Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಮತ್ತೋರ್ವ ಅತ್ಯಾಚಾರಿಯನ್ನು ಸಾರ್ವಜನಿಕವಾಗಿ ಬಡಿದು ಕೊಂದ ನಾಗಾಗಳು

mob-attackದಿಮಾಪುರ(ನಾಗಾಲ್ಯಾಂಡ್): ಕಳೆದ ಮಾರ್ಚ್ 5 ರಂದು ನಾಗಾಗಳ ಉದ್ರಿಕ್ತ ಗುಂಪು ಅತ್ಯಾಚಾರ ಆರೋಪಿಯೊರ್ವನನ್ನು ಜೈಲಿನಿಂದ ಹೊರಕ್ಕೆ ಎಳೆದು ತಂದು ಥಳಿಸಿ ಹತ್ಯೆ ಮಾಡಿತ್ತು. ಇದೀಗ ಮತ್ತೊಬ್ಬ ಅತ್ಯಾಚಾರಿಯನ್ನು ಬಡಿದು ಕೊಂದಿರುವ ಘಟನೆ ಕೊಹಿಮಾದಲ್ಲಿ ನಡೆದಿದೆ.

ಮೃತನನ್ನು 35 ವರ್ಷದ ಹುಸೈನ್ ಅಲಿ ಎಂದು ಗುರುತಿಸಲಾಗಿದ್ದು, ಇತ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಎಸಗಿದ್ದಾನೆ ಇದರಿಂದ ಉದ್ರಿಕ್ತರ ಗುಂಪೊಂದು ಆತ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ ಎಂದು ದಿಮಾಪುರದ ಹೆಚ್ಚುವರಿ ಪೊಲೀಸ್ ಜಿಲ್ಲಾಧಿಕಾರಿ ಶೌಕ ಕಾಕೇತೊ ಅವರು ಹೇಳಿದ್ದಾರೆ.

ಕೇಕಿಯೋ ಗ್ರಾಮದಲ್ಲಿ ಸಂತ್ರಸ್ತೆ ಬಾಲಕಿ ವಾಸವಾಗಿದ್ದು, ಜುಲೈ 11ರಿಂದ ಕಾಣೆಯಾಗಿದ್ದಳು. ಬಾಲಕಿಯ ಹುಡುಕಾಟದಲ್ಲಿ ತೊಡಗಿದ್ದ ಗ್ರಾಮಸ್ಥರಿಗೆ ಜುಲೈ 14ರಂದು ಆರೋಪಿ ಹುಸೈನ್ ಅಲಿ ಮನೆಯಲ್ಲಿ ಬಾಲಕಿ ಪತ್ತೆಯಾಗಿದ್ದಾಳೆ ಇದರಿಂದ ಉದ್ರಿಕ್ತಗೊಂಡ ಗ್ರಾಮಸ್ಥರು ಆತನನ್ನು ಹಿಡಿದು ತೀವ್ರವಾಗಿ ಥಳಿಸಿದ್ದಾರೆ. ಈ ವೇಳೆ ಗ್ರಾಮದ ಮುಖ್ಯಸ್ಥರು ಆತನನ್ನು ರಕ್ಷಿಸಿ ಧನ್ಸಿರಿಪುರ್ ಪೊಲೀಸ್ ಔಟ್ ಪೋಸ್ಟ್ ಬಳಿ ಕೊಂಡೊಯ್ಯುವಾಗ ತೀವ್ರ ಗಾಯಗಳಿಂದ ಬಳಲುತ್ತಿದ್ದ ಆತ ಮಾರ್ಗ ಮಧ್ಯೆ ಅಸುನಿಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆ ಅತ್ಯಾಚಾರ ಆರೋಪಿಯಾಗಿದ್ದ 35 ವರ್ಷದ ಸಯ್ಯದ್ ಫರೀದ್ ಖಾನ್  20 ವರ್ಷದ ನಾಗಾ ಯುವತಿಯನ್ನು ರೇಪ್ ಮಾಡಿದ್ದ. ಹೀಗಾಗಿ ಕೆಳ ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿತ್ತು. ಈ ವೇಳೆ ಜೈಲಿನಲ್ಲಿದ್ದ ಆರೋಪಿಯನ್ನು ಕಳೆದ ಮಾರ್ಚ್ 5 ರಂದು ಜೈಲಿನಿಂದ ಹೊರಕ್ಕೆ ಎಳೆದು ತಂದ ಉದ್ರಿಕ್ತರ ಗುಂಪು ಕಾನೂನನ್ನು ಕೈಗೆತ್ತಿಕೊಂಡು, ಅತ್ಯಾಚಾರಿಯನ್ನು ಬೆತ್ತಲೆಗೊಳಿಸಿ ಧರಧರನೆ ರಸ್ತೆಯಲ್ಲಿ ನಾಲ್ಕು ಕಿ.ಮೀ.ವರೆಗೆ ಎಳೆದುಕೊಂಡು ಹೋಗಿ ದೊಣ್ಣೆ, ಕಂಬಿಗಳಿಂದ ಥಳಿಸಿ ಕೊಂದು ಹಾಕಿದ್ದರು.

 

No Comments

Leave A Comment