Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ದನಗಳ್ಳ ಎಂದು ಶಂಕಿಸಿ ಒಬ್ಬನನ್ನು ಕೊಂದ ಜನರ ಗುಂಪು

Cowsಗೌಹಾಟಿ: ದನಗಳ್ಳ ಎಂದು ಶಂಕಿಸಿ ಒಬ್ಬನನ್ನು ಜನರ ಗುಂಪು ಕೊಂದು ಅವನ ವಾಹನಕ್ಕೆ ಬೆಂಕಿ ಹಚ್ಚಿದ ಘಟನೆ ಅಸ್ಸಾಮಿನ ಗೋಲಾಘಾಟ್ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ೭೩ ನ್ನು ಈ ಗುಂಪು ತಡೆ ಹಾಕಿ, ಶಂಕಿತ ದನಗಳ್ಳನ ಸಹಚರರನ್ನು ಬಂಧಿಸಬೇಕೆಂದು ಪೊಲೀಸರನ್ನು ಆಗ್ರಹಿಸಿದೆ.

ಆರು ಹಸುಗಳನ್ನು ಕೊಂಡೊಯ್ಯುತ್ತಿದ್ದ ವಾಹನವನ್ನು ಅಡ್ಡಗಡ್ಡಿದ ಕೆಲವು ಪ್ರಾದೇಶಿಕ ನಿವಾಸಿಗಳು ನಡುರಾತ್ರಿ ಸುಮಾರು ೨ ಘಂಟೆಗೆ ಈ ಕೃತ್ಯವನ್ನು ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

“ಜನರು ಹಸುಗಳನ್ನು ಕೊಂದದ್ದಕ್ಕೆ ರಸೀದಿಯನ್ನು ತೋರಿಸುವಂತೆ ಕೇಳಿದ್ದಾರೆ. ರಸೀದಿಯನ್ನು ತೋರಿಸದಿದ್ದಕ್ಕೆ ಚಾಲಕನನ್ನು ಹಸುಗಳ್ಳ ಎಂದು ಶಂಕಿಸಿ ಜನರು ಅವನ ಮೇಲೆ ದಾಳಿ ಮಾಡಿದ ಪರಿಣಾಮವಾಗಿ ಅವನು ಮೃತಪಟ್ಟಿದ್ದಾನೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೃತ ಮನುಷ್ಯನನ್ನು ಜುಂತಿ ಅಲಿ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಪ್ರಕರಣವನ್ನು ದಾಖಲಿಸಲಾಗಿದೆ.

No Comments

Leave A Comment