Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಸಾಮೂಹಿಕ ಲಕ್ಷ ಪ್ರದಕ್ಷಿಣೆ ಮತ್ತು ಪುರುಷೋತ್ತಮ ಮಾಸ ಆಚರಣೆ ಸಂಪನ್ನ

66ಉಡುಪಿಯ ಲಕ್ಷ್ಮೀವೆಂಕಟೇಶ ದೇವಸ್ಥಾನದಲ್ಲಿ ಪುರುಷೋತ್ತಮ ಮಾಸದ ಆರಣೆ ಅಂಗವಾಗಿ ದಿನಾಂಕ 17-6-2015 ರಿಂದ ಆರಂಭಗೊಂಡ ಲಕ್ಷ ಪ್ರದಕ್ಷಿಣೆ ಕಾರ್ಯಕ್ರಮ ಇಂದು 16-07-2015ರಂದು ಸಂಪನ್ನಗೊಂಡಿತು. ನಿರಂತರ 1ತಿಂಗಳುಗಳ ಕಾಲ ಬೆಳಿಗ್ಗೆ 6ರಿಂದ 12 ಗಂಟೆಯವರೆಗೆ ನೂರಾರು ಭಕ್ತರು ಪ್ರತಿನಿತ್ಯ ಶ್ರೀ ದೇವರಿಗೆ ಪ್ರದಕ್ಷಿಣೆ ಮತ್ತು ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನೆರವೇರಿತು.

ಇಂದು ಶ್ರೀ ದೇವರಿಗೆ ವಿಶೇಷ ಹೂವಿನ ಅಲಂಕಾರ ಹಾಗೂ ಸಾಮೂಹಿಕ ಲಕ್ಷ ಪ್ರದಕ್ಷಿಣೆ ಸಂಪನ್ನಗೊಂಡಿತು. ಶ್ರೀ ದೇವರಿಗೆ ಮಹಾಮಂಗಳಾರತಿ ಬಳಿಕ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ದೇವಳದ ಆಡಳಿತ ಮೊಕ್ತೇಸ್ತರರಾದ ಪಿ.ವಿ ಶೆಣೈ, ದೇವದಾಸ್ ಶ್ಯಾನ್‌ಭಾಗ್, ಗಣೇಶ್ ಕಿಣಿ, ನಾರಾಯಣ ಪ್ರಭು, ಪುಂಡಲೀಕ್ ಕಾಮತ್, ಮಟ್ಟಾರ ಸತೀಶ್ ಕಿಣಿ, ವ್ಯಾಸ ರಘುಪತಿ ಮಲ್ಯ ಮುಖ್ಯ ಅರ್ಚಕರಾದ ಸುರೇಶ್ ಭಟ್, ಮಧುಕರ್ ಭಟ್, ಹಾಗೂ ಜಿ.ಎಸ್.ಬಿ ಯುವಕ ಮಂಡಳದ ಸದಸ್ಯರು ಹಾಗೂ ಜಿ.ಎಸ್.ಬಿ ಮಹಿಳಾ ಮಂಡಳಿಯ ಸದಸ್ಯರು ನೂರಾರು ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

No Comments

Leave A Comment