Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಅಲೆವೂರಿನಲ್ಲಿ ಕೆಸರುಡೊಂಜಿ ದಿನ ಆಚರಣೆ

EVOORಉಡುಪಿ; ಅಲೆವೂರು ಶ್ರೀಸಾರ್ವಜನಿಕ ಗಣೇಶೋತ್ಸವ ಸಮಿತಿಯು ಪ್ರತಿವರ್ಷ ನಡೆಸುವ ‘ಕೆಸರುಡೊಂಜಿ ದಿನ’ ಗ್ರಾಮೀಣ ಕ್ರೀಡೋತ್ಸವ ರವಿವಾರ ವಿಶಿಷ್ಟವಾಗಿ ಮೂಡಿ ಬಂತು.

ಉಡುಪಿ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ ಅಲೆವೂರು ವಿ ಫೋರ್ ಗ್ರೀನ್ಸ್ ಬಳಿಯ ದೊಡ್ಡಮನೆ ಗದ್ದೆಯಲ್ಲಿ ನಡೆದ ಗ್ರಾಮೀಣ ಕ್ರೀಡೋತ್ಸವವನ್ನು ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಉದ್ಘಾಟಿಸಿದರು. ಲಯನ್ಸ್ ಗವರ್ನರ್ ಶ್ರೀಧರ್ ಶೇಣವ, ತಾಪಂ ಸದಸ್ಯ ಪ್ರವೀಣ್ ಶೆಟ್ಟಿ, ಅಲೆವೂರು ಗ್ರಾಪಂ ಅಧ್ಯಕ್ಷ ಶ್ರೀಕಾಂತ್ ನಾಯಕ್, ಕೆಸಿಎ ಬ್ಯಾಂಕ್ ಅಧ್ಯಕ್ಷ ಶ್ರೀಧರ್ ಶೆಟ್ಟಿ ಅಲೆವೂರು, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್‌ಕುಮಾರ್ ಶೆಟ್ಟಿ, ಅಶೋಕ್ ಕುಮಾರ್ ಕೊಡವೂರು, ಹರೀಶ್ ಕಿಣಿ, ಅಶೋಕ್‌ಕುಮಾರ್ ಭಂಡಾರಿ, ಸಮಿತಿಯ ಅಧ್ಯಕ್ಷ ಮಂಜೇಶ್ ಕುಮಾರ್, ತೆಂಕುಮನೆ ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.

ಕ್ರೀಡಾಕೂಟದ ಸೆಲ್ಫಿ ಫೋಟೋಗ್ರಫಿ ಸ್ಪರ್ಧೆಗೆ ಚಲನಚಿತ್ರ ನಟ ರಕ್ಷಿತ್ ಶೆಟ್ಟಿ ಚಾಲನೆ ನೀಡಿದರು. ಕ್ರೀಡಾಕೂಟ ಆರಂಭಕ್ಕೆ ಮುನ್ನ ಅತಿಥಿ ಗಳು ಗದ್ದೆಗೆ ಹಾಲೆರೆದರು. ರಂಜನಾ ಶ್ರೀಧರ್ ಶೆಟ್ಟಿ, ನಿರೂಪಮಾ ಪ್ರಸಾದ್ ಸೇರಿದಂತೆ ಹಲವು ಮಹಿಳೆಯರು ಗದ್ದೆಯಲ್ಲಿ ತೆಂಗಿನಕಾಯಿ ಒಡೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಕ್ರೀಡಾಕೂಟದ ಗದ್ದೆಯಲ್ಲಿ ಕಂಬಳದ ಕೋಣವನ್ನು ಓಡಿಸಲಾಯಿತು. ಬಳಿಕ ಕೆಸರುಗದ್ದೆ ಓಟ, ಹಿಮ್ಮುಖ ಓಟ, ಗೋಣಿಚೀಲ ಓಟ, ಹಗ್ಗಜಗ್ಗಾಟ, ಪಿರಮಿಡ್ ರಚನೆ, ತಪ್ಪಂಗಾಯಿ, ಮಡಕೆ ಒಡೆಯುವ ಸ್ಪರ್ಧೆ ಸೇರಿದಂತೆ ಹಲವು ಗ್ರಾಮೀಣ ಕ್ರೀಡಾಕೂಟಗಳನ್ನು ಏರ್ಪಡಿಸಲಾಗಿತ್ತು.

ಗ್ರಾಮಸ್ಥರೆಲ್ಲರೂ ಇದರಲ್ಲಿ ಪಾಲ್ಗೊಂಡು ಕೆಸರಿನಲ್ಲಿ ಮಿಂದೆದ್ದು ಸಂಭ್ರಮಪಟ್ಟರು. ಮಧ್ಯಾಹ್ನ ವೇಳೆ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಹಾಗೂ ಸಾರ್ವಜನಿಕರಿಗೆ ಭೋಜನದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಗಂಜಿ, ಹುರುಳಿ ಚಟ್ನಿ ಹಾಗೂ ಉಪ್ಪಿನಕಾಯಿಯ ರುಚಿಯನ್ನು ಎಲ್ಲರೂ ಸವಿದರು.

No Comments

Leave A Comment