Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ವ್ಯಾಪಂ ಹಗರಣ;ನಿಲ್ಲದ ನಿಗೂಢ ಸಾವು, ಮತ್ತೊಬ್ಬ ಪೊಲೀಸ್ ಆತ್ಮಹತ್ಯೆ

_vyapam-scamಭೋಪಾಲ್: ನಿಗೂಢ ಸಾವಿನ ಸರಣಿಯಿಂದಾಗಿ ದೇಶಾದ್ಯಂತ ಸದ್ದು ಮಾಡುತ್ತಿರುವ ಮಧ್ಯಪ್ರದೇಶದ “ವ್ಯವಸಾಯಿಕ್‌ ಪರೀಕ್ಷಾ ಮಂಡಳಿ’ (ವೃತ್ತಿಪರ ಪರೀಕ್ಷಾ ಮಂಡಳಿ ಅರ್ಥಾತ್‌ ವ್ಯಾಪಂ) ಹಗರಣದ ಕುರಿತು ಸಿಬಿಐ ತನಿಖೆಗೆ ಒತ್ತಡ ಹೆಚ್ಚಿರುವಾಗಲೇ, ಸಾವಿನ ಸಂಖ್ಯೆಗಳೂ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ.

 ನಿನ್ನೆಯಷ್ಟೆ ವ್ಯಾಪಂನಿಂದ ಆಯ್ಕೆಯಾಗಿ ತರಬೇತಿ ಪಡೆಯುತ್ತಿದ್ದ ಮಹಿಳಾ ಸಬ್‌ ಇನ್ಸ್‌ಪೆಕ್ಟರ್‌ವೊಬ್ಬರ ಶವ ಕೆರೆ ಯಲ್ಲಿ ಪತ್ತೆಯಾಗಿತ್ತು, ಇದರ ಬೆನ್ನಲ್ಲೆ ಮಂಗಳವಾರ ಮಧ್ಯ ಪ್ರದೇಶ ಪೊಲೀಸ್‌ ಕಾನ್ಸ್‌ಟೇಬಲ್‌ ಒಬ್ಬರು ನೇಣು  ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ರಮಾಕಾಂತ್‌ ಪಾಂಡೆ ಎನ್ನುವವರು ಓರ್ಚಾದಲ್ಲಿರುವ ಪೊಲೀಸ್‌ ಕ್ವಾರ್ಟರ್ಸ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಪಾಂಡೆಯನ್ನು ವ್ಯಾಪಂ ಹಗರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಪ್ರಶ್ನಿಸಿತ್ತು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಸಾವಿಗೂ ವ್ಯಾಪಂ ಹಗರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಕಮ್‌ಘಡ ಎಸ್‌ಪಿ ನಿಮಿಶ್‌ ಅಗರ್ವಾಲ್‌ ಹೇಳಿದ್ದಾರೆ.

ಇದರಿಂದಾಗಿ 4 ದಿನಗಳಲ್ಲಿ ವ್ಯಾಪಂಗೆ ಸಂಬಂಧಿಸಿದ ನಾಲ್ವರು ಶಂಕಾಸ್ಪದ ರೀತಿಯಲ್ಲಿಸಾವಿಗೀಡಾದಂತಾಗಿದೆ.  ತನ್ಮೂಲಕ ವ್ಯಾಪಂ ಹಗರಣದ ನಿಗೂಢ ಸಾವಿನಸಂಖ್ಯೆ ಸರ್ಕಾರಿ ಲೆಕ್ಕದಲ್ಲಿ 28 ಕ್ಕೇರಿದೆ. ಆದರೆ ಕಾಂಗ್ರೆಸ್‌ ಪ್ರಕಾರ, 45ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.

ನಿನ್ನೆ ಏನೇನಾಯ್ತು?

„ ವ್ಯಾಪಂ ಮೂಲಕ ಆಯ್ಕೆಯಾಗಿದ್ದ ಮಹಿಳಾ ಎಸ್‌ಐ ಶವ ಪತ್ತೆ

„ ಸಿಎಂ ಚೌಹಾಣ್‌ ವಜಾಕ್ಕೆ ಕಾಂಗ್ರೆಸ್‌ ಆಗ್ರಹ

„ ಸಿಎಂ ಚೌಹಾಣ್‌ ತಲೆ ದಂಡಕ್ಕೆ ಬಿಜೆಪಿ ನಕಾರ

„ ಹಗರಣದಲ್ಲಿ ಭಾಗಿ ಆರೋಪ: ಮಧ್ಯಪ್ರದೇಶ ರಾಜ್ಯಪಾಲ ರಾಮ್‌ ನರೇಶ್‌ ಯಾದವ್‌ ವಜಾ ಕೋರಿ ಸುಪ್ರೀಂಕೋರಿrಗೆ ಅರ್ಜಿ ಸಲ್ಲಿಕೆ

„ ಹಗರಣ ಬಯಲು ಮಾಡಿದ ಇಬ್ಬರಿಗೆ ಜೀವ ಬೆದರಿಕೆ

No Comments

Leave A Comment