Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಸಮಾಜದ ಆರೋಗ್ಯ ಕಾಪಾಡುವುದು ವೈದ್ಯರುಗಳ ಕರ್ತವ್ಯ. – ಡಾ| ವಿನೋದ್ ಭಟ್

1ಉಡುಪಿ ಜಯಂಟ್ಸ್ ಗ್ರೂಪ್ ವತಿಯಿಂದ 13ನೇ ವರ್ಷದ ವೈದ್ಯರ ದಿನಾಚರಣೆಯು ಶನಿವಾರ ಹೊಟೇಲ್ ಕಿದಿಯೂರಿನಲ್ಲಿ ಜರುಗಿತು.

ಮುಖ್ಯ ಅತಿಥಿಯಾಗಿ ಮಣಿಪಾಲ ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಾದ ಡಾ. ವಿನೋದ್ ಭಟ್ ವೈದ್ಯರುಗಳನ್ನು ಗೌರವಿಸಿದರು.2

ಕಠಿಣ ಪರಿಶ್ರಮ ಮತ್ತು ಸೇವಾ ಮನೋಭಾವ ವೈದ್ಯರ ಜೀವನದಲ್ಲಿ ಅಳವಡಿಸಿಕೊಂಡಿರಬೇಕು. ವಿಶ್ವಾಸ ಮತ್ತು ಅಚಲ ನಂಬಿಕೆಯೇ ವೈದ್ಯರ ಮತ್ತು ರೋಗಿಗಳ ನಡುವಿನ ಕೊಂಡಿಯಾಗಿದೆ. ಹೊಸ ಹೊಸ ರೋಗಗಳ ಬಗ್ಗೆ ಬೆಳಕು ಚೆಲ್ಲಿ ಅರಿವು ಮೂಡಿಸುವುದು ಮತ್ತು ಗ್ರಾಮೀಣ ಪ್ರದೇಶಗಳ ವೈದ್ಯರನ್ನು ಗುರುತಿಸುವ ಕಾರ್ಯ ಜಯಂಟ್ಸ್ ಸಂಸ್ಥೆಯಿಂದ ನಡೆಯಲಿ ಎಂದು ಜಯಂಟ್ಸ್ ಸಂಸ್ಥೆಯ ಕಾರ್ಯವೈಖರಿಯನ್ನು ಪ್ರಶಂಸಿಸಿದರು. ಈ ಮೂಲಕ ವೈದ್ಯರ ಹಾಗೂ ರೋಗಿಗಳ ಮಧ್ಯೆ ಬಾಂಧವ್ಯವನ್ನು ಹೆಚ್ಚಿಸುವ ವೈದ್ಯರ ದಿನಾಚರಣೆಯನ್ನು ನಿರಂತರವಾಗಿ ನಡೆಸುತ್ತಿರುವ ಜಯಂಟ್ಸ್ ಸಂಸ್ಥೆಯನ್ನು ಅಭಿನಂದಿಸಿದರು. ಪರೋಪಕಾರಾರ್ಥಂ ಇದಂ ಶರೀರಂ ಎನ್ನುವ ಧ್ಯೇಯದೊಂದಿಗೆ ಘನತೆ, ಪ್ರಾಮಾಣಿಕತೆ ಸತತ ಪ್ರಯತ್ನದಿಂದ ರೋಗಿಗಳ ಚಿಂತನೆಯನ್ನು ಹಲವು ದಶಕಗಳ ಕಾಲ ಸೇವೆಯನ್ನು ನೀಡುತ್ತಿರುವ ವೈದ್ಯ ಕುಟುಂಬವನ್ನು ಗುರುತಿಸಿ ಸನ್ಮಾನಿಸುತ್ತಿರುವುದು ತುಂಬಾ ಶ್ಲಾಘನೀಯ ಎಂದು ತಿಳಿಸಿದರು.

