Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಒಳಕಾಡು ಸರ್ಕಾರಿ ಪ್ರೌಢಶಾಲೆ ಪ್ರತಿಭಾ ಪುರಸ್ಕಾರ, ಶಾಲಾ ಕ್ಯಾಲೆಂಡರ್‌ ಬಿಡುಗಡೆ- ಶಿಕ್ಷಣ ಮಾರ್ಗದರ್ಶಿ ಉಪಯುಕ್ತ

09udp-volakadಉಡುಪಿ: ಶಾಲಾ ಪಠ್ಯದ ಜೊತೆಗೆ ಮಾಧ್ಯಮಗಳಲ್ಲಿ ಪ್ರಕಟವಾಗುವ ಶಿಕ್ಷಣ ಮಾರ್ಗದರ್ಶಿಗಳ ಲಾಭ ಪಡೆದು ಉತ್ತಮ ಫಲಿತಾಂಶ ದಾಖಲಿಸಲು ವಿದ್ಯಾರ್ಥಿಗಳು ಪ್ರಯತ್ನಿಸಬೇಕು ಎಂದು ಒಳಕಾಡು ಶಾಲಾ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಅಮೃತ್‌ ಶೆಣೈ ಹೇಳಿದರು.

ಒಳಕಾಡು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಗುರುವಾರ ಏರ್ಪಡಿ ಸಿದ್ದ ಪ್ರತಿಭಾ ಪುರಸ್ಕಾರ ಮತ್ತು 2015–16ನೇ ಸಾಲಿನ  ಶಾಲಾ ಕ್ಯಾಲೆಂಡರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾ ಡಿದ ಅವರು, ವಿದ್ಯಾರ್ಥಿಗಳು ದುಶ್ಚಟ ಗಳಿಗೆ ಬಲಿಯಾಗದೇ ಶಿಕ್ಷಣ ಪಡೆದು ಉದ್ಯೋಗಾರ್ಥಿಗಳಾದ ನಂತರ ಪೋಷ ಕರು, ವಿದ್ಯಾಸಂಸ್ಥೆಯನ್ನು ಮರೆಯ ಬಾರದು ಎಂದರು.

ಪ್ರತಿಭಾ ಪುರಸ್ಕಾರ ಸ್ವೀಕರಿಸಿದ ವಿದ್ಯಾರ್ಥಿ ಟಿ.ಕೃಷ್ಣ ಮಾತನಾಡಿ, 2014–15ನೇ ಸಾಲಿನ ಎಸ್ಸೆಸ್ಸೆಲ್ಸಿ ಪಠ್ಯಕ್ರಮ ಹೊಸದಾಗಿತ್ತು. ಶಿಕ್ಷಕರು ಮತ್ತು ನಮ್ಮ ಪರಿಶ್ರಮದಿಂದ ಉತ್ತಮ ಫಲಿತಾಂಶ ದಾಖಲಿಸಲು ಸಾಧ್ಯವಾಯಿತು ಎಂದರು.

ಪಿಯುಸಿ ಮತ್ತು ಪದವಿ ಶಿಕ್ಷಣಕ್ಕೆ ಬ್ಯಾಂಕ್‌ ಮೂಲಕ ಸಾಲ ನೀಡಲಾಗು ವುದು. ಖಾತೆ ಇಲ್ಲದ ವಿದ್ಯಾರ್ಥಿಗಳು ಬ್ಯಾಂಕ್‌ ಖಾತೆ ತೆರೆಯಿರಿ ಎಂದು ಕೆನರಾ ಬ್ಯಾಂಕ್‌ ಉಡುಪಿ ಕೋರ್ಟ್‌ ಶಾಖೆಯ ಪ್ರಬಂಧಕಿ ಲಿನೆಟ್‌ ಪಿಂಟೊ ಸಲಹೆ ನೀಡಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿ ಯಲ್ಲಿ ಉತ್ತೀರ್ಣರಾದ 18 ವಿದ್ಯಾರ್ಥಿ ಗಳನ್ನು ಅಭಿನಂದಿಸಲಾಯಿತು.
ಉದ್ಯಮಿ ಸುಕೇಶ್‌ ಕುಂದರ್‌ ಶಾಲಾ ಕ್ಯಾಲೆಂಡರ್‌ ಬಿಡುಗಡೆ ಮಾಡಿದರು. ನಗರಸಭಾ ಸದಸ್ಯೆ ಗೀತಾ ರವಿಶೇಟ್‌ ಅಧ್ಯಕ್ಷತೆ ವಹಿಸಿದ್ದರು.

ಶಾಲಾಭಿವೃದ್ಧಿ ಸಮಿತಿಯ ಉಪಾ ಧ್ಯಕ್ಷೆ ಇಂದುರಮಾನಂದ ಭಟ್‌, ಸದಸ್ಯ ರಾದ ರಘುರಾಮ ಆಚಾರ್ಯ, ಉಮೇಶ್‌ ನಾಯಕ್‌, ಯಜ್ಞೇಶ್‌ ಆಚಾರ್ಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ರಾಖಿ ಮತ್ತು ಬಳಗದವರು ಪ್ರಾರ್ಥಿ ಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ನಿರ್ಮಲಾ ಬಿ ರಾವ್‌ ಸ್ವಾಗತಿಸಿದರು. ಅನಂತ ನಾಯಕ್‌ ಮತ್ತು ಕಿಶನ್‌ ನಾಯಕ್‌ ಕಾರ್ಯಕ್ರಮ ನಿರೂಪಿಸಿದರು.

* ವಿದ್ಯಾಭ್ಯಾಸದ ಜೊತೆಗೆ ಶಿಸ್ತು, ಮಾನವೀಯತೆಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಇದು ಭವಿಷ್ಯದಲ್ಲಿ ಯಶಸ್ಸು, ಗೌರವ ಪಡೆಯಲು ಸಹಕಾರಿಯಾಗುತ್ತದೆ.

No Comments

Leave A Comment