Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ರಸ್ತೆ ಅಪಘಾತ: ಉದ್ಯಮಿ ಬಿಜಿ ಪಾಟೀಲ್ ಪುತ್ರ ಸೇರಿ 3 ಸಾವು

Accidentಸೊಲ್ಲಾಪುರ: ಪಂಡರಾಪುರದಲ್ಲಿರುವ ಸ್ನೇಹಿತರ ಕಾರ್ಖಾನೆಗೆ ಭೇಟಿ ನೀಡಿ ಕಲಬುರಗಿಗೆ ವಾಪಸ್ ಆಗುತ್ತಿದ್ದ ವೇಳೆ ಉದ್ಯಮಿ ಬಿಜಿ ಪಾಟೀಲ್ ಅವರ ಪುತ್ರನ ಕಾರು ಅಪಘಾತಕ್ಕೀಡಾಗಿದ್ದು ಮೂವರು ಮೃತಪಟ್ಟಿದ್ದಾರೆ.

ಮಹಾರಾಷ್ಟ್ರದ ಸೊಲ್ಲಾಪುರದ ಬಳಿ ಕೆಎ 32, ಡಿ 777 ಸಂಖ್ಯೆ ಫಾರ್ಚುನರ್ ಕಾರು ಹಾಗೂ ಕ್ಯಾಂಟರ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಇದರಲ್ಲಿದ್ದ ಬಿಜಿ ಪಾಟೀಲ್ ಅವರ ಪುತ್ರ 33 ವರ್ಷದ ಅಮಿತ್ ಪಾಟೀಲ್, ವ್ಯವಸ್ಥಾಪಕ 45 ವರ್ಷದ ಸಂತೋಷ್ ಹಾಗೂ 50 ಸುಭಾಷ್ ಕೋರ್ವಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಪಘಾತದ ವೇಳೆ ಕಾರು ಚಾಲಕ ಶರಣುಗೆ ಎಂಬುವರು ಕಾರು ಚಾಲನೆ ಮಾಡದೇ ಬಿಜಿ ಪಾಟೀಲ್ ಅವರ ಪುತ್ರ ಅಮಿತ್ ಪಾಟೀಲ್ ಕಾರು ಚಲಾಯಿಸುತ್ದಿದ್ದರು ಎಂದು ತಿಳಿದುಬಂದಿದೆ. ಇದೇ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಅಪಘಾತದಲ್ಲಿ ಶರಣುಗೆ ತೀವ್ರ ಗಾಯಗಳಾಗಿದ್ದು, ಸೊಲ್ಲಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

No Comments

Leave A Comment