ಡಾ.ವಿನೋದ್ ಭಟ್ ರವರು ಜಯಂಟ್ಸ್ ಸಂಸ್ಥೆಯ ಪರವಾಗಿ ಸಮಾಜ ಸೇವೆಗೈದ ಡಾ.ಅರವಿಂದ ನಾಯಕ್, ಡಾ.ರಫೀಕ್ ಅಹ್ಮದ್ (ಯೋಗ ಮತ್ತು ಪ್ರಕೃತಿ ಚಿಕಿತ್ಸೆ), ಡಾ.ಶ್ರೀನಿವಾಸ ಆಚಾರ್ಯ (ಆಯುರ್ವೇದ) ಇವರುಗಳನ್ನು ಗೌರವಿಸಿದರು.3

ಉಡುಪಿ ಜಯಂಟ್ಸ್ ಗ್ರೂಪ್ ವತಿಯು ಕಳೆದ 13 ವರ್ಷಗಳಿಂದ ವೈದ್ಯರ ದಿನಾಚರಣೆಯನ್ನು ನಡೆಸುತ್ತಾ ಬಂದಿದೆ. ವೈದ್ಯ ಕ್ಷೇತ್ರದ ಪಿತಾಮಹರಾದ ಡಾ.ಬಿ. ಸಿ. ರಾಯ್‌ರವರ ಹುಟ್ಟುಹಬ್ಬದ ಅಂಗವಾಗಿ ವೈದ್ಯರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.ಇಂದು ವೈದ್ಯಕೀಯ ಕ್ಷೇತ್ರದ ನೂರಾರು ದೂರುಗಳಿದ್ದರೂ ಕೋಟಿ ಕೋಟಿ ಜನರ ಪ್ರಾಣ ಉಳಿಸಿದ ಕೀರ್ತಿಯನ್ನು ಅವರಿಂದ ಕಸಿದುಕೊಳ್ಳಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ವೈದ್ಯೋ ನಾರಾಯಣ ಹರಿ ಎಂಬ ವಾಕ್ಯವನ್ನು ಇಂದಿನ ವೈದ್ಯಲೋಕ ತೋರಿಸಿಕೊಟ್ಟಿದೆ. ಎಂದು ಜಯಂಟ್ಸ್‌ನ ವಲಯ ನಿರ್ದೇಶಕರಾದ ಶ್ರೀ ದೇವದಾಸ್ ಕಾಮತ್ ಪ್ರಾಸ್ತಾವಿಕ ಭಾಷಣದಲ್ಲಿ ನುಡಿದರು.

ಸನ್ಮಾನಿತರ ಅನಿಸಿಕೆ :ಡಾ.ಅರವಿಂದ ನಾಯಕ್ ಮಾತನಾಡುತ್ತಾ ಸಮಾಜ ಸೇವೆಯಲ್ಲಿ ತೊಡಗಿದ ವೈದ್ಯರನ್ನು ಗುರುತಿಸಿ, ಗೌರವಾರ್ಪಣೆ ನೀಡಿ ಸತ್ಕರಿಸಿದ್ದು ತುಂಬಾ ಸಂತೋಷ ತಂದುಕೊಟ್ಟಿದೆ.

ಡಾ.ರಫೀಕ್ ಅಹ್ಮದ್ ತಮ್ಮ ಅನಿಸಿಕೆಯಲ್ಲಿ ಜಯಂಟ್ಸ್‌ನಂತಹ ದೊಡ್ಡ ಸಂಸ್ಥೆ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಮಹತ್ವವವನ್ನು ಅರಿತು ನನ್ನನ್ನು ಗೌರವಿಸಿದ್ದು ಈ ಎರಡು ಕ್ಷೇತ್ರದ ವೈದ್ಯರನ್ನು ಗೌರವಿಸಿದಂತಾಗಿದೆ.

