Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಸ್ನ್ಯಾಪ್‌ ಡೀಲ್‌ ವ್ಯವಹಾರ ; ಮೊಬೈಲ್‌ ಬದಲು ಕಲ್ಲು ಪಡೆದ ವೈದ್ಯ

Snapಕಾಪು : ಆನ್‌ಲೈನ್‌ ಸ್ನ್ಯಾಪ್‌ ಡೀಲ್‌ ವ್ಯವಹಾರದ ಮೂಲಕ ಮೈಕ್ರೋಮ್ಯಾಕ್ಸ್‌ ಮೊಬೈಲ್‌ಗೆ ದುಡ್ಡು ಕಟ್ಟಿದ್ದ ವೈದ್ಯರಿಗೆ ಮೊಬೈಲ್‌ ಬದಲು ಬಾಕ್ಸ್‌ ಮೂಲಕ ಕಲ್ಲಿನ ತುಂಡನ್ನು ಪ್ಯಾಕ್‌ ಮಾಡಿ ಕಳುಹಿಸಿ ವಂಚಿಸಿದ ಘಟನೆ ಶಂಕರಪುರದಲ್ಲಿ ನಡೆದಿದೆ.

ಶಂಕರಪುರದ ವೈದ್ಯ ಸ್ಯಾವಿಯೋ ಡಿ.ಸೋಜ ಎಂಬವರು ಐದು ದಿನಗಳ ಹಿಂದೆ ಸ್ನ್ಯಾಪ್‌ ಡೀಲ್‌ ಕಂಪೆನಿಯ ಮುಖಾಂತರ ಆನ್‌ಲೈನ್‌ ಮೂಲಕವಾಗಿ 6,350 ರೂ. ಪಾವತಿಸಿ, ಮೈಕ್ರೋ ಮ್ಯಾಕ್ಸ್‌ ಹಾಟ್‌ ನೋಟ್‌ ಮೊಬೈಲ್‌ನ್ನು ಬುಕ್ಕಿಂಗ್‌ ಮಾಡಿದ್ದರು.

ಕೊರಿಯರ್‌ ತೆರೆದಾಗ ಕಾದಿತ್ತು ಆಘಾತ !
ಜು. 14ರಂದು ಸಂಜೆ ಸಾಡೆಕ್ಸ್‌ ಕೊರಿಯರ್‌ ಮೂಲಕವಾಗಿ ಸ್ನ್ಯಾಪ್‌ ಡೀಲ್‌ನ ಮೊಬೈಲ್‌ ಪಾರ್ಸೆಲ್‌ ಬಂದಿದ್ದು, ವೈದ್ಯ ಸ್ಯಾವಿಯೋ ಡಿ. ಸೋಜ ಅವರು ಕೊರಿಯರ್‌ ಬಾಯ್‌ ಹೋಗುವ ಮುನ್ನವೇ ಪಾರ್ಸೆಲ್‌ನ್ನು ತೆರೆದಿದ್ದರು. ಆದರೆ ಪಾರ್ಸೆಲ್‌ ತೆರೆದು ನೋಡಿದಾಗ ವೈದ್ಯರಿಗೆ ಆಘಾತ ಕಾದಿತ್ತು.

ಪಾರ್ಸೆಲ್‌ ಬಾಕ್ಸ್‌ನಲ್ಲಿ ಮೊಬೈಲ್‌ ಬದಲು ಥರ್ಮೋಕಾಲ್‌ ಮತ್ತು ಕಲ್ಲಿನ ಪೀಸ್‌ ದೊರಕಿದ್ದು, ಈ ಬಗ್ಗೆ ಕೊರಿಯರ್‌ನವರನ್ನು ಕೇಳಿದಾಗ ನಮಗೆ ಬಂದ ಬಾಕ್ಸ್‌ನ್ನು ನಿಮಗೆ ಡೆಲಿವರಿ ಮಾಡಿದ್ದೇವೆ. ಇದರಲ್ಲಿ ನಮ್ಮದೇನೂ ಕೈವಾಡವಿಲ್ಲ. ಈ ಬಗ್ಗೆ ನೀವು ಮೊಬೈಲ್‌ ಬುಕ್ಕಿಂಗ್‌ ಮಾಡಿರುವ ಸ್ನ್ಯಾಪ್‌ ಡೀಲ್‌ ಕಂಪೆನಿಯನ್ನು ಸಂಪರ್ಕಿಸಿ ಎಂಬ ಉತ್ತರ ದೊರಕಿತ್ತು.

ಈ ಬಗ್ಗೆ ಸ್ನ್ಯಾಪ್‌ ಡೀಲ್‌ ಕಂಪೆನಿಯನ್ನು ಸಂಪರ್ಕಿಸಿದಾಗ ಮೊದಲು ಇದನ್ನು ನಿರಾಕರಿಸಿದರಾದರೂ, ನಂತರ ಇದು ಹೇಗೆ ಹೀಗಾಗಿದೆ ಎಂದು ತಿಳಿಯುತ್ತಿಲ್ಲ. ಈ ಬಗ್ಗೆ ನಮ್ಮ ಉನ್ನತ ಸ್ಥರದ ಅಧಿಕಾರಿಗಳೊಂದಿಗೆ ಮಾತನಾಡುತ್ತೇವೆ ಎಂದು ಉತ್ತರ ನೀಡಿದರು.

48 ಗಂಟೆಯೊಳಗೆ ಹಣ ಮರಳಿಸುವ ಭರವಸೆ
ಆದರೆ ವಂಚನೆಗೊಳಗಾದ ವೈದ್ಯರು ತಮಗೆ ಕೂಡಲೇ ಸ್ಪಂಧನೆ ಸಿಗಬೇಕು ಎಂದು ಕೇಳಿದಾಗ ನಿಮಗೆ 48 ಗಂಟೆಯೊಳಗಾಗಿ ಉತ್ತರಿಸುತ್ತೇವೆ. ನಿಮ್ಮ ಹಣವನ್ನು ನಿಮಗೆ ಮರಳಿಸುತ್ತೇವೆ ಎಂಬ ಭರವಸೆ ನೀಡಿದ್ದಾರೆ. ಮೊಬೈಲ್‌ ಬದಲು ಕಲ್ಲಿನ ತುಂಡು ಸ್ವೀಕರಿಸಿರುವ ವೈದ್ಯ ಸ್ಯಾವಿಯೋ ಡಿ.ಸೋಜ ಅವರು ಸ್ನ್ಯಾಪ್‌ ಡೀಲ್‌ ಕಂಪೆನಿಯು ನೀಡಿರುವ 48 ಗಂಟೆ ಅವಧಿಗಾಗಿ ಕಾಯುತ್ತಿದ್ದು, ನಂತರ ಏನು ಮಾಡುವುದು ಎನ್ನುವುದರ ಬಗ್ಗೆ ಆಲೋಚಿಸುವುದಾಗಿ ಹೇಳಿದ್ದಾರೆ.

 

No Comments

Leave A Comment