Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ದಾವೂದ್ ನನ್ನು ಕರೆ ತರುವ ವಿಚಾರ; ಬಾಯಿ ಮಾತಿಗಿಂತ, ಕೃತಿ ಮುಖ್ಯ: ಸಾಧ್ವಿ

Sadhvi-Niranjan-Jyotiಅಹಮದಾಬಾದ್: ಭೂಗತ ಪಾತಕಿ ದಾವೂದ್ ಇಬ್ರಾಹೀಂನನ್ನು ಭಾರತಕ್ಕೆ ವಾಪಸ್‌ ಕರೆ ತರುವ ವಿಚಾರ ಮಾತನಾಡುವುದಲ್ಲ, ಮಾಡುವ ವಿಚಾರ ಎಂದು ಕೇಂದ್ರ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಅವರು ತಿಳಿಸಿದ್ದಾರೆ.

ದಾವೂದ್ ನನ್ನು ಹಿಡಿಯಲಾಗದು ಎಂದು ದಾವೂದ್ ನ ಆಪ್ತ ಚೋಟಾ ಶಕೀಲ್ ಹೇಳಿಕೆ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಸಾಧ್ವಿ ಅವರು, ದಾವೂದ್ ಕುರಿತಂತೆ ಸಾಕಷ್ಟು ಮಾತನಾಡಿದ್ದು ಆಗಿದೆ ಮುಂದೇನಿದ್ದರು ಮಾಡುವ ವಿಚಾರ ಮಾತನಾಡುವುದಲ್ಲ ಎಂದು ಹೇಳಿದ್ದಾರೆ.

ದಾವೂದ್ ಶರಣಾಗಲು ಬಯಸಿದ್ದ ಎಂಬ ವಿಚಾರವನ್ನು ಖ್ಯಾತ ಹಿರಿಯ ವಕೀಲ ರಾಂ ಜೇಠ್ಮಲಾನಿ ಅವರು ಹೇಳಿದ್ದರು. ಆದರೆ ಆಗಿನ ಮಹಾರಾಷ್ಟ್ರ ಮುಖ್ಯಮಂತ್ರಿ ಶರದ್‌ ಪವಾರ್ ಅವರು ಅದಕ್ಕೆ ಒಪ್ಪಿರಲಿಲ್ಲ ಎಂದೂ ಅವರು ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಪವಾರ್, ‘ಆತನ ಶರಣಾಗತಿ ವಿಚಾರವನ್ನು ಜೇಠ್ಮಲಾನಿ ಅವರು ಹೇಳಿದ್ದರು. ಆದರೆ, ಆತನ ಷರತ್ತುಗಳು ಮನ್ನಿಸಲು ಸಾಧ್ಯವಿರಲಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದರು.

No Comments

Leave A Comment