Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

3 ವಾರಗಳಲ್ಲಿ ಭಾರತಕ್ಕೆ ಬರುವಂತೆ ಲಲಿತ್ ಮೋದಿಗೆ ಜಾರಿ ನಿರ್ದೇಶನಾಲಯ ಸಮನ್ಸ್

lalith-7ಮುಂಬಯಿ: 3 ವಾರಗಳಲ್ಲಿ ಭಾರತಕ್ಕೆ ವಾಪಸ್ ಬರಬೇಕೆಂದು ಜಾರಿ ನಿರ್ದೇಶನಾಲಯ ಲಂಡನ್ ನಲ್ಲಿ ವಾಸಿಸುತ್ತಿರುವ ಮಾಜಿ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿ ಗೆ ಸಮನ್ಸ್  ನೀಡಿದೆ.

ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಪ್ರಸಾರ ಹಕ್ಕು ನೀಡಲು 125 ಕೋಟಿ ಕಿಕ್ ಬ್ಯಾಕ್ ಪಡೆದ ಆರೋಪ ಸಂಬಂಧ ತುರ್ತಾಗಿ ಲಲಿತ್ ಮೋದಿ ವಿಚಾರಣೆ ನಡೆಸಬೇಕಿರುವುದರಿಂದ 3 ವಾರಗಳಲ್ಲಿ ಮುಂಬಯಿಯಲ್ಲಿ ಹಾಜರಿರುವಂತೆ ಜಾರಿ ನಿರ್ದೇಶನಾಲಯ ನೊಟೀಸ್ ನಲ್ಲಿ ಸೂಚಿಸಿದೆ. 2008 ರಲ್ಲಿ ಲಲಿತ್ ಮೋದಿ 125 ಕೋಟಿ ಲಂಚ ಪಡೆದಿದ್ದರೆಂದು ಬಿಸಿಸಿಐ ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸನ್ ಮುಂಬಯಿನ ಜಾರಿ ನಿರ್ದೇಶಾನಲಯದಲ್ಲಿ ಕೇಸು ದಾಖಲಿಸಿದ್ದರು.

ಐಪಿಎಲ್ ನಲ್ಲಿ ಹಣದ ಅವ್ಯವಹಾರ ಆರೋಪ ಎದುರಿಸುತ್ತಿದ್ದ ಲಲಿತ್ ಮೋದಿ 2010 ರಿಂದ ಲಂಡನ್ ನಲ್ಲಿ ನೆಲೆಸಿದ್ದಾರೆ. ನಿನ್ನೆ ಸಂಜೆಯ ಜಾರಿ ನಿರ್ದೇಶನಾಲಯ ಲಲಿತ್ ಮೋದಿಗೆ ಸಮನ್ಸ್ ನೀಡಿದೆ. ಇನ್ನು ಲಲಿತ್ ಮೋದಿ ವಿರುದ್ಧ ಜಾಮೀನು ರಹಿತ ಬಂಧನದ ವಾರಂಟ್ ಕೂಡ ಜಾರಿ ಮಾಡಿದೆ.

ಇನ್ನು ಜಾರಿ ನಿರ್ದೇಶನಾಲಯಯದ ಸಮನ್ಸ್ ಬಗ್ಗೆ ಪ್ರತಿಕ್ರಿಯಿಸಿರುವ ಲಲಿತ್ ಮೋದಿ ನನಗೆ ಇದುವರೆಗೂ ಯಾವುದೇ ನೋಟೀಸ್ ಬಂದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಭೂಗತ ಪಾತಕಿಗಳಿಂದ ಜೀವ ಭಯ ಇರುವುದರಿಂದ ಭಾರತಕ್ಕೆ ಬರುವ ವಿಷಯವನ್ನು ಲಲಿತ್ ಮೋದಿ ನಿರಾಕರಿಸಿದ್ದಾರೆ.

ಲಂಡನ್ ನಲ್ಲಿ ಉಳಿದುಕೊಳ್ಳಲು ಕೇಂದ್ರ ಸಚಿವೆ ಸುಷ್ಮ ಸ್ವರಾಜ್ ಮತ್ತು ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೇ ತನಗೆ ಸಹಾಯ ಮಾಡಿದ್ದರೆಂದು ಲಲಿತ್ ಮೋದಿ ನೀಡಿದ್ದ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿತ್ತು.

No Comments

Leave A Comment