Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಬಾಂಬ್‌ ಇರುವ ಶಂಕೆ: ದೆಹಲಿಯಲ್ಲಿ ಟರ್ಕಿ ವಿಮಾನ ತುರ್ತು ಭೂಸ್ಪರ್ಶ

3_2ನವದೆಹಲಿ : ಬಾಂಬ್‌ ಬೆದರಿಕೆ ಬಂದ ಕಾರಣ ಟರ್ಕಿಶ್‌ ವಿಮಾನವೊಂದು ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ವರ್ಶ ಮಾಡಿದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.

ಥೈಲಾಂಡ್‌ನ‌ ಬ್ಯಾಂಕಾಕ್‌ನಿಂದ ಟರ್ಕಿ ರಾಜಧಾನಿ ಇಸ್ತಾಂಬುಲ್‌ಗೆ ತೆರಳುತ್ತಿದ್ದ ಟರ್ಕಿಶ್‌ ಏರ್‌ವೇಸ್ ನ ಟಿಕೆ 65  ವಿಮಾನದಲ್ಲಿ ಬಾಂಬ್‌ ಬೆದರಿಕೆ ಇರುವ ಬರಹ  ಪೈಲಟ್‌ ಗಮನಕ್ಕೆ ಬಂದ ಹಿನ್ನಲೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ವಿಮಾನವನ್ನು ತುರ್ತು ಭೂಸ್ವರ್ಶ ಮಾಡಲಾಗಿದೆ.ಇದೀಗ ನಿಲ್ದಾಣದ ಪ್ರತ್ಯೇಕ ಸ್ಥಳದಲ್ಲಿ ವಿಮಾನವನ್ನು ನಿಲುಗಡೆ ಮಾಡಲಾಗಿದೆ.

ವಿಮಾನವನ್ನು ಎನ್‌ಎಸ್‌ಜಿ ಕಮಾಂಡೊಗಳು, ಸಿಐಎಸ್‌ಎಫ್ ಪಡೆಗಳು ಸೇರಿದಂತೆ ಇತರ ಭದ್ರತಾ ಪಡೆಗಳು ಸುತ್ತುವರಿದಿದ್ದು ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ.  ಬಾಂಬ್‌ ನಿಷ್ಕ್ರೀಯ ದಳ ವೂ ಸ್ಥಳದಲ್ಲಿದೆ.

ವಿಮಾನದಲ್ಲಿದ್ದ ಸುಮಾರು 148 ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದ್ದು, ಅವರ ಬ್ಯಾಗ್‌ಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ.

1.45 ಕ್ಕೆ ವಿಮಾನವನ್ನು ಲ್ಯಾಂಡ್‌ ಮಾಡಲಾಗಿದ್ದು ವ್ಯಾಪಕ ತಪಾಸಣೆ ನಡೆಸಲಾಗುತ್ತಿದೆ. ಇದುವರೆಗೆ ಯಾವುದೇ ಸ್ಪೋಟಕ ಪತ್ತೆಯಾದ ಬಗ್ಗೆ ವರದಿಯಾಗಿಲ್ಲ.

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.

No Comments

Leave A Comment