Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

‘ನಿರಂತರ ನಿಗಾ’ ಕೋರಿದ ಯಾಸೀನ್ ಭಟ್ಕಳ್

yasin-bhಹೈದರಾಬಾದ್ (ಪಿಟಿಐ): ಪೊಲೀಸರಿಂದ ತಮಗೆ ಜೀವ ಬೆದರಿಕೆ ಇದ್ದು, 24 ಗಂಟೆಗಳ ಕಣ್ಗಾವಲಿಗೆ ವ್ಯವಸ್ಥೆ ಕಲ್ಪಿಸುವಂತೆ  2013ರ ಫೆಬ್ರುವರಿಯಲ್ಲಿ ಇಲ್ಲಿನ ದಿಲ್‌ಸುಖ್‌ನಗರದಲ್ಲಿ ನಡೆದ ಅವಳಿ ಸ್ಫೋಟ ಪ್ರಕರಣದ ಆರೋಪಿ, ಇಂಡಿಯನ್ ಮುಜಾಹಿದ್ದೀನ್‌ ಸಂಘಟನೆಯ ಸಹ ಸಂಸ್ಥಾಪಕ ಮೊಹಮ್ಮದ್ ಅಹ್ಮದ್ ಸಿದ್ದಬಾಪಾ ಅಲಿಯಾಸ್ ಯಾಸೀನ್ ಭಟ್ಕಳ್‌ ಕೋರಿದ್ದಾನೆ.

ಈ ಸಂಬಂಧ ಪ್ರಕರಣ ವಿಚಾರಣೆ ನಡೆಸುತ್ತಿರುವ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ಭಟ್ಕಳ್, 24 ಗಂಟೆಗಳ ಕಣ್ಗಾವಲು ಇಡುವ ನಿಟ್ಟಿನಲ್ಲಿ ತನ್ನ ಹೈ ಸೆಕ್ಯೂಟಿರಿ ಕೊಠಡಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಜೈಲು ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಮನವಿ ಮಾಡಿದ್ದಾನೆ.

ಭಟ್ಕಳ್ ಹಾಗೂ ಪ್ರಕರಣದ ಇತರ ಆರೋಪಿಗಳನ್ನು ಇಲ್ಲಿನ ಚೆರ್ಲಪಲ್ಲಿ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.

‘ನಾವು ಇರುವ ಬಿಗಿ ಭದ್ರತೆಯ ಕೊಠಡಿ ಹೊರತು ಪಡಿಸಿ ಜೈಲಿನ ಬಹುತೇಕ ಎಲ್ಲಾ ಕಡೆಗೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸುಳ್ಳು, ತಿರುಚಿದ ಹಾಗೂ ಕಟ್ಟು ಕಥೆಗಳನ್ನು ಸೃಷ್ಟಿಸುವ ಸಲುವಾಗಿ ಜೈಲಿನ ಅಧಿಕಾರಿಗಳು ಉದ್ದೇಶ ಪೂರ್ವಕವಾಗಿ ನಾವಿರುವ ಕೊಠಡಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿಲ್ಲ’ ಎಂದು ಭಟ್ಕಳ್ ಆರೋಪಿಸಿದ್ದಾನೆ.

ಜೈಲು ಅಧಿಕಾರಿಗಳು ಹಾಗೂ ನೇರವಾಗಿ ಎನ್‌ಐಎ ಅಡಿಯಲ್ಲಿ ಕಾರ್ಯನಿರ್ವಹಿಸುವ ಬೆಂಗಾವಲು ಪಡೆಯಿಂದ ಅರ್ಜಿದಾರರಿಗೆ ಜೀವಗಳಿಗೆ ಬೆದರಿಕೆ ಇದೆ ಎಂದು ಭಟ್ಕಳ್ ಪರ ವಕೀಲ ಶೇಕ್‌ ಸೈಫುಲ್ಲಾ ಖಾಲೀದ್ ತಿಳಿಸಿದ್ದಾರೆ.

ಅಲ್ಲದೇ, ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಗುರುವಾರ ಕೈಗೆತ್ತಿಕೊಳ್ಳುವ ಸಾಧ್ಯತೆಗಳಿವೆ ಎಂದೂ ಅವರು ತಿಳಿಸಿದ್ದಾರೆ.

No Comments

Leave A Comment