Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಲಖ್ವಿ ವಿವಾದ: ಮತ್ತೆ ವರಸೆ ಬದಲಿಸಿದ ಚೀನಾ

Xiಬೀಜಿಂಗ್ (ಪಿಟಿಐ): 2008ರ ಮುಂಬೈ ದಾಳಿಯ ಪ್ರಮುಖ ಸಂಚುಕೋರ ಝಕಿ ಉರ್ ರೆಹಮಾನ್ ಲಖ್ವಿ ವಿವಾದದ ಬಗ್ಗೆ ನೆರೆ ರಾಷ್ಟ್ರ ಚೀನಾ ಮತ್ತೆ ವರಸೆ ಬದಲಿಸಿದೆ. ಲಖ್ವಿಯನ್ನು ಹಸ್ತಾಂತರಿಸುವಂತೆ ವಿಶ್ವಸಂಸ್ಥೆಗೆ ಭಾರತ ಸಲ್ಲಿಸಿದ್ದ ಮನವಿಗೆ ಅಡ್ಡಗಾಲು ಹಾಕಿದ ಕ್ರಮವನ್ನು ಚೀನಾ ಗುರುವಾರ ಸಮರ್ಥಿಸಿಕೊಂಡಿದೆ.

ಲಖ್ವಿ ಹಸ್ತಾಂತರದ ಭಾರತದ ಮನವಿಗೆ ಮೊದಲು ಅಡ್ಡಗಾಲು ಹಾಕಿದ್ದ ಚೀನಾ, ಈ ವಾರದ ಆರಂಭದಲ್ಲಿ  ಲಖ್ವಿಯ ಬಿಡುಗಡೆಯ ವಿಚಾರವನ್ನು ಭಾರತದೊಂದಿಗೆ ಚರ್ಚಿಸುವುದಾಗಿ ಹೇಳಿತ್ತು.

ಬ್ರಿಕ್ಸ್‌ ಹಾಗೂ ಶಾಂಘೈ ಸಹಕಾರ ಸಂಘಟನೆಯ ಸಭೆಯ ಅಂಗವಾಗಿ ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಈ ಬಗ್ಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಬುಧವಾರದ ಭೇಟಿ ವೇಳೆ ಭಾರತದ ‘ಅಸಮಾಧಾನ’ವನ್ನು ದಾಖಲಿಸಿದ್ದರು.

ಈ ಸಂಬಂಧ ಪ್ರತಿಕ್ರಿಯಿಸಿರುವ ಚೀನಾ ವಿದೇಶಾಂಗ ವ್ಯವಹಾರಗಳ ವಕ್ತಾರೆ ಹುವಾ ಚುನ್‌ಯಿಂಗ್‌, ‘ವಿಶ್ವಸಂಸ್ಥೆಯ ಭದ್ರತಾ ಖಾಯಂ ರಾಷ್ಟ್ರವಾಗಿರುವ ಚೀನಾ, 1267 ಸದಸ್ಯರೊಂದಿಗೆ ಯಾವಾಗಲೂ ಸಾಕ್ಷ್ಯ, ಪಾರದರ್ಶಕತೆ ಹಾಗೂ ವಸ್ತುನಿಷ್ಠತೆಯ ಆಧಾರದಲ್ಲಿ ವ್ಯವಹರಿಸುತ್ತದೆ’ ಎಂದು ಪ್ರತಿಪಾದಿಸಿದ್ದಾರೆ.

ಈ ಮೂಲಕ ಲಖ್ವಿ ಹಸ್ತಾಂತರಕ್ಕೆ ಭಾರತ ಮಾಡಿದ್ದ ಮನವಿಗೆ ಒಡ್ಡಿದ್ದ ತಡೆಯನ್ನು ಚೀನಾ ಸಮರ್ಥಿಸಿಕೊಂಡಿದೆ.

No Comments

Leave A Comment