Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ನಿಟ್ಟೂರು ಪ್ರೌಢಶಾಲೆಯ ವಿದ್ಯಾರ್ಥಿಗಳಿ೦ದ ನೇಜಿ ನೆಡುವ ಕಾರ್ಯಕ್ರಮ

DSC_8443ಉಡುಪಿ:ನಿಟ್ಟೂರು ಪ್ರೌಢಶಾಲೆ, ಉಡುಪಿ ಇಲ್ಲಿಯ 10ನೇ ತರಗತಿ ವಿದ್ಯಾರ್ಥಿಗಳು ಕಕ್ಕುಂಜೆ ಬಯಲಿನಲ್ಲಿ ಸುಮಾರು 30ಸೆಂಟ್ಸ್‌ಗಿಂತಲೂ ಅಥಿಕ ವಿಸ್ತೀರ್ಣತೆಯ ಕೆಸರು ಗದ್ದೆಯಲ್ಲಿ ನೇಜಿ ನೆಟ್ಟು ಸಂಭ್ರಮಿಸಿದರು.

ಕೆಸರು ಮಣ್ಣಿನ ಸಿಂಚನದೊಂದಿಗೆಕೃಷಿ ಚಟುವಟಿಕೆಯ ನೇರ ಅನುಭವ ವಿದ್ಯಾರ್ಥಿಗಳು ಪಡೆದದ್ದು ವಿಶಿಷ್ಟವಾಗಿತ್ತು. ಈ ಸಂದರ್ಭದಲ್ಲಿವಿದ್ಯಾರ್ಥಿಗಳಿಗಾಗಿ ಕೆಸರುಗದ್ದೆ ಓಟ ವಿದ್ಯಾರ್ಥಿಗಳಿಗೆ ಹೊಸ ಚೈತನ್ಯ ತುಂಬಿತ್ತು.DSC_8426
ನೇಜಿ ನಾಟಿಯಲ್ಲಿ ಉತ್ತಮ ನಿರ್ವಹಣೆಗೈದ ವಿದ್ಯಾರ್ಥಿಗಳ ನಾಟಿ ಗದ್ದೆಯ ಮಾಲಿಕರು ಮತ್ತು ಪೋಷಕರಾದ ವಾಸುದೇವ ನಾಯ್ಕ ಬಹುಮಾನ ನೀಡಿ ಗೌರವಿಸಿದರು.

ವಿದ್ಯಾರ್ಥಿಗಳ ನಾಟಿ ಕೆಲಸದಲ್ಲಿ ಸುಶೀಲ, ಸುನಂದ, ಸುಲೋಚನ ನೆರವಾದರು. ಶಾಲಾ ಮುಖ್ಯೋಪಾಧ್ಯಾಯರಾದ ಮುರಲಿ ಕಡೆಕಾರ್‌ರ ವಿಶೇಷ ಆಸಕ್ತಿ, ಶಿಕ್ಷಕರ ಸಹಕಾರ ವಿದ್ಯಾರ್ಥಿಗಳಿಗೆ ಕೃಷಿ ದರ್ಶನ ಗೈಯುವಲ್ಲಿ ಸಫಲವಾಯಿತು

No Comments

Leave A Comment