Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ರಮ್ಜಾನ್‌ ದಾನ ಪಡೆಯಲು ನೂಕುನುಗ್ಗಲು: ಕಾಲ್ತುಳಿತಕ್ಕೆ 23 ಬಲಿ

RAmzanಢಾಕಾ: ಉತ್ತರ ಬಾಂಗ್ಲಾದೇಶದ ಮೈಮೇನ್‌ಸಿಂಗ್‌ ನಗರದಲ್ಲಿ ಉದ್ಯಮಿಯೋರ್ವರು ಪವಿತ್ರ ರಮ್ಜಾನ್‌ ಪ್ರಯುಕ್ತ ಏರ್ಪಡಿಸಿದ್ದ ಉಚಿತ ಬಟ್ಟೆಬರೆ, ಉಡುಗೊರೆಗಳನ್ನು ವಿತರಿಸುವ ದಾನದ ಕಾರ್ಯಕ್ರಮದಲ್ಲಿ ಜನರ ವಿಪರೀತ ನೂಕು ನುಗ್ಗಲು ಉಂಟಾಗಿ ಸಂಭವಿಸಿದ ಭೀಕರ ಕಾಲ್‌ತುಳಿತಕ್ಕೆ ಮಹಿಳೆಯರು, ಮಕ್ಕಳ ಸಹಿತ ಕನಿಷ್ಠ 23 ಮಂದಿ ಮೃತಪಟ್ಟಿದ್ದಾರೆ.

ನಗರದ ಉದ್ಯಮಿ ಬಡ ಜನರಿಗೆ ಉಚಿತ ಬಟ್ಟೆಬರೆ, ಉಡುಗೊರೆಗಳನ್ನು ವಿತರಿಸುವ ಕಾರ್ಯಕ್ರಮವನ್ನು ತಮ್ಮ ನಿವಾಸದ ಮುಂದೆಯೇ ಕೈಗೊಂಡಿದ್ದರು. ಇದನ್ನು ಪಡೆಯಲು ಸಹಸ್ರಾರು ಜನರು ಉದ್ಯಮಿಯ ಮನೆ ಮುಂದೆ ಜಮಾಯಿಸಿ ನಾಮುಂದು ತಾಮುಂದು ಎಂಬಂತೆ ಉಡುಗೊರೆಗಳಿಗಾಗಿ ಮುಗಿಬೀಳತೊಡಗಿದರು. ಆಗ ಉಂಟಾದ ಕಾಲ್‌ತುಳಿತ ಉಂಟಾಗಿ ಮಕ್ಕಳು, ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಅದರಲ್ಲಿ ಸಿಲುಕಿಕೊಂಡರು.

“ಈ ತನಕ ನಾವು ಸ್ಥಳದಲ್ಲೇ 23 ಶವಗಳನ್ನು ಪಡೆದುಕೊಂಡಿದ್ದೇವೆ. ಗಾಯಗೊಂಡಿರುವ ಇನ್ನೂ ಅನೇಕರನ್ನು ಮೈಮೇನ್‌ಸಿಂಗ್‌ ಮೆಡಿಕಲ್‌ ಆಸ್ಪತ್ರೆಗೆ ಸೇರಿಸಲಾಗಿದೆ’ ಎಂದು ಕೋತ್ವಾಲಿ ಪೊಲೀಸ್‌ ಠಾಣೆಯ ಪ್ರಭಾರಾಧಿಕಾರಿ ಕಮರೂಲ್‌ ಇಸ್ಲಾಮ್‌ ತಿಳಿಸಿದ್ದಾರೆ.

ಗಾಯಾಳುಗಳಲ್ಲಿ ಅನೇಕ ಪರಿಸ್ಥಿತಿ ಗಂಭೀರ ಇದೆ. ಹಾಗಾಗಿ ಮೃತರ ಸಂಖ್ಯೆ ಏರುವ ಸಾಧ್ಯತೆ ಇದೆ ಎಂದು ಆಸ್ಪತ್ರೆಯಲ್ಲಿನ ವೈದ್ಯರು ಹೇಳಿದ್ದಾರೆ.

ದಾನ ಕಾರ್ಯಕ್ರಮಕ್ಕೆ ಮುನ್ನ ಸೂಕ್ತ ವ್ಯವಸ್ಥೆ, ಭದ್ರತೆಯನ್ನು ಅಣಿಗೊಳಿಸದ ಉದ್ಯಮಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಸಂಬಂಧ ತನಿಖೆ ನಡೆಸಲು 3 ಸದಸ್ಯರ ಸಮಿತಿಯನ್ನು ರಚಿಸಲಾಗಿದ್ದು 3 ದಿನಗಳ ಒಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಪೊಲೀಸರು ಈ ಪ್ರಕರಣದ ಸಂಬಂಧ ಈ ವರೆಗೆ ಕೇಸನ್ನು ದಾಖಲಿಸಿಕೊಂಡಿಲ್ಲ.

2002ರಲ್ಲಿ ಉತ್ತರ ಬಾಂಗ್ಲಾದೇಶದ ತಂಗೈಲ್‌ ನಗರದಲ್ಲಿನ ಸಿದ್ಧ ಉಡುಪುಗಳ ಫ್ಯಾಕ್ಟರಿಯೊಂದರಲ್ಲಿ ಇದೇ ಬಗೆಯ ಕಾಲು¤ಳಿತ ಸಂಭವಿಸಿ 40 ಮಂದಿ ಮೃತಪಟ್ಟಿದ್ದರು.

 

No Comments

Leave A Comment