Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಕರಾವಳಿಯಲ್ಲಿ ಮಳೆಗೆ ಇಬ್ಬರು ಮಕ್ಕಳು ಬಲಿ

uly15 ಕರಾವಳಿ ಮತ್ತು ಕೊಡಗು ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು, ಕುಂದಾಪುರ ಮತ್ತು ಬಂಟ್ವಾಳ ತಾಲ್ಲೂಕಿನಲ್ಲಿ ಮಳೆ ಸಂಬಂಧ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.

ಮಂಗಳೂರು ವರದಿ: ಬಂಟ್ವಾಳದ ಕುಂಜತ್ಕಲ್‌ನಲ್ಲಿ ಗುಡ್ಡವೊಂದು ಜರಿದು  ಮಹಮ್ಮದ್‌ ಹನೀಫ್‌ ಅವರ ಮನೆ ಗೋಡೆ ಮೇಲೆ ಬಿದ್ದುದರಿಂದ ಅವರ ಪುತ್ರ ಏಳು ವರ್ಷದ ಮಹಮ್ಮದ್‌ ಹರ್ಷದ್‌ ಸಾವನ್ನಪ್ಪಿದ್ದಾನೆ. ಕುಂದಾಪುರ ತಾಲ್ಲೂಕಿನ ಚಿತ್ತೂರು ಗ್ರಾಮದ ಮಾರಣಕಟ್ಟೆಯಲ್ಲಿ ಒಂಬತ್ತು ವರ್ಷದ ಬಾಲಕಿ ವಿಸ್ಮಯ ಕಾಲು ಜಾರಿ ಚಕ್ರಾ ನದಿಗೆ ಬಿದ್ದು ನೀರುಪಾಲಾಗಿದ್ದಾಳೆ.

ಉಡುಪಿಯಲ್ಲಿ ಬಿಡುವು ನೀಡದ ಮಳೆ ಬೆಳಗಿನ ಜಾವದ ವರೆಗೆ ನಿರಂತರವಾಗಿ ಸುರಿದ ಪರಿಣಾಮ ನಗರದ ತಗ್ಗು ಪ್ರದೇಶಗಳಲ್ಲಿರುವ ಹಲವು ಮನೆಗಳಿಗೆ ನೀರು ನುಗ್ಗಿತು. ಉಡುಪಿ ರಾಜಾಂಗಣದಲ್ಲಿ ಕೃತಕ ನೆರೆ ಗೋಚರಿಸಿತು.

ಘಟ್ಟ ಪ್ರದೇಶದಲ್ಲಿ ಮತ್ತು ಪರಿಸರದಲ್ಲಿ ಗುರುವಾರ ಬಿದ್ದ ಭಾರಿ ಮಳೆಗೆ ಬ್ರಹ್ಮಾವರ ಮತ್ತು ಕೋಟ ಪರಿಸರದ ಎಲ್ಲಾ ನದಿಗಳು ಉಕ್ಕಿಹರಿದು ತಗ್ಗು ಪ್ರದೇಶಗಳಲ್ಲಿ ನೆರೆ ಕಾಣಿಸಿಕೊಂಡಿದೆ. ಗುರುವಾರ ಮುಂಜಾನೆಯಿಂದ ಶುಕ್ರವಾರ ಮುಂಜಾನೆಯವರೆಗೆ ಬ್ರಹ್ಮಾವರದಲ್ಲಿ ಸರಾಸರಿ 260 ಮಿ.ಮೀ. ಮಳೆ ಸುರಿದಿತ್ತು. ನದಿಗಳು ಉಕ್ಕಿ ಹರಿದು ತಗ್ಗು ಪ್ರದೇಶದಲ್ಲಿ ನಾಟಿ ಮಾಡಿದ ಗದ್ದೆಗಳಲ್ಲಿ ನೆರೆ ನೀರು ನಿಂತುಕೊಂಡಿರುವ ದೃಶ್ಯ ಕೆಲವೆಡೆ ಕಂಡು ಬಂತು.

ಕೊಡಗಿನಲ್ಲಿ ದಿನವಿಡೀ ಮಳೆ  (ಮಡಿಕೇರಿ ವರದಿ): ಕೊಡಗು ಜಿಲ್ಲೆಯಾದ್ಯಂತ ಶುಕ್ರವಾರ ಉತ್ತಮ ಮಳೆಯಾಗಿದೆ. ದಿನವಿಡೀ ಮಳೆ ಸುರಿಯಿತಾದರೂ ರಭಸ ಇರಲಿಲ್ಲ.

ಮಡಿಕೇರಿಯಲ್ಲಿ ಮಳೆಯ ಜತೆ ಚಳಿ, ಶೀತಗಾಳಿ ಬೀಸುತ್ತಿತ್ತು. ಮಡಿಕೇರಿ, ನಾಪೋಕ್ಲು, ಶ್ರೀಮಂಗಲ, ಶಾಂತಳ್ಳಿ, ಭಾಗಮಂಡಲ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮಳೆಯಾಗಿದೆ. ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

No Comments

Leave A Comment