Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

81ರ ವಯಸ್ಸಿನ ಕ್ಯಾನ್ಸರ್ ರೋಗಿಯ ಹೃದಯಕ್ಕೆ ಹಸುವಿನ ಕವಾಟ!

Alluri-Seethamaಚೆನ್ನೈ: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ 81 ರ ವಯಸ್ಸಿನ ಕ್ಯಾನ್ಸರ್ ರೋಗಿಯ ಹೃದಯದಲ್ಲಿನ ಕವಾಟದ ಬದಲಿಗೆ ಹಸುವಿನ ಕವಾಟ ಅಳವಡಿಸುವ ಮೂಲಕ ವೈದ್ಯಕೀಯ ಜಗತ್ತಿಗೆ ಅಚ್ಚರಿ ಮೂಡಿಸಲಾಗಿದೆ.

ಚೆನ್ನೈನ ಫ್ರಾಂಟೀರ್ ಲೈಫ್ ಲೈನ್ ಆಸ್ಪತ್ರೆಯ ವೈದ್ಯರು ಬಯೋಪ್ರೊಸ್ಥೆಟಿಕ್ (ಯಾವುದಾದರು ಪ್ರಾಣಿಯ ಅಂಗಾಂಶ ಅಥವಾ ಜೀವಕೋಶ) ಮೂಲಕ ಅಲ್ಲೂರಿ ಸೀತಮ್ಮ ಎನ್ನುವವರ ಹೃದಯದಲ್ಲಿನ ಕವಾಟವೊಂದಕ್ಕೆ ಹಸುವಿನ ಕವಾಟ ಬಳಸಿದ್ದು, ಈಗ ಅವರು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಅಲ್ಲೂರಿ ಸೀತಮ್ಮ ಎಂಬುವರು ಹೃದಯ ಕವಾಟ ಸೋರಿಕೆಯಿಂದ ಬಳಲುತ್ತಿದ್ದರು. 11 ವರ್ಷಗಳ ಹಿಂದೆ ಅವರಿಗೆ ಹೃದಯ ಕಸಿ ಮಾಡಲಾಗಿತ್ತು. ಅವರ ಮೂಲ ಕವಾಟ ವರ್ಷದಿಂದ ವರ್ಷಕ್ಕೆ ಕಿರಿದಾಗುತ್ತಿತ್ತು. ಜತೆಗೆ ರಕ್ತದೊತ್ತಡವು ಹೆಚ್ಚಾಗಿ ಅವರ ಕವಾಟ ಆರೋಗ್ಯವಾಗಿರಲ್ಲಿಲ್ಲ, ಜತೆಗೆ ಶಸ್ತ್ರ ಚಿಕಿತ್ಸೆಗೊಳಪಡುವ ಪರಿಸ್ಥಿತಿಯಲ್ಲಿ ಸೀತಮ್ಮನವರು ಇರಲಿಲ್ಲ ಎಂದು ವೈದ್ಯರು ಹೇಳಿದ್ದಾರೆ.

No Comments

Leave A Comment