Log In
BREAKING NEWS >
ಉತ್ತರ ಪ್ರದೇಶ: ಮನೆಯಲ್ಲಿದ್ದ ಪಟಾಕಿ ಸ್ಫೋಟ, ತಾಯಿ-ಮಗಳ ಸಾವು...

ಎಟಿಎಂಗೆ ಡೆಬಿಟ್ ಕಾರ್ಡ್ ಹಾಕಿದ ಯುವಕ; ಬಂದಿದ್ದು ಹಣವಲ್ಲ, ಸಾವು!

Automaticಅಲಹಾಬಾದ್: ಸಾವು ಹೇಗೆಲ್ಲಾ ಬರಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. 25ರ ಹರೆಯದ ಯುವಕನೊಬ್ಬ ಹಣ ತೆಗೆಯಲು ಎಟಿಎಂಗೆ ಹೋಗಿ ಡೆಬಿಟ್ ಕಾರ್ಡ್ ಅನ್ನು ಒಳಕ್ಕೆ ತೂರಿಸಿದ್ದ ಅಷ್ಟೇ…ಯುವಕ ಅಲ್ಲೇ ಸಾವನ್ನಪ್ಪಿದ್ದ. ಎಟಿಎಂ ಕಾರ್ಡ್ ಅನ್ನು ಮೆಶಿನ್ನಿಗೆ ಹಾಕಿದಾಗ ಕರೆಂಟು ಹೊಡೆದಿದ್ದರಿಂದ ಯುವಕ ಸಾವನ್ನಪ್ಪಿದ್ದ.

ಸೋಮವಾರ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದ ಸಂದರ್ಭದಲ್ಲಿ ಉತ್ತರಪ್ರದೇಶದ ಬ್ರಿಜೇಶ್ ಕುಮಾರ್ ಯಾದವ್ (25ವರ್ಷ) ಎಟಿಎಂ ಮಶಿನ್ನಿಗೆ ಡೆಬಿಟ್ ಕಾರ್ಡ್ ಹಾಕಿದ್ದ, ಆಗ ಕರೆಂಟ್ ಹೊಡೆದು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಎಟಿಎಂ ಹಳೇ ಕಟ್ಟಡದಲ್ಲಿದ್ದು, ವಯರಿಂಗ್ ತೊಂದರೆಯಿಂದಾಗಿ ಎಟಿಎಂ ಮಶಿನ್ ನಲ್ಲಿ ವಿದ್ಯುತ್ ಹರಿಯುತ್ತಿದ್ದುದೇ ಘಟನೆ ನಡೆಯಲು ಕಾರಣವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಎಟಿಎಂ ಮೆಶಿನ್ ನ ವಿದ್ಯುತ್ ಸಂಪರ್ಕದ ವಯರಿಂಗ್ ಬಗ್ಗೆ ಪರಿಶೀಲನೆ ನಡೆಸುವುದಾಗಿ ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.

No Comments

Leave A Comment