Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಮಣಿಪಾಲ:ಮುನಿಯಾಲು ಆಯುರ್ವೇದ ಆಸ್ಪತ್ರೆಯಲ್ಲಿ ಉದರ ರೋಗಗಳ ಉಚಿತ ಚಿಕಿತ್ಸಾ ಶಿಬಿರ

DSC_0821ಮಣಿಪಾಲದ ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಶಲ್ಯ ವಿಭಾಗದಿಂದ ಉದರ ಸಂಬಂಧಿಸಿದ ರೋಗಗಳ ಉಚಿತ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದ್ದು, ದಿನಾಂಕ 13ರಂದು ಆಸ್ಪತ್ರೆಯ ನಿರ್ದೇಶಕರಾದ ತಾರಾನಾಥ ಶೆಟ್ಟಿಯವರು ಶಿಬಿರವನ್ನು ಉದ್ಘಾಟಿಸಿದರು.

ಸಂಸ್ಥೆಯ ಪ್ರಾಂಶುಪಾಲರಾದ ಡಾ. ಸತ್ಯನಾರಾಯಣ ಬಿ, ಉಪಪ್ರಾಂಶುಪಾಲರಾದ ಡಾ.ದಿನೇಶ್ ನಾಯಕ್, ಶಲ್ಯ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ.ರಜನೀಶ್ ವಿ.ಗಿರಿ, ಮತ್ತು ತಜ್ಞ ವೈದ್ಯರಾದ ಡಾ.ಗುರುರಾಜ್ ತಂತ್ರಿ ಮತ್ತು ಡಾ.ಮಂಜುನಾಥ ಕಂಠಿಯವರು ಉಪಸ್ಥಿತರಿದ್ದರು.

ದಿನಾಂಕ 18-7-2015ರವರೆಗೆ ಉಚಿತ ಚಿಕಿತ್ಸಾ ಶಿಬಿರವು ನಡೆಯಲ್ಲಿದ್ದು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

No Comments

Leave A Comment