Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಉಲ್ಟಾ ಹೊಡೆದ ಶಾಸಕ ನಡಹಳ್ಳಿ; ಪ್ರತ್ಯೇಕ ರಾಜ್ಯ ನನ್ನ ಉದ್ದೇಶ ಅಲ್ಲ

as-ಬೆಳಗಾವಿ: ಪ್ರತ್ಯೇಕ ರಾಜ್ಯದ ಬೇಡಿಕೆ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದ ದೇವರಹಿಪ್ಪರಗಿ ಕ್ಷೇತ್ರದ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ದಿಢೀರ್(ನಡಹಳ್ಳಿ ಉಚ್ಚಾಟನೆಗಾಗಿ ಎಐಸಿಸಿಗೆ ಶಿಫಾರಸು) ಉಲ್ಟಾ ಹೊಡೆದಿದ್ದಾರೆ. ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧಿ ಅಲ್ಲ. ಪ್ರತ್ಯೇಕ ರಾಜ್ಯ ನನ್ನ ಉದ್ದೇಶ ಅಲ್ಲ ಎಂದು ವಿಧಾನಸಭೆಯಲ್ಲಿ ಹೇಳಿದ್ದಾರೆ.

ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲದ ಅಧಿವೇಶನದಲ್ಲಿ ಗುರುವಾರ ಮಾತನಾಡಿದ ಅವರು, ಪ್ರತ್ಯೇಕ ರಾಜ್ಯ ನನ್ನ ಉದ್ದೇಶವಲ್ಲ,ಅಖಂಡ ಕರ್ನಾಟಕದ ಪರ ನನ್ನ ಹೋರಾಟ. ಒಂದು ವೇಳೆ ನನ್ನ ಮಾತಿನಿಂದ ಮುಖ್ಯಮಂತ್ರಿಗಳಿಗೆ ನೋವಾಗಿದ್ದರೆ ಕ್ಷಮೆ ಕೇಳುವೆ ಎಂದರು.

ತಾರತಮ್ಯದ ವಿರುದ್ಧ ಮಾತ್ರ ನನ್ನ ಹೋರಾಟ ವಿನಃ, ಪ್ರತ್ಯೇಕ ರಾಜ್ಯದ ಪರ ನನ್ನ ಹೋರಾಟವಲ್ಲ ಎಂದು ನಡಹಳ್ಳಿ ಹೇಳುವ ಮೂಲಕ ವಿವಾದ ತಣ್ಣಗಾಗಿಸಲು ಮುಂದಾಗಿದ್ದಾರೆ. ಪ್ರತ್ಯೇಕ ರಾಜ್ಯದ ಬೇಡಿಕೆ ಇಟ್ಟು ಸದ್ಯ ಶಾಸಕಾಂಗ ಪಕ್ಷದ ಸಮಿತಿಯಿಂದ ಎ.ಎಸ್.ಪಾಟೀಲ್ ನಡಹಳ್ಳಿ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಅಲ್ಲದೇ ಶಾಸಕ ನಡಹಳ್ಳಿ ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಎಐಸಿಸಿಗೆ ಶಿಫಾರಸು ಮಾಡಲಾಗಿದೆ.

No Comments

Leave A Comment