Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಉಡುಪಿಯಲ್ಲಿ ಜಯಂಟ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷರುಗಳ ಅಂತರ್ ರಾಜ್ಯ ಮಟ್ಟದ ಸಮಾವೇಶ

ಉಡುಪಿ:ಉಡುಪಿ ಜಯಂಟ್ಸ್ ಗ್ರೂಫ್ ಇದರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ, ತಮಿಳುನಾಡು, ಗೋವಾ ಹಾಗೂ ಮಹಾರಾಷ್ಟ್ರ್ರ ರಾಜ್ಯಗಳ ಅಂತರ್ ರಾಜ್ಯ ಜಯಂಟ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷರುಗಳ ಅಂತರ್ ರಾಜ್ಯ ಮಟ್ಟದ ಸಮಾವೇಶವು ಉಡುಪಿಯ ಹೋಟೆಲ್ ಸ್ವದೇಶಿ ಹೆರಿಟೇಜ್‌ನ ಸಭಾಂಗಣದಲ್ಲಿ ನೆರವೇರಿತು.

ಜಯಂಟ್ಸ್‌ನ ಅಂತರಾಷ್ಟ್ರೀಯ ಉಪಾಧ್ಯಕ್ಷರಾದ ಲಕ್ಷ್ಮಣ್‌ರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಅವರು ತಮ್ಮ ಉದ್ಘಾಟನ ಭಾಷಣದಲ್ಲಿ ಜಯಂಟ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷರುಗಳು ಸಂಸ್ಥೆಯ ಬೆನ್ನೆಲುಬಾಗಿದ್ದು ಅವರ ನಿರಂತರ ಸಹಕಾರ ಹಾಗೂ ಸಂಸ್ಥೆಯಲ್ಲಿ ದುಡಿದ ಅನುಭವಗಳನ್ನು ನೂತನವಾಗಿ ಆಯ್ಕೆಯಾದ ಅಧ್ಯಕ್ಷರುಗಳಿಗೆ ತಮ್ಮ ಅನುಭವದ ಮಾತುಗಳಿಂದ ಮಾರ್ಗದರ್ಶನಗಳಿಂದ ಸಂಸ್ಥೆಯಿಂದ ನಡೆಯುವ ಜನಸೇವಾ ಚಟುವಟಿಕೆಗಳನ್ನು ನಿರಂತರವಾಗಿ ಪ್ರ್ರೋತ್ಸಾಹಿಸಿ ಸಂಸ್ಥೆಯ ಬೆಳವಣಿಗೆಗೆ ಸಹಕಾರ ನೀಡುವಂತೆ ಕೋರಿದರು.

ಸಮಾವೇಶದಲ್ಲಿ ದೀಪವ್ಯಾಸ್, ಮಾಜಿ ಅಧ್ಯಕ್ಷರುಗಳ ಒಕ್ಕೂಟದ ಮುಖ್ಯಸ್ಥರು, ಪ್ರೊಫೆಸರ್. ವಿನೋದ್ ಆರ್. ಗಾಯಿಕ್ವಾಡ್, ಜಯಂಟ್ಸ್‌ನ ಕೇಂದ್ರ ಸಮಿತಿಯ ಸದಸ್ಯರಾದ ದಿನಕರ ಅಮೀನ್, ಜಯಂಟ್ಸ್‌ನ ಸ್ಪೆಷಲ್ ಕಮಿಟಿಯ ಸದಸ್ಯರಾದ ಗಗನ್ ಜೈನ್, ಜಿವ್ರಾಜ್ ನಗರಿಯಾ, ಕರ್ನಾಟಕದ ಫೆಡರೇಶನ್ ಅಧ್ಯಕ್ಷರಾದ ಶ್ರೀಮತಿ ಪದ್ಮಜ ಊಮರ್ಜಿ ಇವರುಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಯೋಜಕರಾದ ಜಯರಾಮ್ ರಾವ್, ಜಯಂಟ್ಸ್‌ನ ವಲಯ ನಿರ್ದೇಶಕರಾದ ದೇವದಾಸ್ ಕಾಮತ್, ಮಧುಸೂದನ್, ದಿನೇಶ್ ಪುತ್ರನ್, ಅಶೋಕ್ ಕುಮಾರ್ ಕೊಡವೂರು, ಸ್ಥಾಪಕ ಅಧ್ಯಕ್ಷರಾದ ವೇಣುಗೋಪಾಲ್ ರಾವ್, ನವೀನ್‌ಚಂದ್ರ ಭಂಡಾರಿ, ಜಗದೀಶ್ ಅಮೀನ್, ರಾಜೇಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಉಡುಪಿ ಜಯಂಟ್ಸ್ ನ ಅಧ್ಯಕ್ಷರಾದ ವಿಶ್ವನಾಥ್ ಶೆಣೈ ಸ್ವಾಗತಿಸಿದರು, ಗಣೇಶ್ ಕೆ.ಆರ್ ವಂದನಾರ್ಪಣೆ ಗೈದರು.ಶ್ರೀಮತಿ ಅಮಿತಾಂಜಲಿ ಕಿರಣ್ ಕಾರ್ಯಕ್ರಮ ನಿರೂಪಣೆಗೈದರು.

