Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಉಡುಪಿ: ಪಂಡಿತ್‌ ದೀನ್‌ದಯಾಳ್‌ ಉಪಾಧ್ಯ, ಡಾ.ವಿ.ಎಸ್‌. ಆಚಾರ್ಯ ಸ್ಮರಣೆ ‘ಆಚಾರ್ಯ ಮೇಲ್ಪಂಕ್ತಿಯ ರಾಜಕಾರಣಿ’

paritoshakaಉಡುಪಿ: ‘ಕಾಯಕದಲ್ಲಿಯೇ ಕೈಲಾಸ ಕಂಡು ಬದುಕನ್ನು ಸಾರ್ಥಕಪಡಿಸಿ ಕೊಂಡವರು ದಿವಂಗತ ಡಾ. ವಿ.ಎಸ್. ಆಚಾರ್ಯ’ ಎಂದು ಉದ್ಯಮಿ ಗುರ್ಮೆ ಸುರೇಶ್‌ ಶೆಟ್ಟಿ ಹೇಳಿದರು.

ದೀನದಯಾಳ್‌ ಚಾರಿಟೆಬಲ್‌ ಟ್ರಸ್ಟ್‌ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮ ವಾರ ಏರ್ಪಡಿಸಿದ್ದ  ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಉಡುಪಿ ನಗರಸಭಾ ವ್ಯಾಪ್ತಿಯ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಪಂಡಿತ್‌ ದೀನ್‌ದಯಾಳ್‌ ಉಪಾಧ್ಯ ಸ್ಮರಣ, ಡಾ.ವಿ.ಎಸ್‌. ಆಚಾರ್ಯ ಸ್ಮರಣ ಹಾಗೂ ಗಾಯತ್ರಿ ಸ್ಮರಣಾ ಪಾರಿತೋಷಕ ವಿತರಿಸಿ ಮಾತನಾಡಿದರು.

ಸಾಮಾಜಿಕ ಜೀವನದಲ್ಲಿ ಅತಿ ಎತ್ತರಕ್ಕೆ ಏರಿದರೂ ಒಂದೇ ಒಂದು ಕಪ್ಪುಚುಕ್ಕೆ ಇಲ್ಲದ ಹಾಗೆ ಕೆಲಸ ಮಾಡಿದ ದೇಶದ ಏಕೈಕ ರಾಜಕಾರಣಿ ಅವರಾಗಿದ್ದರು. ಸಹನೆ ಮತ್ತು ವಿನಯಕ್ಕೆ ಆಚಾರ್ಯ ಅವರು ಮತ್ತೊಂದು ಹೆಸ ರಾಗಿದ್ದರು. ವಿರೋಧಿಗಳು ಒಪ್ಪುವಂತಹ ನಡೆನುಡಿ ಅವರದ್ದಾಗಿತ್ತು.

ಜಾತಿ– ಮತ ಧರ್ಮವನ್ನು ಮೀರಿ ಅತಿ ಸ್ಪಷ್ಟತೆಯಿಂದ ಅವರು ಕೆಲಸ ಮಾಡಿದರು. ರಾಜಕೀಯ ಹೇಗಿರಬೇಕು ರಾಜಕಾರಣದಲ್ಲಿ ಇರುವವರು ಹೇಗೆ ಕೆಲಸ ಮಾಡಬೇಕು ಎಂಬುದನ್ನು ಅವರು ತೋರಿಸಿಕೊಟ್ಟರು. ಇತರ ರಾಜಕಾರಣಿ ಗಳ ಬುದ್ಧಿಯನ್ನು ಅವರು ಪ್ರಭಾವಿಸಿ ದ್ದರು ಎಂದು ಹೇಳಿದರು.

ಉಡುಪಿಯ ಬಗ್ಗೆ ಕನಸು ಕಂಡ ಆಚಾರ್ಯ ಅವರು ಅಭಿವೃದ್ಧಿ ಕಾರ್ಯಗಳಿಂದ ನಗರದ ಚಹರೆಯನ್ನು ಬದಲಾಯಿಸಿದರು. ಅವರು ಮಾಡಿದ ರಾಜಕಾರಣ ಎಲ್ಲರಿಗೂ ಮೇಲ್ಪಂಕ್ತಿ ಯಾಗಿದೆ. ಯಾವಾಗಲೂ ರಾಜ್ಯದ ಅಭಿವೃದ್ಧಿಯ ಬಗ್ಗೆ ಅವರು ಚಿಂತಿಸುತ್ತಿ ದ್ದರು ಎಂದು ನಗರಸಭೆಯ ಮಾಜಿ ಅಧ್ಯಕ್ಷ ಗುಜ್ಜಾಡಿ ಪ್ರಭಾಕರ ನಾಯಕ್‌ ಹೇಳಿದರು. ದೀನದಯಾಳ್ ಚಾರಿಟೇಬಲ್‌ ಟ್ರಸ್ಟ್‌ನ ಅಧ್ಯಕ್ಷ ಯು. ಮೋಹನ್‌ ಉಪಾಧ್ಯ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

No Comments

Leave A Comment