿಗೆ ಹೊಸ ಕಾರ್ಯಕ್ರಮ ಮತ್ತು ಯೋಜನೆಗಳನ್ನು ರೂಪಿಸಲಾಗುವುದು , ಈ ಕುರಿತಂತೆ ರಾಜ್ಯಾದ್ಯಂತ ಪ್ರವಾಸ ಮಾಡಿ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕುಮಾರಿ ಮಲ್ಲಾಜಮ್ಮ ರವರು ಹೇಳಿದ್ದಾರೆ.

ಅವರು ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ರಾಜ್ಯದಲ್ಲಿನ ಪ.ಜಾತಿಯಲ್ಲಿರುವ ಅತ್ಯಂತ ಕಟ್ಟಕಡೆಯ ವ್ಯಕ್ತಿಗೆ ಸಹ ಸೌಲಭ್ಯಗಳು ದೊರೆಯುವಂತೆ ಕಾರ್ಯಕ್ರಮ ರೂಪಿಸಲಾಗುತ್ತಿದ್ದು, ಕಳೆದ ೪೦ ವರ್ಷಗಳಿಂದ ಸಹ ಪ.ಜಾತಿಯ ಜನರಿಗೆ ಮೀಸಲಿಟ್ಟಿರುವ ಸೌಲಭ್ಯಗಳು ಸಮರ್ಪಕವಾಗಿ ತಲುಪುತ್ತಿಲ್ಲ, ರಾಜ್ಯ ಸರ್ಕಾರ ಈ ವರ್ಷದ ಬಜೆಟ್ ನಲ್ಲಿ ನಿಗಮಕ್ಕೆ ೪೫೧ ಕೋಟಿ ರೂ ನೀಡಿದ್ದು, ಇದರಲ್ಲಿ ಹೊಸ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು.

ಪ.ಜಾತಿ ವಿದ್ಯಾವಂತ ನಿರುದ್ಯೋಗಿಗಳಾಗಿ ಕೌಶಲ್ಯ ಅಭಿವೃದ್ಧಿಯ ಯೋಜನೆಯಡಿ ತರಬೇತಿ ನೀಡಲು ನಿರ್ಧರಿಸಲಾಗಿದ್ದು, ಆಗಸ್ಟ್ ನಲ್ಲಿ ಮೈಸೂರು ಮತ್ತು ಮಂಗಳೂರಿನಲ್ಲಿ ತರಭೇತಿ ಪ್ರಾರಂಭಿಸಲಾಗುವುದು, ಪ್ರವಾಸೋದ್ಯಮ ಮತ್ತಿತರ ಇಲಾಖೆಯ ಸಹಯೋಗದಲ್ಲಿ ಪ.ಜಾತಿಯ ಯುವಕರಿಗೆ ಪ್ರಸ್ತುತ ಇಂಡಿಕಾ ಕಾರು ನೀಡುವ ಯೋಜನೆ ಇದ್ದು, ಇಂಡಿಕಾ ಕಾರು ಬದಲು ಇನ್ನೋವಾ ಕಾರು ನೀಡುವ ಕುರಿತಂತೆ ಈಗಾಗಲೇ ಸರ್ಕಾರಕ್ಕೆ ಪ್ರಸ್ಥಾವನೆ ಸಲ್ಲಿಸಲಾಗಿದೆ, ಉನ್ನತ ವ್ಯಾಸಾಂಗಕ್ಕಾಗಿ ಶೂನ್ಯ ಬಡ್ಡಿಯಲ್ಲಿ ಸಾಲ, ವಕೀಲಿ ವೃತ್ತಿ ನಡೆಸಲು ಕಚೇರಿಯ ತೆರೆಯಲು ರೂ.೫ ಲಕ್ಷ ಸಾಲ, ಭೂ ಒಡೆತನ ಯೋಜನೆಯಲ್ಲಿನ ನಿರ್ಭಂದಗಳ ಸಡಿಲೀಕರಣ,ಇಲಾಖೆಯಲ್ಲಿ ಮುಂದಿನ ವರ್ಷದಿಂದ ಆನ್ ಲೈನ್ ಮೂಲಕ ಅರ್ಜಿ ಸ್ವೀಕಾರ ನಡೆಯಲಿದ್ದು, ಇಲಾಖೆಯಲ್ಲಿನ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವ ಕುರಿತಂತೆ ಅಧಿಕಾರಿಗಳಿಗೆ ೨ ಹಂತದ ತರಬೇತಿಯನ್ನು ನೀಡಲಾಗಿದ್ದು,ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿ ಮತ್ತು ಭ್ರಷ್ಠಾಚಾರಕ್ಕೆ ಕಡಿವಾಣ ಹಾಕಲಾಗಿದೆ.

ರಾಜ್ಯದ ಎಲ್ಲಾ ಭಾಗಗಳ ಪ.ವರ್ಗದ ಬೇಡಿಕಗೆ ಅನುಗುಣವಾಗಿ ಕಾರ್ಯಕ್ರಮ ರೂಪಿಸಲು ನಿರ್ಧರಿಸಲಾಗಿದ್ದು, ಕರಾವಳಿ ಪ್ರದೇಶದ ಪ.ವರ್ಗದ ಜನರಿಗೆ ಮೀನುಗಾರಿಕೆಗೆ ಅನುಕೂಲವಾಗುವಂತಹ ಯೋಜನೆಗಳನ್ನು ರೂಪಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಕರಾವಳಿ ಪ್ರದೇಶದಲ್ಲಿ ವಲಸೆ ಬಂದ ಕಾರ್ಮಿಕರು ದಲಿತರ ಹೆಸರಿನಲ್ಲಿ ಜಾತಿ ಪ್ರಮಾಣಪತ್ರಗಳನ್ನು ಪಡೆಯಲಾಗುತ್ತಿದ್ದು,ಪ್ರಮಾಣಪತ್ರಗಳನ್ನು ನೀಡುವಾಗ ಅಧಿಕಾರಿಗಳ ಕೂಲಂಕುಷವಾಗಿ ಪರಿಶೀಲಿಸಿ ನೀಡುವಂತೆ ಮಲ್ಲಾಜಮ್ಮ ಸೂಚಿಸಿದರು.

ಸಭೆಯಲ್ಲಿ ಮಲೆನಾಡು ಅಭಿವೃದ್ದಿ ಮಂಡಳಿಯ ಅಧ್ಯಕ್ಷೆ ಬಿ.ಸಿ.ಗೀತಾ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷೆ ವೆರೋನಿಕೊ ಕರ್ನೆಲಿಯೋ, ಉಡುಪಿ ನಗರಸಭೆಯ ಅಧ್ಯಕ್ಷ ಪಿ.ಯುವರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ , ಅಪರ ಜಿಲ್ಲಾಧಿಕಾರಿ ಕುಮಾರ ಉಪಸ್ಥಿತರಿದ್ದರು.

No Comments

Leave A Comment