Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಇರಾನ್ ಜೊತೆ ಪರಮಾಣು ಒಪ್ಪಂದಕ್ಕೆ ಒಬಾಮಾ ಪ್ರಶಂಸೆ

obamaವಾಷಿಂಗ್ಟನ್: ಇರಾನ್ ಹಾಗೂ ಇತರ ಆರು ಜಾಗತಿಕ ಶಕ್ತಿಗಳ ನಡುವಿನ ಐತಿಹಾಸಿಕ ಪರಮಾಣು ಒಪ್ಪಂದವನ್ನು ಪ್ರಶಂಸಿಸಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು, ಅದರ ಕ್ರೆಡಿಟ್‌ಅನ್ನು ‘ಅಮೆರಿಕ ರಾಜತಾಂತ್ರಿಕತೆ’ಗೆ ನೀಡಿದ್ದಾರೆ.

ಐತಿಹಾಸಿಕ ಪರಮಾಣು ಒಪ್ಪಂದ ಕುರಿತು ಶ್ವೇತಭವನದಲ್ಲಿ ಹೇಳಿಕೆ ನೀಡಿರುವ ಅಮೆರಿಕ ಅಧ್ಯಕ್ಷಕರು, ಈ ಒಪ್ಪಂದದ ಮೂಲಕ ಅಮೆರಿಕದ ರಾಜತಾಂತ್ರಿಕತೆ ನೈಜ ಮತ್ತು ಅರ್ಥಪೂರ್ಣ ಬದಲಾವಣೆ ತರಬಹುದು ಎಂದು ಹೇಳಿದ್ದಾರೆ.

ಇದೇ ವೇಳೆ ಇರಾನ್ ಮೇಲೆ ವಿಧಿಸಿದ್ದ ನಿಷೇಧವನ್ನು ತೆರವುಗೊಳಿಸುತ್ತಿರುವುದಾಗಿ ಘೋಷಿಸಿದ ಅಮೆರಿಕ ಅಧ್ಯಕ್ಷಕರು, ನಿಯಮಗಳನ್ನು ಉಲ್ಲಂಘಿಸಿದರೆ ಮತ್ತೆ ನಿಷೇಧ ಜಾರಿ ಮಾಡುವುದಾಗಿ ಎಚ್ಚರಿಸಿದ್ದಾರೆ. ಅಲ್ಲದೆ, ಅಣ್ವಸ್ತ್ರ ವಿಸ್ತರಣೆಗೆ ನಿರ್ಬಂಧ ವಿಧಿಸಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಸುದೀರ್ಘ 12 ವರ್ಷಗಳ ನಂತರ ಇಂದು ಇರಾನ್, ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಚೀನಾ, ರಷ್ಯಾ ಮತ್ತು ಜರ್ಮನಿ ನಡುವೆ ಮಹತ್ವದ ಪರಮಾಣು ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

No Comments

Leave A Comment