ದಿನಾಂಕ 12 ರಂದು ಜಯಂಟ್ಸ್‌ನ ಮಾಜಿ ಅಧ್ಯಕ್ಷರುಗಳ ಕಾರ್ಯಗಾರ ಮತ್ತು ಸಮಾರೋಪ ಸಮಾರಂಭ ಜರುಗಿತು. ಡಾ| ಸುಧೀರ್‌ರಾಜ್, ಡಾ| ಹರೀಶ್ ಜೋಶಿ, ಡಾ| ವಿಜೇಂದ್ರ ವಸಂತ್ ಇವರುಗಳು ಜಯಂಟ್ಸ್‌ನ ಮಾಜಿ ಅಧ್ಯಕ್ಷರುಗಳಿಗೆ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಕ್ರಮ ನಿರೂಪಿಸಿಕೊಟ್ಟರು.

ಸಮಾರೋಪ ಸಮಾರಂಭದಲ್ಲಿ ನೂತನವಾಗಿ ಆಯ್ಕೆಗೊಂಡ ಜಯಂಟ್ಸ್‌ನ ಸ್ಪೆಷಲ್ ಕಮಿಟಿಯ ಸದಸ್ಯರಾದ ಗಗನ್ ಜೈನ್ ಇವರನ್ನು ಅಂತರಾಷ್ಟ್ರೀಯ ಉಪಾಧ್ಯಕ್ಷರಾದ ಲಕ್ಷ್ಮಣ್‌ರವರು ಮೈಸೂರು ಪೇಟ ತೊಡಿಸಿ ಶಾಲು ಹೊದಿಸಿ, ಫಲ ಪುಷ್ಪ, ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಉಡುಪಿ ಜಯಂಟ್ಸ್‌ನ ಅಧ್ಯಕ್ಷರಾದ ವಿಶ್ವನಾಥ್ ಶೆಣೈ ಕೇಂದ್ರೀಯ ಸಮಿತಿಯ ಸದಸ್ಯರಾದ ದಿನಕರ ಅಮೀನ್ ಕಾರ್ಯದರ್ಶಿಯಾದ ಗಣೇಶ್ ಕೆ. ಆರ್. ಮತ್ತು ಉಡುಪಿ ಜಯಂಟ್ಸ್‌ನ ಮಾಜಿ ಅಧ್ಯಕ್ಷರುಗಳು ಹಾಗೂ ವಿವಿಧ ರಾಜ್ಯಗಳಿಂದ ಆಗಮಿಸಿದ ನೂರಾರು ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

DSC_5641

DSC_5648

DSC_5681

DSC_5830

DSC_5851

DSC_5880

No Comments

Leave A Comment