Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಹಿರಿಯ ಕಾಂಗ್ರೆಸ್‌ ನಾಯಕ ಶ್ರೀಬಲ್ಲವ ಪಾಣಿಗ್ರಾಹಿ ಬೆಂಗಳೂರಲ್ಲಿ ನಿಧನ

Congreಭುವನೇಶ್ವರ: ಹಿರಿಯ ಕಾಂಗ್ರೆಸ್‌ ನಾಯಕ ಹಾಗೂ ಮಾಜಿ ಸಂಸದ ಶ್ರೀಬಲ್ಲವ ಪಾಣಿಗ್ರಾಹಿ ದೀರ್ಘ‌ ಕಾಲದ ಅಸೌಖ್ಯದ ಬಳಿಕ ಬೆಂಗಳೂರು ಆಸ್ಪತ್ರೆಯಲ್ಲಿ ನಿಧನಹೊಂದಿದ್ದಾರೆ. 74ರ ಹರೆಯದ ಅವರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಸಂಭಾಲ್‌ಪುರ ಜಿಲ್ಲೆಯ ಬಾರಾಗಾಂವ್‌ನ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಲ್ಲಿ ಜನಿಸಿದ್ದ ಪಾಣಿಗ್ರಾಹಿ ಅವರು ದೇವಗಢ ಕ್ಷೇತ್ರದಿಂದ 1984, 1991 ಮತ್ತು 1996ರಲ್ಲಿ ಲೋಕಸಭೆಗೆ ಚುನಾಯಿತರಾಗಿದ್ದರು. ಅಲ್ಲದೆ 1971 ಮತ್ತು 1974ರಲ್ಲಿ ಅವರ ಒಡಿಶಾ ವಿಧಾನಸಭೆಗೂ ಸಂಭಾಲ್‌ಪುರ ಕ್ಷೇತ್ರದಿಂದ ಚುನಾಯಿತರಾಗಿದ್ದರು. ಸಣ್ಣ ವಯಸ್ಸಿನಲ್ಲೇ ಅವರು 1973ರಿಂದ 1977ರ ವರೆಗಿನ ಅವಧಿಯಲ್ಲಿ ಒಡಿಶಾದ ಕ್ಯಾಬಿನೆಟ್‌ ಸಚಿವರಾಗಿದ್ದರು. ಕಂದಾಯ, ನೀರಾವರಿ ಮತ್ತು ವಿದ್ಯುತ್‌, ಕಾನೂನು, ಶಿಕ್ಷಣ, ಸಂಸದೀಯ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ವಾಣಿಜ್ಯ ಮುಂತಾದ ಪ್ರಮುಖ ಖಾತೆಗಳನ್ನು ಅವರು ನಿರ್ವಹಿದ್ದರು.

ಪತ್ರಿಕೋದ್ಯಮದಲ್ಲೂ ತೊಡಗಿದ್ದ ಅವರು 1982ರಿಂದ 1984ರ ಅವಧಿಯಲ್ಲಿ ಒಡಿಯಾ ದೈನಿಕದ ಸಂಪಾದಕರಾಗಿಯೂ ದುಡಿದಿದ್ದರು.

ಪಾಣಿಗ್ರಾಹಿ ಅವರ ಅಂತ್ಯಕ್ರಿಯೆಯು ಅವರ ಹುಟ್ಟೂರಾದ ಸಂಭಾಲ್‌ಪುರದಲ್ಲಿ ನಡೆಯಲಿದೆ ಎಂದು ಅವರ ಪುತ್ರ ತಿಳಿಸಿದ್ದಾರೆ.

No Comments

Leave A Comment