Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಪತ್ತೇದಾರಿ ಡ್ರೋನ್ ಹಾರಾಟ: ಭಾರತೀಯ ರಾಯಭಾರಿ ಕಚೇರಿಗೆ ಪಾಕ್ ಸಮನ್ಸ್

Spy-Droneಇಸ್ಲಾಮಾಬಾದ್: ಅನಧಿಕೃತವಾಗಿ ಭಾರತದ ಪತ್ತೇದಾರಿ ಡ್ರೋನ್ ಪಾಕ್‌ ಆಕ್ರಮಿತ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಹಾರಾಡಿದಕ್ಕೆ ಪಾಕಿಸ್ತಾನ ಸರ್ಕಾರ ಭಾರತೀಯ ರಾಯಭಾರಿ ಕಚೇರಿಗೆ ಸಮನ್ಸ್ ನೀಡಿದೆ.

ನಿನ್ನೆ ಪಾಕ್ ಆಕ್ರಮಿತ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ಪತ್ತೇದಾರಿ ಡ್ರೋನ್ ಸಂಚರಿಸುತ್ತಿದ್ದು, ವೈಮಾನಿಕ ಛಾಯಾಚಿತ್ರಗಳನ್ನು ತೆಗೆಯುತ್ತಿದ್ದು, ತನ್ನ ಪ್ರದೇಶದ ಗಡಿ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿರುವ ಪಾಕಿಸ್ಥಾನ ಭಾರತೀಯ ರಾಯಭಾರಿ ಕಚೇರಿಗೆ ಸಮನ್ಸ್ ನೀಡಿದೆ ಎಂದು ಭಾರತೀಯ ಹೈ ಕಮಿಷನರ್ ಟಿಸಿಎ ರಾಘವನ್‌ ಭಾರತೀಯ ವಿದೇಶಾಂಗ ಕಚೇರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ.

ಪಾಕ್ ಆಕ್ರಮಿತ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಭೀಂಬರ್‌ ಎಂಬಲ್ಲಿ ಆಗಸದಲ್ಲಿ ಕಂಡು ಬಂದ ಭಾರತದ ಪತ್ತೇದಾರಿ ಡ್ರೋನ್‌ (ಮಾನವ ರಹಿತ) ವಿಮಾನವನ್ನು ಪಾಕ್ ಸೇನೆ ಹೊಡೆದುರುಳಿಸಿತ್ತು.

ಭಾರತದ ಬೇಹು ಡ್ರೋನ್‌ ವಿಮಾನವು ಪಾಕ್‌ ಸಾರ್ವಭೌಮತೆಯ ವಾಯು ಪ್ರದೇಶವನ್ನು ಉಲ್ಲಂಘಿಸಿ ಒಳ ನುಗ್ಗಿ ಬಂದ ಕಾರಣ ಅದನ್ನು ಪಾಕ್‌ ಸೇನೆ ಹೊಡೆದುರುಳಿಸಿವೆ ಎಂದು ಇಂಟರ್‌ ಸರ್ವಿಸಸ್‌ ಪಬ್ಲಿಕ್‌ ರಿಲೇಶನ್ಸ್‌ (ಐಎಸ್‌ಪಿಆರ್‌) ಮೂಲಗಳನ್ನು ಉಲ್ಲೇಖಿಸಿತ್ತು.

No Comments

Leave A Comment