ಡಾ.ಶ್ರೀನಿವಾಸ ಆಚಾರ್ಯ ಅಂಬಲಪಾಡಿ ಮಾತನಾಡುತ್ತಾ ಹಿಂದಿನ ವೇದಕಾಲದಿಂದಲೂ ಆಯುರ್ವೇದ ಚಿಕಿತ್ಸೆ ಪದ್ಧತಿಯನ್ನು ದೇಶಾದ್ಯಂತ ರೂಢಿಯಲ್ಲಿದೆ. ಪ್ರಸ್ತುತ ಅವಧಿಯಲ್ಲಿ ಅತೀ ಹೆಚ್ಚು ಜನ ಈ ಪದ್ಧತಿಯನ್ನು ಅವಲಂಭಿಸಿರುತ್ತಾರೆ. ಈ ಗೌರವವನ್ನು ಆಯುರ್ವೇದ ಕ್ಷೇತ್ರಕ್ಕೆ ಸಮರ್ಪಣೆ ಮಾಡುವೆ ಎಂದು ತಿಳಿಸಿದರು.

ಜಯಂಟ್ಸ್‌ನ ಕೇಂದ್ರ ಸಮಿತಿಯ ಸದಸ್ಯರಾದ ದಿನಕರ ಅಮೀನ್ ಮಾತನಾಡುತ್ತಾ ವೈದ್ಯಕೀಯ ಕ್ಷೇತ್ರದಲ್ಲಿ ಪ್ರಾಚೀನ ಕಾಲದಿಂದಲೂ ಪ್ರಸಿದ್ಧಿ ಪಡೆದ ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸೆ ಹಾಗೂ ವಿಜ್ಞಾನದಿಂದ ಆರಂಭಗೊಂಡ ಅಲೋಪತಿ ವೈದ್ಯರನ್ನು ಒಂದೇ ವೇದಿಕೆಯಲ್ಲಿ ಗೌರವಾರ್ಪಣೆ ಮಾಡಿರುವುದು ತುಂಬಾ ಸಂತೋಷ ತಂದಿದೆ. ಇಂತಹ ಕಾರ್ಯ ಜಯಂಟ್ಸ್ ಸಂಸ್ಥೆಯಿಂದ ನಿರಂತರ ನಡೆಯಲಿ. ಈ ಸಂದರ್ಭದಲ್ಲಿ ಜಯಂಟ್ಸ್ ಸಂಸ್ಥೆಯಲ್ಲಿ ೨೦ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ೧೦ ಸದಸ್ಯರಿಗೆ ಜಯಂಟ್ಸ್‌ನ ವಿಶೇಷ ಪದಕವನ್ನು ನೀಡಿ ಗೌರವಿಸಲಾಯಿತು.
ಮುಖ್ಯ ಅತಿಥಿಯಾದ ಡಾ. ವಿನೋದ್ ಭಟ್ ಮಣಿಪಾಲ ಮಾಹೆಯ ನೂತನ ಉಪ ಕುಲಪತಿಗಳಾದ ಇವರನ್ನು ಈ ಸಂದರ್ಭದಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಜಯಂಟ್ಸ್ ಗ್ರೂಪ್‌ನ ಅಧ್ಯಕ್ಷರನ್ನು ವಿಶ್ವನಾಥ ಶೆಣೈ ಸ್ವಾಗತಿಸಿದರು.

ಗಣೇಶ್ ಕೆ. ಆರ್. (ಕಾರ್ಯದರ್ಶಿ) ವಂದನಾರ್ಪಣೆಗೈದರು. ಕಾರ್ಯಕ್ರಮ ನಿರೂಪಣೆಯನ್ನು ಶ್ರೀಮತಿ ಉಷಾ, ಶ್ರೀಮತಿ ರೇಖಾ, ಶ್ರೀಮತಿ ಅಮಿತಾಂಜಲಿ ನಡೆಸಿಕೊಟ್ಟರು.

88

 

No Comments

Leave A Comment