Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಮೋದಿ ಸ್ವಚ್ಛ ಭಾರತ ಅಭಿಯಾನ: ಜಾಹೀರಾತಿಗಾಗಿಯೆ 94 ಕೋಟಿ ಖರ್ಚು

swachchaನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೆಚ್ಚಿನ ಯೋಜನೆಯಾದ ಸ್ವಚ್ಛ  ಭಾರತ ಅಭಿಯಾನದ ಜಾಹೀರಾತಿಗಾಗಿ ಕಳೆದ ಒಂದು ವರ್ಷದಲ್ಲಿ ಕೇಂದ್ರ ಸರ್ಕಾರ ಬರೋಬ್ಬರಿ 94 ಕೋಟಿ ರುಪಾಯಿ ಖರ್ಚು ಮಾಡಿದೆ.

ಆರ್ಟಿಐ ಅರ್ಜಿಯೊಂದಕ್ಕೆ ಕುಡಿಯುವ ನೀರು ಮತ್ತು ಒಳಚರಂಡಿ ಸಚಿವಾಲಯ ಈ ಮಾಹಿತಿ ನೀಡಿದ್ದು, 2014-15ರಲ್ಲಿ ಜಾಹೀರಾತು ಮತ್ತು ಪ್ರಚಾರಕ್ಕಾಗಿ 2.15 ಕೋಟಿ, ಮುದ್ರಣ ಮಾಧ್ಯಮದ ಜಾಹೀರಾತಿಗಾಗಿ 70.80ಲಕ್ಷ, ದೃಶ್ಯ ಹಾಗೂ ಶ್ರವ್ಯ ಜಾಹೀರಾತಿಗಾಗಿ 43.64 ಕೋಟಿ ಡಿಎವಿಪಿ ಮೂಲಕ ಟಿವಿ ಚಾನಲ್ ಗಳಿಗೆ ನೀಡಿದ ಜಾಹೀರಾತಿಗಾಗಿ 25.88 ಕೋಟಿ, ದೂರದರ್ಶನ ಜಾಹೀರಾತಿಗಾಗಿ 16.99 ಕೋಟಿ ಹಾಗೂ ರೇಡಿಯೋ ಜಾಹೀರಾತಿಗಾಗಿ 5.45 ಕೋಟಿ ರುಪಾಯಿ ವೆಚ್ಚ ಮಾಡಲಾಗಿದೆ.

ಈ ಹಿಂದಿನ ಯುಪಿಎ ಸರ್ಕಾರದ ನಿರ್ಮಲ ಭಾರತ ಅಭಿಯಾನ ಕಾರ್ಯಕ್ರಮವನ್ನೇ ಮೋದಿ ಸರ್ಕಾರ ಸ್ವಚ್ಛ ಭಾರತ ಅಭಿಯಾನ ಎಂದು ಮರುನಾಮಕರಣ ಮಾಡಿದ್ದು, ಇದು ಭಾರತ ಸರ್ಕಾರದ ಕುಡಿಯುವ ನೀರು ಮತ್ತು ಒಳಚರಂಡಿ ಇಲಾಖೆಯಡಿ ಬರುತ್ತದೆ.

ಲಖನೌ ಮೂಲದ ಆರ್ಟಿಐ ಕಾರ್ಯಕರ್ತ ಸಂಜಯ್ ಶರ್ಮಾ ಅವರು ಮೋದಿ ಕನಸಿನ ಸ್ವಚ್ಛ  ಭಾರತ ಅಭಿಯಾನದ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದರು.

No Comments

Leave A Comment