Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ದೇಶಕ್ಕೆ ಉತ್ತಮ ನಾಯಕರು ಅಗತ್ಯ-ಅಣ್ಣಾಮಲೈ

-madavaಉಡುಪಿ: ದೇಶಕ್ಕೆ ಉತ್ತಮ ನಾಯಕರ ಅವಶ್ಯಕತೆ ಇದ್ದು, ಈ ಅವಕಾಶವನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ಹೇಳಿದರು. ಮಣಿಪಾಲದ ಮಾಧವಕೃಪಾ ಶಾಲೆಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಂಸತ್‌ ಉದ್ಘಾಟನೆ ಮಾಡಿ ಮಾತನಾಡಿದರು.

ಕೇವಲ ಅಂಕ ಗಳಿಕೆಯಷ್ಟೇ ಗೆಲುವಿನ ಸೂಚ್ಯಂಕವಲ್ಲ. ವಾಸ್ತವಿಕ ಪ್ರಪಂಚವನ್ನು ಅರಿಯುವ ಪ್ರಯತ್ನವನ್ನು ವಿದ್ಯಾರ್ಥಿಗಳು ಮಾಡಬೇಕು. ಯಾವಾಗಲೂ ಕ್ರಿಯಾಶೀಲರಾಗಿ ಇರಬೇಕು ಮತ್ತು ಗುರಿ ಸಾಧನೆಗಾಗಿ ಕಠಿಣ ಹಾದಿಯಲ್ಲಿ ಸಾಗಲು ಸಿದ್ಧರಿರಬೇಕು ಎಂದು ಸಲಹೆ ನೀಡಿದರು. ವಿದ್ಯಾರ್ಥಿ ನಾಯಕರ ಪದಗ್ರಹಣಕ್ಕೆ ಅವರು ಚಾಲನೆ ನೀಡಿದರು. ಮಣಿಪಾಲ ವಿಶ್ವವಿದ್ಯಾಲಯದ ಕುಲಸಚಿವ ಜಿ.ಕೆ. ಪ್ರಭು ಮಾತನಾಡಿದರು.

ಪ್ರಾಂಶುಪಾಲ ರಾದ ಜೆಸ್ಸಿ ಆ್ಯಂಡ್ರೂಸ್ ಅವರು ವಿದ್ಯಾರ್ಥಿ ನಾಯಕ ಧೀರಜ್ ಆಚಾರ್ಯ ಮತ್ತು ನಿಶಾಂತ್‌ ಕುಮಾರ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.  ಶಾಲಾ ಸಂಚಾಲಕರಾದ ಪಿ.ಜಿ. ಪಂಡಿತ್‌ ಹಾಗೂ ಮುಖ್ಯೋಪಾಧ್ಯಾಯಿನಿ ಉಮಾರಾವ್‌ ಇತತರು ಇದ್ದರು. ಉಪ ಪ್ರಾಂಶುಪಾಲರಾದ ಶಕಿಲಾಕ್ಷಿಕೃಷ್ಣ ವಂದಿಸಿದರು. ದೀಪಾಲಿ ಪ್ರಭು ಕಾರ್ಯಕ್ರಮ ನಿರ್ವಹಿಸಿದರು.

No Comments

Leave A Comment