Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ವ್ಯಾಪಂ ಹಗರಣ: ಸಿಬಿಐ ತನಿಖೆ ಅರ್ಜಿ ವಿಚಾರಣೆಗೆ ಸುಪ್ರೀಂ ಒಪ್ಪಿಗೆ

supreme-cಹೊಸದಿಲ್ಲಿ: ಮಧ್ಯಪ್ರದೇಶದ ವ್ಯಾಪಂ ಹಗರಣದ ಸಿಬಿಐ ತನಿಖೆಯನ್ನು ಸುಪ್ರೀಂಕೋರ್ಟ್‌ ಉಸ್ತುವಾರಿಯಲ್ಲಿ ನಡೆಸಬೇಕೆಂದು ಕೋರಿರುವ ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌ ಮತ್ತು ಇತರ ಮೂವರು ಭ್ರಷ್ಟಾಚಾರ ಜಾಗೃತಿ ಕಾರ್ಯಕರ್ತರ ಅರ್ಜಿಯನ್ನು ಜುಲೈ 9ರಂದು ವಿಚಾರಣೆಗೆ ಎತ್ತಿಕೊಳ್ಳಲು ಸುಪ್ರೀಂ ಕೋರ್ಟ್‌ ಒಪ್ಪಿದೆ.

“ವ್ಯಾಪಂ ಕುರಿತ ಎಲ್ಲ ಅರ್ಜಿಗಳನ್ನು ನಾವು ಒಟ್ಟಿಗೇ ಪರಿಶೀಲಿಸಬಹುದಾಗಿದೆ. ಜು.9ರಂದು ಅವು ಪೀಠದ ಮುಂದೆ ಬರಲಿವೆ’ ಎಂದು ವರಿಷ್ಠ ನ್ಯಾಯಮೂರ್ತಿ ಎಚ್‌ ಎಲ್‌ ದತ್ತು, ಜಸ್ಟಿಸ್‌ ಅರುಣ್‌ ಕುಮಾರ್‌ ಮಿಶ್ರಾ ಮತ್ತು ಅಮಿತಾವ ರಾಯ್‌ ಅವರನ್ನು ಒಳಗೊಂಡ ಪೀಠವು ಹೇಳಿದೆ.

ಸುಪ್ರೀಂ ಕೋರ್ಟ್‌ ಉಸ್ತುವಾರಿಯಲ್ಲಿ ವ್ಯಾಪಂ ಕುರಿತಾದ ಸಿಬಿಐ ತನಿಖೆ ನಡೆಯಬೇಕೆಂದು ಕೋರಿ ದಿಗ್ವಿಜಯ್‌ ಸಿಂಗ್‌ ಮಾತ್ರವಲ್ಲದೆ ಭ್ರಷ್ಟಾಚಾರ ಜಾಗೃತಿ ಕಾರ್ಯಕರ್ತರಾಗಿರುವ ಆಶಿಶ್‌ ಚತುರ್ವೇದಿ, ಡಾ| ಆನಂದ್‌ ರಾಯ್‌ ಮತ್ತು ಪ್ರಶಾಂತ್‌ ಪಾಂಡೆ ಸರ್ವೋಚ್ಚ ನ್ಯಾಯಾಲಯವನ್ನು ಕೋರಿದ್ದರು.

ಒಂದು ದಿನದ ಹಿಂದಷ್ಟೇ ವಕೀಲರ ಒಂದು ಸಮೂಹ ಮತ್ತು ಆಮ್‌ ಆದ್ಮಿ ಪಕ್ಷದ ನಾಯಕ ಕುಮಾರ್‌ ವಿಶ್ವಾಸ್‌ ಅವರು ಬೃಹತ್‌ ವ್ಯಾಪಂ ಹಗರಣದ ಸಿಬಿಐ ತನಿಖೆಯ ಉಸ್ತುವಾರಿಯನ್ನು ಸುಪ್ರೀಂ ಕೋರ್ಟ್‌ ವಹಿಸಿಕೊಳ್ಳುವಂತೆ ಕೋರಿ ಅರ್ಜಿ ಹಾಕಿದ್ದರು.

No Comments

Leave A Comment