Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಬ್ರಹ್ಮಾವರ:ಕ್ರಿಕೆಟ್ ಆಟವಾಡಿ ಈಜಲುಹೋದ ಕಾಲೇಜು ಯುವಕನ ಸಾವು

anishಬ್ರಹ್ಮಾವರ: ಈಜಲು ತೆರಳಿದ ಯುವಕನೋರ್ವ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಬ್ರಹ್ಮಾವರ ಪೋಲಿಸ್ ಠಾಣಾ ವ್ಯಾಪ್ತಿಯ ಬಾರ್ಕೂರಿನಲ್ಲಿ ಭಾನುವಾರ ನಡೆದಿದೆ.

ಮೃತ ಯುವಕನನ್ನು ಬಾರ್ಕೂರು ಹೊಸಾಳ ನಿವಾಸಿ ಆಲ್ಫೋನ್ಸ್ ಮತ್ತು ಸಬಿತಾ ಪಿಕಾರ್ಡೊ ದಂಪತಿಗಳ ಹಿರಿಯ ಮಗ ಅನೀಶ್ ಪಿಕಾರ್ಡೊ (16) ಎಂದು ಗುರುತಿಸಲಾಗಿದೆ.

ಮೃತ ಅನೀಶ್ ಪಿಕಾರ್ಡೊ ಭಾನುವಾರದ ಬೆಳಗ್ಗಿನ ಚರ್ಚಿನ ಪೂಜೆ ಮುಗಿಸಿ ತನ್ನ ಚರ್ಚಿನ ಇತರ ಯುವಕರೊಂದಿಗೆ ಬ್ರಹ್ಮಾವರದಲ್ಲಿ ಆಯೋಜಿಸಿದ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಲು ತೆರಳಿದ್ದು, ಮಧ್ಯಾಹ್ನ ಊಟವನ್ನು ಮುಗಿಸಿ ಬಾರ್ಕೂರಿನ ಹೊಸಾಳ ಸಮೀಪದ ತನ್ನ ಮನೆಯಿಂದ ಅನತಿ ದೂರದಲ್ಲಿ ಎಲ್ಲಾ ಗೆಳೆಯರೊಂದಿಗೆ ಈಜಾಡಲು ಹೋಗಿದ್ದರು ಎನ್ನಲಾಗಿದೆ. ಎಲ್ಲಾ ಯುವಕರು ಈಜಾಡಲು ನದಿ ಇಳಿದಿದ್ದು, ಸರಿಯಾಗಿ ಈಜಲು ಬರದಿದ್ದ ಅನಿಶ್ ನೀರಿಗೆ ಈಳಿದ ಕೆಲವೇ ನಿಮಿಷಗಳಲ್ಲಿ ನೀರಿನಲ್ಲಿ ಮುಳುಗಿದ್ದು ಆತನನ್ನು ಬದುಕಿಸುವ ಗೆಳೆಯರ ಪ್ರಯತ್ನ ವಿಫಲವಾಯಿತು. ಕೂಡಲೇ ಸ್ಥಳೀಯರು ಸೇರಿ ಶವವನ್ನು ಮೇಲೆತ್ತಿದ್ದರು.

ಮೃತ ಅನಿಶ್ ಬಾರ್ಕೂರು ಸೈಂಟ್ ಪೀಟರ್ಸ್ ಚರ್ಚಿನ ಪ್ರತಿಭಾನ್ವಿತ ಯುವಕನಾಗಿದ್ದು, ಚರ್ಚಿನ ವೈಸಿಎಸ್ ಸಂಘಟನೆಯ ಮಾಜಿ ಅಧ್ಯಕ್ಷರಾಗಿದ್ದು, ಮಣಿಪಾಲದಲ್ಲಿ ಡಿಪ್ಲೋಮಾ ಶಿಕ್ಷಣವನ್ನು ಪಡೆಯುತ್ತಿದ್ದರು. ಮೃತ ಅನಿಶ್ ತಂದೆ ಅಲ್ಫೋನ್ಸ್ , ತಾಯಿ ಸಬಿತಾ, ಹಾಗೂ ಸಹೋದರನನ್ನು ಅಗಲಿದ್ದಾರೆ.

ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No Comments

Leave A Comment