Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

‘ಭಟ್ಕಳ್ ಮೊಬೈಲ್ ಕರೆ ಸತ್ಯಕ್ಕೆ ದೂರ, ಜೈಲಿನಿಂದ ಪರಾರಿ ಸಂಚು ಸುಳ್ಳು’

yasin-bhatkalಹೈದರಾಬಾದ್: ಹೈದ್ರಾಬಾದ್ ಚರ್ಲಾಪಲ್ಲಿ ಜೈಲಿನಲ್ಲಿರುವ ಇಂಡಿಯನ್ ಮುಜಾಹಿದೀನ್ ಉಗ್ರ ಯಾಸಿನ್ ಭಟ್ಕಳ್ ಜೈಲಿನಿಂದಲೇ ತನ್ನ ಪತ್ನಿಗೆ ಮೊಬೈಲ್ ಕರೆ ಮಾಡಿದ್ದಾನೆ ಎಂಬ ವರದಿಯನ್ನು ತೆಲಂಗಾಣ ಜೈಲಿನ ಅಧಿಕಾರಿಗಳು ಅಲ್ಲಗಳೆದಿದ್ದಾರೆ.

ವರದಿಗಳ ಪ್ರಕಾರ, ಯಾಸಿನ್ ಭಟ್ಕಳ್ ಚರ್ಲಾಪಲ್ಲಿ ಜೈಲಿನಿಂದಲೇ ತನ್ನ ಪತ್ನಿಗೆ ಮೊಬೈಲ್ ಕರೆ ಮಾಡಿದ್ದ ಸಂದರ್ಭದಲ್ಲಿ ಡಮಾಸ್ಕಸ್ ನಲ್ಲಿರುವ (ಐಸಿಸ್) ತನ್ನ ಗೆಳೆಯರ ನೆರವಿನಿಂದ ಶೀಘ್ರವೇ ಜೈಲಿನಿಂದ ಹೊರಬರುವುದಾಗಿ ತಿಳಿಸಿದ್ದ ಎಂದು ಹೇಳಲಾಗಿತ್ತು.

ಆದರೆ ಚರ್ಲಾಪಲ್ಲಿ ಜೈಲಿನೊಳಗಿನಿಂದ ಭಟ್ಕಳ್ ಮೊಬೈಲ್ ಉಪಯೋಗಿಸಿ ಕರೆ ಮಾಡಿದ್ದಾನೆ ಎಂಬ ಆರೋಪ ಆಧಾರ ರಹಿತ, ಸತ್ಯಕ್ಕೆ ದೂರವಾದದ್ದು ಎಂದು ತೆಲಂಗಾಣ ಜೈಲಿನ ಡಿಐಜಿ ನರಸಿಂಹ ಸುದ್ದಿಗಾರರ ಜೊತೆ ಮಾತನಾಡುತ್ತ ಸ್ಪಷ್ಟಪಡಿಸಿದ್ದಾರೆ.

ಜೈಲಿನ ಒಳಗೆ ಬರುವವರನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿ ಒಳಗೆ ಬಿಡಲಾಗುತ್ತದೆ. ಹಾಗಾಗಿ ಭಟ್ಕಳ್ ಗೆ ಮೊಬೈಲ್ ಫೋನ್ ಹೇಗೆ ಸಿಕ್ಕಿದೆ ಎಂಬ ಪ್ರಶ್ನೆ ಬರಲು ಸಾಧ್ಯ ಎಂದಿದ್ದಾರೆ. 2013ರಲ್ಲಿ ದಿಲ್ ಸುಖ್ ನಗರದಲ್ಲಿ ನಡೆದ ಅವಳಿ ಸ್ಫೋಟ ಪ್ರಕರಣದಲ್ಲಿ ಭಟ್ಕಳ್ ಆರೋಪಿಯಾಗಿದ್ದಾನೆ. ಆ ನಿಟ್ಟಿನಲ್ಲಿ ಯಾಸಿನ್ ಚರ್ಲಾಪಲ್ಲಿ ಸೆಂಟ್ರಲ್ ಜೈಲಿನಲ್ಲಿದ್ದಾನೆ.

ಕೋರ್ಟ್ ಆದೇಶದ ಮೇರೆಗೆ ಈ ವರ್ಷದ ಫೆಬ್ರುವರಿ ತಿಂಗಳಿನಿಂದ ಭಟ್ಕಳ್ ಗೆ ದೂರವಾಣಿ ಸೌಲಭ್ಯ ನೀಡಲಾಗಿದೆ. ಕುಟುಂಬ ಸದಸ್ಯರ ಜೊತೆ ವಾರಕ್ಕೆ ಎರಡು ಸಲ ಮಾತನಾಡಲು ಅವಕಾಶ ಇದೆ. ಹಾಗಾಗಿ ಭಟ್ಕಳ್ ದೂರವಾಣಿ ಸೌಲಭ್ಯ ಹೊಂದಿದ್ದಾನೆ. ಯಾಸಿನ್ ತನ್ನ ತಾಯಿ ಮತ್ತು ಪತ್ನಿ ಜೊತೆ 27 ಬಾರಿ ಮಾತನಾಡುತ್ತಾನೆ. ಆದರೆ ಆ ಸಂಭಾಷಣೆಯಲ್ಲಿ ಡಮಾಸ್ಕಸ್ ಅಥವಾ ಐಸಿಸ್ ಬಗ್ಗೆ ಮಾತನಾಡಿರಲಿಲ್ಲ. ಅಷ್ಟೇ ಅಲ್ಲ ಉಗ್ರಗಾಮಿ ಸಂಘಟನೆಗಳು ಭಟ್ಕಳ್ ನನ್ನು ಬಿಡುಗಡೆಗೊಳಿಸುವ ಸಂಚು ರೂಪಿಸಿದ ಮಾಹಿತಿ ಸುಳ್ಳು ಎಂದು ವಿವರಿಸಿದ್ದಾರೆ.

ಈ ದೂರವಾಣಿಯಿಂದ ಕೇವಲ 5 ನಿಮಿಷಗಳ ಕಾಲ ಮಾತ್ರ ಮಾತನಾಡಬಹುದಾಗಿದೆ. ನಂತರ ಸ್ವಯಂಚಾಲಿತವಾಗಿ ಕರೆ ಕಟ್ ಆಗುತ್ತದೆ. ಅಲ್ಲದೇ ಇಡೀ ಸಂಭಾಷಣೆ ದಾಖಲಾಗುತ್ತದೆ ಎಂದು ನರಸಿಂಹ ವಿವರಿಸಿದ್ದಾರೆ. ಈ ದಾಖಲೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ನೀಡಿರುವುದಾಗಿ ಹೇಳಿದರು.

ಈ ಮಧ್ಯೆ, “ಭಟ್ಕಳ್‌ಗೆ ಐಸಿಸ್‌ ನಂಟು ಇರಲಿಕ್ಕಿಲ್ಲ. ಪತ್ನಿಯೊಂದಿಗೆ ಆತ ಐಸಿಸ್‌ ಬಗ್ಗೆ ಮಾತನಾಡಿದ್ದು ಕೇವಲ ಸಂಚಲನ ಮೂಡಿಸುವ ಸಲುವಾಗಿ ಆಗಿರಬಹುದು’ ಎಂಬಂತಹ ತಜ್ಞರ ವಿಶ್ಲೇಷಣೆಗಳೂ ಕೇಳಿ ಬಂದಿವೆ.

No Comments

Leave A Comment